‘ಟಾಮ್ ಆ್ಯಂಡ್ ಜೆರ್ರಿ’ಯಲ್ಲಿ ಸಿದ್ ಶ್ರೀರಾಮ್ ಹಾಡು
Team Udayavani, Dec 7, 2020, 3:46 PM IST
ಕೆಜಿಎಫ್ ಚಿತ್ರದ ಖ್ಯಾತಿಯ ಸಂಭಾಷಣೆಕಾರ ರಾಘವ್ ವಿನಯ್ ಶಿವಗಂಗೆ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಟಾಮ್ ಆ್ಯಂಡ್ ಜೆರ್ರಿ’ ಚಿತ್ರದ ಹಾಡಿಗೆ ಖ್ಯಾತ ಗಾಯಕ ಸಿದ್ ಶ್ರೀರಾಮ್ ಧ್ವನಿಯಾಗಿದ್ದಾರೆ.
ಮ್ಯಾಥ್ಯೂಸ್ ಮನು ಸಂಗೀತ ಸಂಯೋ ಜನೆಯ “ಹಾಯಾಗಿದೆ ಎದೆಯೊಳಗೆ..’ ಎಂಬ ಹಾಡಿಗೆ ಗಾಯಕ ಸಿದ್ ಶ್ರೀರಾಮ್ ಹಾಡಿದ್ದಾರೆ. ಜೀವನದ ಏರಿಳಿತಗಳ ನಡುವೆ ಸಾಗುವ ಮಧ್ಯಮ ವರ್ಗದ ಜನರ ಬದುಕಿನಕುರಿತಾದಕಥಾಹಂದರ ಹೊಂದಿರುವ “ಟಾಮ್ ಆ್ಯಂಡ್ ಜೆರ್ರಿ’ ಚಿತ್ರ ಹಾಸ್ಯಮಿಶ್ರಿತ ಶೈಲಿಯಲ್ಲಿ ಮೂಡಿಬಂದಿದೆ. “ರಿದ್ಧಿ ಸಿದ್ಧಿ’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ರಾಜು ಶೇರಿಗಾರ್ ಬಂಡವಾಳ ಹೂಡಿದ್ದಾರೆ. ನಿಶ್ಚಿತ್‌ಕೆರೋಡಿ ಹಾಗೂ ಚೈತ್ರಾರಾವ್ ಜೋಡಿಯಾಗಿ ಅಭಿನಯಿಸಿರುವ “ಟಾಮ್ ಆ್ಯಂಡ್ ಜೆರ್ರಿ’ ಚಿತ್ರದಲ್ಲಿ ಹಿರಿಯಕಲಾವಿದರಾದ ಜೈ ಜಗದೀಶ್, ತಾರಾ ಅನುರಾಧ, ರಾಕ್ ಲೈನ್ ಸುಧಾಕರ್ ನಟಿಸಿದ್ದಾರೆ.
ಪೊಗರು ಸದ್ದು ಜೋರು : ಧ್ರುವ ಸರ್ಜಾ ನಾಯಕರಾಗಿರುವ “ಪೊಗರು” ಚಿತ್ರದ ಡಬ್ಬಿಂಗ್ ರೈಟ್ಸ್ ಸಖತ್ ಸುದ್ದಿ ಮಾಡುತ್ತಿದೆ. ಈಗಾಗಲೇ ಚಿತ್ರದ ಹಿಂದಿ ಡಬ್ಬಿಂಗ್‌ರೈಟ್ಸ್ ಏಳುಕೋಟಿಗೂ ಅಧಿಕ ಬೆಲೆಗೆ ಮಾರಾಟವಾಗಿದ್ದು, ಈಗ ಚಿತ್ರದ ತೆಲುಗು ಡಬ್ಬಿಂಗ್ ರೈಟ್ಸ್‌ಕೂಡಾ ಮೂರೂವರೆ ಕೋಟಿ ರೂಪಾಯಿಗೆ ಮಾರಾಟವಾಗಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.
ಚಂದನ್ ಹೋಟೆಲ್ ಶುರು : ಕಿರುತೆರೆ, ಹಿರಿತೆರೆಯಲ್ಲಿ ಬಿಝಿಯಾಗಿರುವ ನಟ ಚಂದನ್ ಈಗ ಹೊಸ ಬಿಝಿನೆಸ್ ಆರಂಭಿಸಿದ್ದಾರೆ. ಅದು ಹೋಟೆಲ್. ಚಂದನ್ ಸಹಕಾರದ ನಗರದಲ್ಲಿ ಹೋಟೆಲ್ ಮಾಡಿದ್ದು, ಈ ಬಿರಿಯಾನಿ ಹೋಟೆಲ್ ಅನ್ನು ನಟ ಶಿವರಾಜ್‌ಕುಮಾರ್, ಭಾನುವಾರ ಉದ್ಘಾಟಿಸಿದ್ದಾರೆ. ಸದ್ಯ ಚಂದನ್,ಕಿರುತೆರೆ ಹಾಗೂ ಹಿರಿತೆರೆಯಲ್ಲಿ ನಟಿಸುತ್ತಿದ್ದಾರೆ.