ಕನ್ನಡ ಚಿತ್ರರಂಗದಲ್ಲಿ ಗರಿಗೆದರಿದ ನಿರೀಕ್ಷೆ
ತಮಿಳುನಾಡು ಚಿತ್ರಮಂದಿರಗಳಲ್ಲಿ 100% ಸೀಟು ಭರ್ತಿಗೆ ಅವಕಾಶ
Team Udayavani, Jan 5, 2021, 11:40 AM IST
ಕೋವಿಡ್ ಲಾಕ್‌ಡೌನ್ ಸಡಿಲಿಕೆಯಾದ ಬಳಿಕ ಸರ್ಕಾರ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಶೇ. 50 ರಷ್ಟು ಪ್ರೇಕ್ಷಕರ ಅನುಮತಿಗೆ ಅವಕಾಶ ಕಲ್ಪಿಸಿ, ಸಿನಿಮಾಗಳ ಬಿಡುಗಡೆಗೆ ಅನುಮತಿ ನೀಡಿತ್ತು. ಅದಾದ ಬಳಿಕ ಚಿತ್ರಮಂದಿಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ಇದೇ ಮಾರ್ಗಸೂಚಿ ಅನ್ವಯ ಶೇ. 50ರಷ್ಟು ಆಸನಗಳನ್ನು ಮಾತ್ರ ಪ್ರೇಕ್ಷಕರಿಗೆ ಕಲ್ಪಿಸಿ ಸಿನಿಮಾಗಳ ಪ್ರದರ್ಶನಕ್ಕೆ ಮುಂದಾಗಿದ್ದವು. ಇದರನಡುವೆಯೇ ಕೆಲ ತಿಂಗಳಿನಿಂದ ಚಿತ್ರ ಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಿಗೆ ವಿಧಿಸಿರುವ ಪ್ರೇಕ್ಷಕರಿಗೆ ಶೇ. 50ರಷ್ಟು ಪ್ರವೇಶ ನಿರ್ಬಂಧವನ್ನು ಹಿಂತೆಗೆಯುವಂತೆ,ಚಿತ್ರೋದ್ಯಮ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನುಒತ್ತಾಯಿಸುತ್ತ ಬಂದಿದೆ. ಇದೀಗ ಈನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವತಮಿಳುನಾಡು ಸರ್ಕಾರ, ತನ್ನ ರಾಜ್ಯದ ಚಿತ್ರಮಂದಿರಗಳಮತ್ತು ಮಲ್ಟಿಪ್ಲೆಕ್ಸ್‌ಗಳಿಗೆ ಅನ್ವಯವಾಗುತ್ತಿದ್ದ, ಈ ನಿಯಮವನ್ನು ಹಿಂತೆಗೆದುಕೊಂಡಿದೆ. ಜ. 10 ರಿಂದ ಅನ್ವಯವಾಗುವಂತೆ, ತಮಿಳುನಾಡಿನ ಎಲ್ಲ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಈ ಹಿಂದಿನಂತೆ ಶೇ. 100ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿದೆ. ತಮಿಳು ಚಿತ್ರೋದ್ಯಮ ಸೇರಿದಂತೆ, ದಕ್ಷಿಣ ಭಾರತದ ಬಹುತೇಕ ಎಲ್ಲ ಚಿತ್ರಮಂದಿರಗಳು ಮತ್ತುಬಾಲಿವುಡ್ ಕೂಡ ತಮಿಳುನಾಡು ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿವೆ.
ಇನ್ನು ಪಕ್ಕದ ತಮಿಳುನಾಡಿನಲ್ಲಿ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಿಗೆ ವಿಧಿಸಿದ್ದ ಶೇ. 50 ರಷ್ಟು ಪ್ರೇಕ್ಷಕರನಿರ್ಬಂಧ ತೆರವಾಗುತ್ತಿದ್ದಂತೆ, ಕರ್ನಾಟಕದಲ್ಲೂ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಿಗೆ ವಿಧಿಸಿರುವಈ ನಿರ್ಬಂಧ ಹಿಂತೆಗೆದುಕೊಳ್ಳಬಹುದು ಎಂಬ ನಿರೀಕ್ಷೆಕನ್ನಡ ಚತ್ರರಂಗದಲ್ಲೂ ಗರಿಗೆದರಿದೆ. ಈ ಬಗ್ಗೆಮಾತನಾಡಿರುವ ಚಿತ್ರರಂಗದ ಪ್ರಮುಖ ಗಣ್ಯರುಆದಷ್ಟು ಬೇಗ ಕರ್ನಾಟದಲ್ಲೂ ಚಿತ್ರಮಂದಿರಗಳು ಮತ್ತುಮಲ್ಟಿಪ್ಲೆಕ್ಸ್‌ಗಳಿಗೆ ವಿಧಿಸಿದ್ದ ಶೇ. 100ರಷ್ಟು ಪ್ರೇಕ್ಷಕರ ಪ್ರವೇಶಾತಿಗೆ ಅನುಮತಿ ನೀಡಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಕೆಜಿಎಫ್ ಟೈಮ್ಸ್ ಮೂಲಕ ಟೀಸರ್ ರಿಲೀಸ್ ಅನೌನ್ಸ್
ಈಗ ಸರ್ಕಾರ ಕೊಟ್ಟಿರುವ ಶೇ. 50ರಷ್ಟು ಪ್ರವೇಶದಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡಿ, ಹಾಕಿದ ಬಂಡವಾಳ ವಾಪಾಸ್ ಪಡೆಯುವುದು ಸಾಧ್ಯವೇ ಇಲ್ಲ. ಆದಷ್ಟು ಬೇಗ ಥಿಯೇಟರ್ ಮತ್ತುಮಲ್ಟಿಪ್ಲೆಕ್ಸ್‌ಗಳಲ್ಲಿ ನೂರಕ್ಕೆ ನೂರರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ಕೊಡಿ ಅನ್ನೋದು ಬಹಳ ದಿನಗಳಿಂದ ನಮ್ಮ ನಿರ್ಮಾಪಕರು, ಪ್ರದರ್ಶಕರ ಬೇಡಿಕೆ. ನಮಗಿಂತಮುಂಚೆ ಈಗ, ತಮಿಳುನಾಡು ಸರ್ಕಾರ ಅಲ್ಲಿರುವ ಶೇ.50ರಷ್ಟು ಪ್ರವೇಶ ನಿರ್ಬಂಧ ತೆಗೆದು ಹಾಕಿದೆ. ಇದುನಿಜಕ್ಕೂ ಸ್ವಾಗತಾರ್ಹ. ನಮ್ಮಲ್ಲೂ ಕೂಡಲೇ ಥಿಯೇಟರ್ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ನೂರರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ಕಲ್ಪಿಸಿಕೊಡಬೇಕು. – ಪ್ರವೀಣ್ ಕುಮಾರ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ
ನಮ್ಮ ನೂರಾರು ನಿರ್ಮಾಪಕರು ತಮ್ಮ ಸಿನಿಮಾ ರಿಲೀಸ್ ಮಾಡೋದಕ್ಕೆ ಕಾಯುತ್ತಿದ್ದಾರೆ. ಥಿಯೇಟರ್‌ಮತ್ತು ಮಲ್ಟಿಪ್ಲೆಕ್ಸ್‌ಗಳ ಪ್ರವೇಶಕ್ಕೆ ಪೂರ್ಣ ಪ್ರಮಾಣದಅನುಮತಿ ಸಿಕ್ಕರೆ ಬಹುತೇಕ ನಿರ್ಮಾಪಕರು ತಮ್ಮಸಿನಿಮಾಗಳನ್ನು ಬಿಡುಗಡೆ ಮಾಡಲಿದ್ದಾರೆ. ಸರ್ಕಾರಕ್ಕೆ ಈಬಗ್ಗೆ ಸೋಮವಾರ ಲಿಖೀತ ಮನವಿ ಸಲ್ಲಿಸಿದ್ದೇವೆ. ಇಂದು(ಮಂಗಳವಾರ) ಖುದ್ದಾಗಿ ಸಿ.ಎಂ ಅವರನ್ನು ಭೇಟಿ ಮಾಡಿ ಅನುಮತಿ ನೀಡುವಂತೆ ಮನವಿ ಮಾಡುವ ಯೋಚನೆ ಇದೆ. ಆದಷ್ಟು ಬೇಗ ನಮ್ಮಲ್ಲೂ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ ನೂರಕ್ಕೆ ನೂರರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ಸರ್ಕಾರ ಕೊಡುತ್ತದೆ ಎಂಬ ನಂಬಿಕೆ ಇದೆ. – ಡಿ.ಆರ್ ಜೈರಾಜ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ
ಶೇ. 50ರಷ್ಟು ಪ್ರವೇಶ ಇಟ್ಟುಕೊಂಡು ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್‌ಗಳನ್ನು ನಡೆಸುವುದು ಬಹಳ ಕಷ್ಟ.ಥಿಯೇಟರ್‌ಗಳ ನಿರ್ವಹಣೆಯನ್ನೂ ಮಾಡಲಾಗುತ್ತಿಲ್ಲ.ಈಗಾಗಲೇ ಕೋವಿಡ್ ಲಾಕ್‌ಡೌನ್‌ನಿಂದ ಆರೇಳುತಿಂಗಳು ಸಂಪೂರ್ಣವಾಗಿ ಥಿಯೇಟರ್‌ಗಳನ್ನು ಮುಚ್ಚಿದ್ದರಿಂದ, ಅವುಗಳ ಮಾಲೀಕರು, ಕಾರ್ಮಿಕರುಎಲ್ಲರೂ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈಗಾಗಲೇ ಈ ಬಗ್ಗೆ ಸರ್ಕಾರಕ್ಕೂ ಹಲವು ಬಾರಿ ಮನವಿ ಮಾಡಿದ್ದೇವೆ. ನೂರಕ್ಕೆನೂರರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ನೀಡಿದರೆ ಮಾತ್ರ, ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್‌ಗಳನ್ನು ನಡೆಸೋದಕ್ಕೆ ಸಾಧ್ಯ. ಈಗಾಗಲೇ ಸಾಕಷ್ಟು ತಡವಾಗಿದೆ. ಇನ್ನಾದರೂ ಸರ್ಕಾರ ಕೂಡಲೇ ಈಗ ಹಾಕಿರುವ ಶೇ. 50ರಷ್ಟು ಪ್ರವೇಶ ನಿರ್ಬಂಧವನ್ನು ಹಿಂತೆಗೆದುಕೊಳ್ಳಬೇಕು. –ಕೆ.ವಿ ಚಂದ್ರಶೇಖರ್, ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘ ಅಧ್ಯಕ್ಷ
ಆದಷ್ಟು ಬೇಗ, ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ನೂರಕ್ಕೆ ನೂರರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ಕೊಡಬೇಕು ಅಂಥ ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದೇವೆ. ಈಗಲೂ ಕೂಡ ನಮ್ಮ ಸರ್ಕಾರಕ್ಕೆ ಅದನ್ನೇ ಹೇಳುತ್ತಿದ್ದೇವೆ. ಪಕ್ಕದ ತಮಿಳುನಾಡಿನಲ್ಲಿ ಕೊಟ್ಟಿರುವಂತೆ, ನಮ್ಮ ರಾಜ್ಯದಲ್ಲೂ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಪೂರ್ಣ ಪ್ರಮಾಣದ ಪ್ರವೇಶಕ್ಕೆ ಸರ್ಕಾರ ಅನುಮತಿ ನೀಡಬೇಕು. ಆದಷ್ಟು ಬೇಗ ಅನುಮತಿ ಸಿಗುತ್ತದೆ ಎಂಬ ನಿರೀಕ್ಷೆ ಇದೆ. – ಕೆ.ಪಿ ಶ್ರೀಕಾಂತ್, ನಿರ್ಮಾಪಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.