Sandalwood: ‘ಎವಿಡೆನ್ಸ್’ ಲಿರಿಕಲ್ ಸಾಂಗ್ ಬಿಡುಗಡೆ
Team Udayavani, Feb 21, 2024, 3:08 PM IST
ಕ್ರೈಂ-ಥ್ರಿಲ್ಲರ್ ತನಿಖಾ ಕಥಾಹಂದರ ಹೊಂದಿರುವ “ಎವಿಡೆನ್ಸ್’ ಸಿನಿಮಾ ತೆರೆಗೆ ಬರಲು ತಯಾರಾಗುತ್ತಿದೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿ, ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ “ಎವಿಡೆನ್ಸ್’ ಚಿತ್ರತಂಡ ಇತ್ತೀಚೆಗೆ ಸಿನಿಮಾದ “ಅಯ್ಯಯ್ಯೋ ಅರೆಮನಕೆ…’ ಎಂಬ ಮೊದಲ ಲಿರಿಕಲ್ ವಿಡಿಯೋವನ್ನು ಬಿಡುಗಡೆಗೊಳಿಸಿದೆ.
“ಶ್ರೀಧೃತಿ ಪ್ರೊಡಕ್ಷನ್ಸ್’ ಹಾಗೂ “ರೋಷಿರಾ ಪ್ರೊಡಕ್ಷನ್ಸ್’ ಲಾಂಛನದಲ್ಲಿ ಕೊಡ್ಲಾಡಿ ಸುರೇಂದ್ರ ಶೆಟ್ಟಿ, ಶ್ರೀನಿವಾಸ ಪ್ರಭು ಕೆ, ಕೆ. ಮಾದೇಶ್ (ಕೊಡಿಹಳ್ಳಿ), ನಟರಾಜ್ ಸಿ. ಎಸ್ (ಚನ್ನಸಂದ್ರ) ಸೇರಿ ನಿರ್ಮಿಸಿರುವ ಈ ಚಿತ್ರಕ್ಕೆ ಪ್ರವೀಣ ಸಿ. ಪಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.
ಇದೇ ವೇಳೆ ಮಾತನಾಡಿದ ನಿರ್ದೇಶಕ ಪ್ರವೀಣ್ ಸಿ. ಪಿ, “ಕೋವಿಡ್ ಸಮಯದಲ್ಲಿ ಕೇವಲ ಎರಡು ಪಾತ್ರಗಳನ್ನು ಇಟ್ಟುಕೊಂಡು ಈ ಸಿನಿಮಾ ಶುರು ಮಾಡಿದ್ದೆವು. ಆನಂತರ ನಿಧಾನವಾಗಿ ಅದಕ್ಕೆ ಒಂದಷ್ಟು ಹೊಸ ಪಾತ್ರಗಳು ಸೇರ್ಪಡೆಯಾದವು. ಸೂಸೈಡ್ ಕೇಸ್ ತನಿಖೆಯ ಸುತ್ತ “ಎವಿಡೆನ್ಸ್’ ಸಿನಿಮಾದ ಕಥೆ ಸಾಗುತ್ತದೆ. ಕೊಲೆಯೊಂದು ನಡೆದಾಗ ಅದರ ಸಾಕ್ಷಾಧಾರಗಳನ್ನು ಹುಡುಕುವ ಪ್ರಕ್ರಿಯೆಯನ್ನು ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿ ತೋರಿಸಲಾಗಿದೆ. ಜೊತೆಗೆ ತ್ರಿಕೋನ ಪ್ರೇಮಕಥಾಹಂದರ ಕೂಡ ಈ ಸಿನಿಮಾದಲ್ಲಿದೆ’ ಎಂದರು.
“ಎವಿಡೆನ್ಸ್’ ಸಿನಿಮಾದಲ್ಲಿ ರೋಬೋ ಗಣೇಶ್, ಮಾನಸ ಜೋಷಿ, ರಚಿತಾ, ಪೂಜಿತ ಬೋಬೆಗೌಡ, ಚಮಕ್ಚಂದ್ರ, ಶಶಿಧರ ಕೋಟೆ, ಮನಮೋಹನ್ ರೈ, ಆಕರ್ಷ್ ಆದಿತ್ಯ, ಕಾರ್ತಿಕ್ ವರ್ಣೇಕರ್, ರೇಣು ಶಿಕಾರಿ, ಪವನ್ ಸುರೇಶ್, ಶಿವಕುಮಾರ್ ಆರಾಧ್ಯ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು, ನೆಲಮಂಗಲ ಸುತ್ತಮುತ್ತ “ಎವಿಡೆನ್ಸ್’ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಅರವಿಂದ್ ಅಚ್ಚು, ಎಂ. ಎನ್. ರವೀಂದ್ರ ರಾವ್, ಪ್ರಶಾಂತ್ ಸಿ. ಪಿ. ರಮೇಶ್ ಕೆ, ಕಿಶೋರ್ ಬಾಬು ಮತ್ತು ನರಸಿಂಹಮೂರ್ತಿ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ. ಸಿನಿಮಾಕ್ಕೆ ರವಿ ಸುವರ್ಣ ಛಾಯಾಗ್ರಹಣ, ಶೇಷಾಚಲ ಕುಲಕರ್ಣಿ ಸಂಕಲನವಿದೆ. ಸಿನಿಮಾದ ನಾಲ್ಕು ಹಾಡುಗಳಿಗೆ ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.