ಕಿರಿಕ್ ಪಾರ್ಟಿಯಿಂದ ಬಂದ ದುಡ್ಡೆಲ್ಲವೂ ಚಿತ್ರಗಳಿಗೆ ಮೀಸಲು
Team Udayavani, Nov 13, 2017, 6:30 PM IST
“ಕಿರಿಕ್ ಪಾರ್ಟಿ’ ರೀಮೇಕ್ ಹಕ್ಕುಗಳಿಂದ ಬಂದ ಹಣವನ್ನು ಒಂದು ಅಕೌಂಟ್‌ಗೆ ಹಾಕಿ, ಆ ದುಡ್ಡಿನಿಂದ ರಕ್ಷಿತ್ ಶೆಟ್ಟಿ ತಮ್ಮ ಹೊಸ ಚಿತ್ರಗಳ ಬರಹಗಾರರಿಗೆ ಸಂಬಳ ಕೊಡುತ್ತಿರುವುದು ಗೊತ್ತಿರಬಹುದು. ಒಂದು ಚಿತ್ರಕ್ಕೆ ಬರಹಗಾರರು ಮುಖ್ಯವಾಗಿರುವುದರಿಂದ, ಅವರು ಚೆನ್ನಾಗಿರಬೇಕು ಎಂಬ ಕಾರಣಕ್ಕೆ ಇಂಥದ್ದೊಂದು ವ್ಯವಸ್ಥೆ ಮಾಡಿದ್ದಾಗಿ, ಖುದ್ದು ರಕ್ಷಿತ್ ಶೆಟ್ಟಿ ಈ ಹಿಂದೆ ಹೇಳಿಕೊಂಡಿದ್ದರು.
ಈಗ ಅವರು “ಕಿರಿಕ್ ಪಾರ್ಟಿ’ಯಿಂದ ಬಂದ ಹಣವನ್ನೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಚಿತ್ರರಂಗಕ್ಕೆ ವಿನಿಯೋಗಿಸುವುದಕ್ಕೆ ಯೋಚಿಸುತ್ತಿದ್ದಾರೆ. ಅದ್ಹೇಗೆ ಎಂಬ ಪ್ರಶ್ನೆ ಬರಬಹುದು. ಈಗಾಗಲೇ ಅವರು ಒಂದು ಪೋಸ್ಟ್ ಪ್ರೊಡಕ್ಷನ್ ಸ್ಟುಡಿಯೋವೊಂದನ್ನು ರಾಜರಾಜೇಶ್ವರಿ ಸ್ಟುಡಿಯೋದಲ್ಲಿ ಶುರು ಮಾಡಿದ್ದಾರೆ. ಜೊತೆಗೆ ಆ್ಯರಿ ಕ್ಯಾಮೆರಾ ಸೆಟಪ್ ಖರೀದಿಸಿದ್ದಾರೆ. ಮುಂದಿನ ದಿನಗಳಲ್ಲಿ ಒಂದೇ ಸೂರಿನಡಿ ಎಲ್ಲಾ ಕೆಲಸಗಳು ಆಗುವಂತಹ ಒಂದು ಸ್ಟುಡಿಯೋ ಕಟ್ಟಬೇಕು ಎಂಬುದು ಅವರ ಆಸೆ.
“ಈಗಿರುವ ಸ್ಟುಡಿಯೋದಲ್ಲಿ ಒಂದು ಫ್ಲೋರ್ ಬರಹಗಾರರಿಗಿದೆ. ಇನ್ನೊಂದು ಪೋಸ್ಟ್ ಪ್ರೊಡಕ್ಷನ್ ಸ್ಟುಡಿಯೋಗೆ ಮೀಸಲಿಟ್ಟಿದ್ದೇವೆ. ಸದ್ಯದಲ್ಲೇ ರಾಜರಾಜೇಶ್ವರಿ ನಗರದಲ್ಲಿ ಒಂದು ಸ್ವಂತ ಜಾಗ ಖರೀದಿಸಿ, ಅಲ್ಲಿ ಒಂದು ಸ್ವಂತ ಸ್ಟುಡಿಯೋ ಮಾಡುವಾಸೆ ಇದೆ. ಆ ಸ್ಟುಡಿಯೋದಲ್ಲಿ ಎಲ್ಲಾ ವ್ಯವಸ್ಥೆಗಳೂ ಇರಬೇಕು. ಒಂದು ಚಿತ್ರತಂಡ ಚಿತ್ರೀಕರಣ ಮುಗಿಸಿಕೊಂಡು, ಫೈನಲ್ ಕಾಪಿ ತೆಗೆದುಕೊಂಡು ಹೋಗುವಂತೆ ಎಲ್ಲಾ ವ್ಯವಸ್ಥೆಗಳು ಸಹ ಅಲ್ಲಿರಬೇಕು ಅಂತಾಸೆ.
ಅಲ್ಲೇ ಹತ್ತಿರದಲ್ಲಿ ಮನೆ ಮಾಡುವ ಯೋಚನೆಯೂ ಇದೆ. ಒಟ್ಟಿನಲ್ಲಿ “ಕಿರಿಕ್ ಪಾರ್ಟಿ’ಯಿಂದ ಬಂದ ಹಣವನ್ನೆಲ್ಲಾ ಚಿತ್ರಗಳಿಗೇ ಮೀಸಲಿಡಬೇಕು ಎಂಬುದು ನಮ್ಮ ಉದ್ದೇಶ’ ಎನ್ನುತ್ತಾರೆ ರಕ್ಷಿತ್. ಸರಿ, ಈ ಕಟ್ಟಡದಲ್ಲಿ ಎಷ್ಟು ಮಹಡಿಗಳಿರುತ್ತವೆ ಎಂದರೆ, “ಐದಾರು ಮಹಡಿಗಳಿರಬಹುದು. ಹಣ ಬರುತ್ತಿದ್ದಂತೆ, ಮಹಡಿಗಳೂ ಜಾಸ್ತಿಯಾಗಬಹುದು’ ಎಂದು ನಗುತ್ತಾರೆ ರಕ್ಷಿತ್ ಶೆಟ್ಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.