ಎಸ್ ಪಿಬಿಗೆ ಹಾಡಲು ಇಷ್ಟವಾದ ಮತ್ತು ಕಷ್ಟವಾದ ಹಾಡು ಯಾವುದಾಗಿತ್ತು!
6 ರಿಂದ 7 ಗಂಟೆ ಹಾಡುತ್ತಲೇ ಇದ್ದ ಎಸ್‌ಪಿಬಿ ದಿನವೊಂದಕ್ಕೆ 17 ಗಂಟೆ ಹಾಡಿದ ಉದಾಹರಣೆಯೂ ಇದೆ.
Team Udayavani, Sep 26, 2020, 11:06 AM IST
ಕನ್ನಡದಲ್ಲಿ 15,000ಕ್ಕೂ ಹೆಚ್ಚು ಹಾಡು ಹಾಡಿದ್ದೀರಿ. ಅಷ್ಟು ಹಾಡುಗಳ ಪೈಕಿ ನಿಮಗೆ ಹಾಡಲು ಬಹಳ ಇಷ್ಟವಾದ ಮತ್ತು ಕಷ್ಟ ಅನ್ನಿಸಿದ ಹಾಡು ಯಾವುದು ಸರ್? ಎಂದು ಅದೊಮ್ಮೆ ಕೇಳಿದಾಗ ತತ್‌ಕ್ಷಣ ಹೇಳಿದರು. ದೇವರ ದುಡ್ಡು ಸಿನೆಮಾ ದಲ್ಲಿ ತರಿ ಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ ಮೇಯ್ತಿತ್ತು… ಎಂಬ ಹಾಡಿದೆ. ಅದು ಆರ್.ಎನ್. ಜಯಗೋ ಪಾಲ್ ರಚನೆಯ, ರಾಜನ್-ನಾಗೇಂದ್ರ ಸಂಗೀತ ಸಂಯೋ ಜನೆಯ ಹಾಡು ಅದನ್ನು ಹಾಡುವ ಮೊದಲು, ಇದೇನ್ ಮಹಾ ಟಂಗ್ ಟ್ವಿಸ್ಟರ್ ಥರಾ ಇದೆ. ಸುಲಭವಾಗಿ ಹಾಡಿ ಬಿಡಬ ಹುದು ಅನ್ನಿಸಿತು.
ಅದನ್ನೇ ಸಂಗೀತ ನಿರ್ದೇಶಕ ನಾಗೇಂದ್ರ ಅವರಿಗೂ ಹೇಳಿದೆ. ಅವರು ಇಲ್ಲ ಇಲ್ಲ. ಇದನ್ನು ಹಾಡುವುದಕ್ಕೆ ಕಷ್ಟ ಆಗ್ತದೆ. ಚೆನ್ನಾಗಿ ರಿಹರ್ಸಲ್ ಮಾಡು ಅಂದರು. ರಿಹರ್ಸ ಲ್‌ಗೆ ನಿಂತಾಗಲೇ ಅದನ್ನು ಹಾಡುವುದು ಎಷ್ಟು ಕಷ್ಟ ಅಂತ ಅರ್ಥ ಆಯ್ತು ಎಂದಿದ್ದರು ಬಾಲು.
40 ಸಾವಿರ ಹಾಡುಗಳ ಸರದಾರ
ಎಸ್‌ಪಿಬಿ ಅವರ ಹೆಸರಲ್ಲಿರುವ ಮತ್ತೂಂದು ದಾಖಲೆ ಎಂದರೆ ಅದು 40 ಸಾವಿರ ಹಾಡುಗಳಿಗೆ ಧ್ವನಿಯಾಗಿರುವುದು. ತಮ್ಮ 50 ವರ್ಷದ ಸಂಗೀತ ಜೀವನದಲ್ಲಿ ಎಸ್‌ಪಿಬಿ ಬರೋಬ್ಬರಿ 40 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಇದನ್ನೂ ಓದಿ: ‘ಸಂಗೀತ ಸಂಜೆ’ಯ ಮೂಲಕ ಶಾಲಾ ಕಟ್ಟಡಕ್ಕೆ 1.20 ಲಕ್ಷ ರೂ.ದೇಣಿಗೆ ನೀಡಿದ್ದರು ಎಸ್ ಪಿಬಿ !
ದಿನವೊಂದಕ್ಕೆ ಕಡಿಮೆ ಎಂದರೂ 6 ರಿಂದ 7 ಗಂಟೆ ಹಾಡುತ್ತಲೇ ಇದ್ದ ಎಸ್‌ಪಿಬಿ ದಿನವೊಂದಕ್ಕೆ 17 ಗಂಟೆ ಹಾಡಿದ ಉದಾಹರಣೆಯೂ ಇದೆ. ಭಾರತದ 16 ಭಾಷೆಗಳಲ್ಲಿ ಎಸ್‌ಪಿಬಿ ಅವರು ಹಾಡುವ ಮೂಲಕ ಗಾಯನ ಲೋಕಕ್ಕೆ ಅಭೂತಪೂರ್ವ ಕೊಡುಗೆ ನೀಡಿದ್ದಾರೆ. ಈ ಸಾಧನೆಗೆ ಮುಖ್ಯ ಕಾರಣ, ಎಸ್‌ಪಿಬಿ ಅವರಲ್ಲಿದ್ದ ಶ್ರದ್ಧೆ. ತಮ್ಮ ವೈಯಕ್ತಿಕ ಜೀವನದ ಸುಖಗಳನ್ನು ಬದಿಗಿಟ್ಟು, ವೃತ್ತಿಯನ್ನೇ ಪೂರ್ಣಪ್ರಮಾಣದಲ್ಲಿ ಪ್ರೀತಿಸಿದ ಪರಿಣಾಮ ಈ ಸಾಧನೆ ಮಾಡಲು ಸಾಧ್ಯವಾಗಿತ್ತು.
ಅದೆಷ್ಟೋ ಗಾಯಕರು, 10-20 ಹಾಡುಗಳನ್ನು ಹಾಡುವ ಹೊತ್ತಿಗೆ ತಾವು ಬೆಳೆದುಬಿಟ್ಟೆವು ಎಂಬ ಭಾವನೆಯಲ್ಲಿರುತ್ತಾರೆ. ಸಂಗೀತಭ್ಯಾಸ ಬಿಡುತ್ತಾರೆ. ಆದರೆ, ಎಸ್‌ಪಿಬಿ 40 ಸಾವಿರ ಹಾಡುಗಳನ್ನು ಹಾಡಿದ್ದರೂ ಅವರಲ್ಲಿ ಆ ಹಮ್ಮು-ಬಿಮ್ಮು ಇರಲಿಲ್ಲ. ಯಾವುದೇ ಕಾರ್ಯಕ್ರಮ ನೀಡುವ ಮುನ್ನ ಏಕಾಂತದಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದರು.
ಖ್ಯಾತಿ ತಂದ ಶಂಕರಾಭರಣಂ
ಎಸ್‌ಪಿಬಿ ಅವರು ಬೇರೆ ಬೇರೆ ಭಾಷೆಯ ಹಲವು ಸಿನೆಮಾಗಳಿಗೆ ಹಾಡಿದ್ದರೂ ಅವರಿಗೆ ರಾಷ್ಟ್ರಮಟ್ಟದ ಮನ್ನ‚ಣೆ, ಖ್ಯಾತಿಯನ್ನು ತಂದುಕೊಟ್ಟಿದ್ದ ತೆಲುಗು ಚಿತ್ರ
ಶಂಕರಾಭರಣಂ. 1980ರಲ್ಲಿ ತೆರೆಕಂಡ ಈ ಚಿತ್ರವನ್ನು ಕೆ.ವಿಶ್ವನಾಥನ್ ನಿರ್ದೇಶಿಸಿದ್ದಾರೆ. ಕೆ.ವಿ. ಮಹಾದೇವನ್ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ಕರ್ನಾಟಕ ಸಂಗೀತದ ಬಳಕೆಯನ್ನು ಮಾಡಿದರು. ಈ ಚಿತ್ರ ಎಸ್‌ಪಿಬಿ ಅವರಿಗೆ ರಾಷ್ಟ್ರ ಹಾಗೂ ಅಂತಾರಾಷ್ಟ್ರಿಯ ಮನ್ನಣೆಯನ್ನು ತಂದುಕೊಟ್ಟಿತು. ಉತ್ತಮ ಹಿನ್ನೆಲೆ ಗಾಯಕ ರಾಷ್ಟ್ರಪ್ರಶಸ್ತಿ ಕೂಡಾ ಈ ಚಿತ್ರಕ್ಕಾಗಿ ಎಸ್‌ಪಿಬಿ ಅವರಿಗೆ ಲಭಿಸಿತು.
ಇದನ್ನೂ ಓದಿ: ‘ನನ್ನ ಪಾತ್ರಗಳನ್ನು ಹೊಸ ಎತ್ತರಕ್ಕೆ ಒಯ್ದಿದ್ದೇ SPB ಅವರ ಧ್ವನಿ’: ಹಿರಿಯ ನಟ ಅನಂತ್ ಕಂಬನಿ
ಚಿನ್ನ, ಪ್ಲಾಟಿನಂಗಿಂತಲೂ ನೀರು
ಅಮೂಲ್ಯ,ಅದನ್ನು ಉಳಿಸಿ ದೇಶದಲ್ಲಿ ಹಲವೆಡೆ ಸರಿಯಾದ ಮಳೆಯಿಲ್ಲದೆ ಜನರು ಬರದಿಂದ ತತ್ತರಿಸಿ ಹೋಗಿದ್ದಾರೆ. ಹೀಗಾಗಿ ಚಿನ್ನ, ಪ್ಲಾಟಿನಂಗಳಿಗಿಂತ ನೀರು ಅಮೂಲ್ಯವಾದದ್ದು, ಅದನ್ನು ಮಿತವಾಗಿ ಬಳಸಿ, ಉಳಿಸಿ ಎಂದು ಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅನೇಕ ಕಡೆಗಳಲ್ಲಿ ಮನವಿ ಮಾಡುತ್ತಿದ್ದರು. ಕಳೆದ ಕೆಲವು ವರ್ಷಗಳಲ್ಲಿ ಎಸ್‌ಪಿಬಿ ತಾವು ಭಾಗವಹಿಸುತ್ತಿದ್ದ ಆಡಿಯೋ ರಿಲೀಸ್ ಕಾರ್ಯಕ್ರಮ, ಸ್ಟೇಜ್ ಶೋ ಹೀಗೆ ಅನೇಕ ಕಡೆಗಳಲ್ಲಿ ನೀರಿನ ಮಹತ್ವದ ಬಗ್ಗೆ ಹಾಗೂ ನೀರನ್ನು ಮಿತವಾಗಿ ಬಳಸಬೇಕೆಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರ ಬಳಿ ಮನವಿ ಮಾಡಿಕೊಳ್ಳುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.