“ಎರಡನೇ ಸಲ” ಸಿನಿಮಾದ ಎಲ್ಲಾ ಶೋ ಸ್ಥಗಿತ! ಏನಿದು ವಿವಾದ
Team Udayavani, Mar 7, 2017, 5:15 PM IST
ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ ಅವರ ಜೊತೆಗಿನ ಗೊಂದಲದ ಹಿನ್ನೆಲೆಯಲ್ಲಿ ಎರಡನೇ ಸಲ ಚಿತ್ರದ ಎಲ್ಲಾ ಶೋಗಳನ್ನು ಚಿತ್ರಮಂದಿರದಲ್ಲಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ನಿರ್ಮಾಪಕ ಯೋಗೀಶ್ ನಾರಾಯಣ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಾರ್ಚ್ 3ರಂದು ಎರಡನೇ ಚಿತ್ರ ಬಿಡುಗಡೆ ಆಗಿತ್ತು. ಆದರೆ ನಿರ್ದೇಶಕ ಗುರುಪ್ರಸಾದ್ ಅವರು ಚಿತ್ರದ ಪ್ರಚಾರಕ್ಕೂ ಬಂದಿಲ್ಲವಾಗಿತ್ತು. ಇದೀಗ ತುಂಬಾ ದುಃಖದಿಂದ ಸಿನಿಮಾವನ್ನು ಹಿಂಪಡೆಯುತ್ತಿದ್ದೇನೆ ಎಂದು ಹೇಳಿದರು.
ಬುಧವಾರ ವಾಣಿಜ್ಯ ಮಂಡಳಿಯಲ್ಲಿ ವಿವಾದದ ಸಂಬಂಧ ಸಭೆ ಇದೆ. ಸಭೆಯ ನಂತರ ಮುಂದಿನ ತೀರ್ಮಾನ ಪ್ರಕಟಿಸುವುದಾಗಿ ತಿಳಿಸಿದರು. ಗುರುಪ್ರಸಾದ್ ಅವರಿಂದಾಗಿ ಸಿನಿಮಾ ಅರ್ಧ ಸತ್ತಿದೆ. ಈಗ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿರುವಾಗಲೇ ಸಿನಿಮಾ ಶೋ ಸ್ಥಗಿತಗೊಳಿಸುವಂತಾಗಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.