“ರಾಬರ್ಟ್’ ಲುಕ್‌ಗೆ ಫ್ಯಾನ್ಸ್ ಫಿದಾ
ಥೀಮ್ ಪೋಸ್ಟರ್ ಸಖತ್ ವೈರಲ್
Team Udayavani, Jun 6, 2019, 3:01 AM IST
ರಂಜಾನ್ ಹಬ್ಬದ ಸಡಗರ ಒಂದು ಕಡೆಯಾದರೆ, ದರ್ಶನ್ ಅಭಿಮಾನಿಗಳ ಸಂಭ್ರಮ ಮತ್ತೂಂದೆಡೆ. ಅದಕ್ಕೆ ಕಾರಣ, ದರ್ಶನ್ ಅಭಿನಯದ “ರಾಬರ್ಟ್’ ಚಿತ್ರದ ಎಕ್ಸ್‌ಕ್ಲೂಸಿವ್ ಥೀಮ್ ಪೋಸ್ಟರ್ ಬಿಡುಗಡೆ. ಹೌದು, ಬುಧವಾರ ಬೆಳಗ್ಗೆ 11ಗಂಟೆಯ ಹೊತ್ತಿಗೆ “ರಾಬರ್ಟ್’ ಥೀಮ್ ಪೋಸ್ಟರ್ ಬಿಡುಗಡೆಯಾಗಿದ್ದೇ ತಡ, ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲ.
ಒಂದು ಸ್ಟೈಲಿಶ್ ಆಗಿರುವ ಐಶಾರಾಮಿಯ ಬ್ಲಾಕ್ ಕಲರ್ ಬೈಕ್. ಅದರ ಮೇಲೆ ಬ್ಲಾಕ್ ಜಾಕೆಟ್, ಬ್ಲಾಕ್ ಜೀನ್ಸ್ ಧರಿಸಿ ಬೆನ್ನು ಮಾಡಿ ಕುಳಿತಿರುವ ಹೀರೋ. ಅವನು ಧರಿಸಿರುವ ಜಾಕೆಟ್ ಮೇಲೆ ಕೆಂಪು ಬಣ್ಣದ “ಗಜ’ ಮುಖ. ಆ ಬೈಕ್ ಎದುರುಗಡೆ ವಿಶಾಲವಾದ ಮೈದಾನದಲ್ಲಿ ನಿಂತಿರುವ ನೂರಾರು ಬೈಕ್ ಸವಾರರು, ಕಾರು, ಲಾರಿ, ಜೀಪು ಇತ್ಯಾದಿ ವಾಹನಗಳು…!
ಇದು “ರಾಬರ್ಟ್’ನ ಥೀಮ್ ಪೋಸ್ಟರ್‌ನ ವಿಶೇಷತೆ. ಈ ಪೋಸ್ಟರ್ ನೋಡಿದೊಡನೆ, ಎಲ್ಲರಿಗೂ ಅದೊಂದು ಭರ್ಜರಿ ಫೈಟ್ ಸೀನ್ ಫೈಟ್ ಅನ್ನೋದು ಗೊತ್ತಾಗುತ್ತದೆ. ಅಲ್ಲಿಗೆ “ರಾಬರ್ಟ್’ ಪಕ್ಕಾ ಆ್ಯಕ್ಷನ್ ಚಿತ್ರ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಈ ಥೀಮ್ ಪೋಸ್ಟರ್‌ನ ಮತ್ತೂಂದು ವಿಶೇಷವೆಂದರೆ, ಬೈಕ್‌ನ ನಂಬರ್‌ಪ್ಲೇಟ್.
ಹೌದು ಐಶಾರಾಮಿ ಬೈಕ್‌ಗೊಂದು ನಂಬರ್ ಇದೆ, ಅದು ಕೂಡ “ಕೆಎ 19′ ಡಿ 8055′. ಈ ನಂಬರ್ ಅನ್ನು, “ಡಿ ಬಾಸ್’ ಮಾದರಿಯಲ್ಲೇ ಬರೆದು ಹಾಕಿರುವುದು ವಿಶೇಷ. ಇವೆಲ್ಲವನ್ನು ತುಂಬಾ ಕ್ರಿಯೇಟಿವ್ ಆಗಿ ಮಾಡಿರುವ ಚಿತ್ರತಂಡ, ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಹೆಚ್ಚಿಸಿದೆ. ಈಗಾಗಲೇ “ರಾಬರ್ಟ್’ ಚಿತ್ರದ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ.
ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ ‘ರಾಬರ್ಟ್’ ಚಿತ್ರದ ಥೀಮ್ ಪೋಸ್ಟರ್ ನಿಮಗಾಗಿ. ಚಿತ್ರದ ಥೀಮ್ ಹಾಗೂ ನನ್ನ ಫರ್ಸ್ಟ್ ಲುಕ್ ಹೇಗಿರಬಹುದೆಂಬ ಚಿತ್ರಣವನ್ನು ಇದರಲ್ಲಿ ಬಣ್ಣಿಸಲಾಗಿದೆ. @UmapathyFilms ಬ್ಯಾನರ್ ಅಡಿಯಲ್ಲಿ, @TharunSudhir ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. @umap30071#RoberrtThemePoster #Roberrt pic.twitter.com/qy3tzZubPt
— Darshan Thoogudeepa (@dasadarshan) June 5, 2019
ಈ ಹಿಂದೆ ಬಿಡುಗಡೆಯಾಗಿದ್ದ “ರಾಬರ್ಟ್’ ಚಿತ್ರದ ಪೋಸ್ಟರ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಅದರಲ್ಲೂ ಆಂಜನೇಯನ ಹೆಗಲ ಮೇಲೆ ಕೂತಿರುವ ರಾಮ ಬಾಣ ಬಿಡುತ್ತಿರುವ ಪೋಸ್ಟರ್ ಎಲ್ಲರಲ್ಲೂ ಒಂದಷ್ಟು ಕುತೂಹಲ ಹುಟ್ಟುಹಾಕಿತ್ತು. ಅದಕ್ಕೂ ಮುನ್ನ ಬಾಲಕನ ಕೈ ಹಿಡಿದಿದ್ದ ಕೈಯೊಂದರ ಪೋಸ್ಟರ್ ಅಷ್ಟೇ ವಿಶೇಷ ಎನಿಸಿತ್ತು.
“ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು. ರಾವಣನ ಮುಂದೆ ಗೆಲ್ಲೋದು ಗೊತ್ತು..’ ಎಂಬ ಪದಗಳು ಮಾಸ್ ಅಂಶಗಳಿರುವ ಪಕ್ಕಾ ಆ್ಯಕ್ಷನ್ ಚಿತ್ರವಿದು ಎಂಬುದನ್ನು ಹೇಳಿತ್ತು. ದರ್ಶನ್ “ರಾಬರ್ಟ್’ ಚಿತ್ರದಲ್ಲಿ ಎರಡು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಗೆಟಪ್‌ನಲ್ಲಿ ದಾಡಿ ಬಿಟ್ಟಿದ್ದು, ಆ ಭಾಗದ ಚಿತ್ರೀಕರಣ ನಡೆಯುತ್ತಿದೆ.
ಅದೇನೆ ಇರಲಿ, “ರಾಬರ್ಟ್’ ಎಕ್ಸ್‌ಕ್ಲೂಸಿವ್ ಥೀಮ್ ಪೋಸ್ಟರ್ ಒಂದಷ್ಟು ನಿರೀಕ್ಷೆ ಹೆಚ್ಚಿಸಿರುವುದಂತೂ ಸುಳ್ಳಲ್ಲ. ಸದ್ಯಕ್ಕೆ ದರ್ಶನ್ ಅಭಿನಯದ “ಮುನಿರತ್ನ ಕುರುಕ್ಷೇತ್ರ ಆಗಸ್ಟ್ ವರಮಹಾಲಕ್ಷ್ಮೀ ಹಬ್ಬಕ್ಕೆ ರಿಲೀಸ್ ಆಗುತ್ತಿದ್ದು, ಅಭಿಮಾನಿಗಳು ಆ ಚಿತ್ರದ ಬಿಡುಗಡೆ ಎದುರು ನೋಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.