ವಾರಸ್ದಾರಗೆ ಇಂದು ಚಿತ್ರಾಲಿ ಎಂಟ್ರಿ
Team Udayavani, Feb 8, 2017, 11:14 AM IST
ಡ್ರಾಮಾ ಜೂನಿಯರ್ ಮೂಲಕ ಎಲ್ಲರ ಮೆಚ್ಚುಗೆ ಪಡೆದಿರುವ ಬಾಲನಟಿ ಚಿತ್ರಾಲಿ ಜೀ ಕನ್ನಡ ವಾಹಿನಿಯಲ್ಲಿ ಸುದೀಪ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ “ವಾರಸ್ದಾರ’ ಧಾರಾವಾಹಿಯಲ್ಲಿ ನಟಿಸಲಿದ್ದಾರೆಂಬ ವಿಷಯ ನಿಮಗೆ ಗೊತ್ತೇ ಇದೆ.
ಈಗಾಗಲೇ ಧಾರಾವಾಹಿ ಆರಂಭವಾಗಿದ್ದು, ಚಿತ್ರಾಲಿ ಎಂಟ್ರಿಕೊಟ್ಟಿರಲಿಲ್ಲ. ಇಂದಿನ ಎಪಿಸೋಡ್ ಮೂಲಕ ಚಿತ್ರಾಲಿ “ವಾರಸ್ದಾರ’ಕ್ಕೆ ಎಂಟ್ರಿಕೊಡಲಿದ್ದಾರೆ. ಚಿತ್ರಾಲಿ ಸಿಂಹವಂಶದ ಹೆಣ್ಣು ವಾರಸ್ದಾರಳಾಗಿ ಕಿರುತೆರೆಯಲ್ಲಿ ಪ್ರತ್ಯಕ್ಷಳಾಗಲಿದ್ದಾಳೆ. ಶಿವಪುರ ಎಂಬ ಪುಟ್ಟಗ್ರಾಮದಲ್ಲಿ ನಡೆದಂಥ ಕಥೆ ಇದಾಗಿದ್ದು ಅಲ್ಲಿನ 2 ಮನೆತನಗಳ ಕಥೆಯನ್ನು ಈ ಧಾರಾವಾಹಿ ಹೇಳಲಿದೆ.
ಅದರಲ್ಲಿ ಸಿಂಹವಂಶದ ಕುಟುಂಬದಲ್ಲಿ ನಡೆಯುವ ಹಲವಾರು ಘಟನೆಗಳನ್ನು ಇಟ್ಟುಕೊಂಡು ಈ ಧಾರಾವಾಹಿಯನ್ನು ರೂಪಿಸಲಾಗಿದೆ. ಸಿಂಹವಂಶದ ಸೊಸೆಯಾದ ಭವಾನಿ ತಾನು ಹೆತ್ತ ಹೆಣ್ಣುಮಗುವನ್ನು ಉಳಿಸಿಕೊಳ್ಳಲು ಹೋರಾಡುವುದೇ ವಾರಸ್ದಾರ ಕಥೆಯ ಮುಖ್ಯ ತಿರುಳಾಗಿದೆ.
ತಾನು ಹೆತ್ತ ಮಗು ಹೆಣ್ಣಲ್ಲ, ಗಂಡು ಎಂದು ನಿರೂಪಿಸಲು ಆ ಮಗುವನ್ನು ಗಂಡು ಮಕ್ಕಳಂತೆಯೇ ಸಾಕುತ್ತಾಳೆ. ಯಜ್ಞ ಶೆಟ್ಟಿಯ ಮಗನಾಗಿ (ಮಗಳು) 5 ವರ್ಷದ ಪುಟ್ಟ ಹುಡುಗಿ ಚಿತ್ರಾಲಿ ತೇಜಪಾಲ್ ಅಭಿನಯಿಸುತ್ತಿದ್ದಾರೆ. “ವಾರಸ್ದಾರ’ ಧಾರಾವಾಹಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ರಾತ್ರಿ 7.30 ರಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.