ಫಿಲ್ಮ್ ಚೇಂಬರ್ ಸಹಾಯ
Team Udayavani, Apr 18, 2020, 10:17 AM IST
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಲ್ಯಾಣ ನಿಧಿಯಿಂದ ಅಗತ್ಯ ಇರುವಂತಹ ನಿರ್ಮಾಪಕರುಗಳಿಗೆ 15 ಸಾವಿರ ರೂಪಾಯಿ ವಿತರಣೆ ಮಾಡಿದೆ. ಮಂಡಳಿಯಲ್ಲಿ ಪ್ರದರ್ಶಕರು, ವಿತರಕರು ಹಾಗು ನಿರ್ಮಾಪಕರು ಸೇರಿದ್ದಾರೆ. ಈ ವಲಯಗಳಲ್ಲಿರುವವರು ಪ್ರತಿ ವರ್ಷ ಅಪ್‌ಡೇಟ್ ಮಾಡಿಕೊಂಡಿದ್ದರೆ, ಅಂತಹವರಿಗೆ 15 ಸಾವಿರ ರೂಪಾಯಿ ವಿತರಿಸಲಾಗುತ್ತಿದೆ. ಈಗಾಗಲೇ 450 ಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿ ಹಣ ಪಡೆದಿದ್ದಾರೆ.
ಒಟ್ಟು 1200 ಜನರಿದ್ದು, ಕಲ್ಯಾಣ ನಿಧಿಗೆ 2.5ಲಕ್ಷ ರೂಪಾಯಿ ನೀಡಿದ್ದಾರೆ. ಆ ಹಣದಲ್ಲಿ 15 ಸಾವಿರ ವಿತರಿಸಲಾಗಿದೆ. ನಿರ್ಮಾಪಕರ ಸಮಸ್ಯೆ ಅರಿತು ಇತ್ತೀಚೆಗೆ ನಿರ್ಮಾಪಕರ ಸಂಘ ಮನವಿ ಮಾಡಿದ ಹಿನ್ನೆಲೆಯಲ್ಲಿ ಕಲ್ಯಾಣ ನಿಧಿ ಅಧ್ಯಕ್ಷ ಸಾ.ರಾ. ಗೋವಿಂದು ಅವರು 15 ಸಾವಿರ ವಿತರಿಸಲು ಒಪ್ಪಿದ್ದಾರೆ. ಅವರಿಗೆ ನಿರ್ಮಾಪಕ ಸಂಘದ ಪರವಾಗಿ ಧನ್ಯವಾದಗಳು ಎಂದು ಪ್ರವೀಣ್‌ಕುಮಾರ್ ಹೇಳಿದ್ದಾರೆ. ಕಳೆದ 75 ವರ್ಷಗಳ ಇತಿಹಾಸದಲ್ಲೇ ನಿರ್ಮಾಪಕರಿಗೆ ಇಂತಹ ಸಮಸ್ಯೆ ಎದುರಾಗಿರಲಿಲ್ಲ. ಈಗ ಸಮಸ್ಯೆ ಬಂದಿದೆ. ಹಾಗಾಗಿ ಅವರ ನೆರವಿಗೆ ಧಾವಿಸಬೇಕು ಎಂಬ ಮನವಿ ಮೇರೆಗೆ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ರಾಜೇಂದ್ರಸಿಂಗ್‌ಬಾಬು ಸೇರಿದಂತೆ ಹಲವರು ನಮ್ಮ ಮನವಿಗೆ ಧ್ವನಿಗೂಡಿಸಿ, ಕಾರ್ಯಕಾರಿ ಸಮಿತಿಯಲ್ಲಿ ಅನುಮತಿ ನೀಡಲು ಸಹಕಾರ ನೀಡಿದ್ದಾರೆ ಎಲ್ಲರಿಗೂ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುವುದಾಗಿ ಪ್ರವೀಣ್ ಹೇಳಿದ್ದಾರೆ.
ಕಲಾವಿದರು ಸಹಕರಿಸಬೇಕು: ನಿರ್ಮಾಪಕರ ಸಂಘ : ಇತ್ತೀಚೆಗಷ್ಟೇ ನಿರ್ಮಾಪಕರ ಉಳಿವಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಶಿವರಾಜಕುಮಾರ್ ಹೇಳಿಕೆ ನೀಡಿದ್ದರು. ಆ ಹೇಳಿಕೆಯನ್ನು ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್‌ಕುಮಾರ್ ಸ್ವಾಗತಿಸಿದ್ದು, ” ಮುಂದಿನ ದಿನಗಳಲ್ಲಿ ಚಿತ್ರರಂಗದ ಭಾಗವಾಗಿರುವ ಪ್ರದರ್ಶಕರು, ಚಿತ್ರಮಂದಿರಗಳ ಮಾಲೀಕರು, ವಿತರಕರು, ಯುಎಫ್ಓ, ಕ್ಯೂಬ್, ಕಲಾವಿದರು ತಮ್ಮ ವೇತನದಲ್ಲಿ ಶೇ.30 ರಷ್ಟು ಕಡಿಮೆ ಮಾಡುವ ಮೂಲಕ ನಿರ್ಮಾಪಕರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದ್ದಾರೆ.
ಲಾಕ್‌ಡೌನ್ ನಂತರ ಚಿತ್ರರಂಗ ಚೇತರಿಸಿಕೊಳ್ಳಲು ಎಷ್ಟು ದಿನ ಬೇಕಾಗುತ್ತೋ ಗೊತ್ತಿಲ್ಲ. ಸಿನಿಮಾ ನೋಡಲು ಜನರು ಯಾವಾಗ ಬರುತ್ತಾರೋ ಅದೂ ಗೊತ್ತಿಲ್ಲ. ಈಗ ಚಿತ್ರೀಕರಣದಲ್ಲಿರುವ, ಚಿತ್ರೀ ಕರಣ ಶುರು ಮಾಡಿರುವ, ಇನ್ನೇನು ಶೂಟಿಂಗ್ ಮುಗಿಸುವ ಹಂತದಲ್ಲಿರುವ ನಿರ್ಮಾಪಕರಿಗೆ ಸಿನಿಮಾ ಕಲಾವಿದರು, ಕಾರ್ಮಿಕರು ಮತ್ತು ಸಂಬಂಧಿಸಿದವರು ತಮ್ಮ ವೇತನದಲ್ಲಿ ಶೇ.30 ರಷ್ಟು ಕಡಿಮೆಗೊಳಿಸಿ, ಸಹಾಯಕ್ಕೆ ಬರಬೇಕು ಎಂದಿದ್ದಾರೆ. ರೈತ ದೇಶಕ್ಕೆ ಬೆನ್ನೆಲುಬು. ನಿರ್ಮಾಪಕ ಚಿತ್ರರಂಗಕ್ಕೆ ಬೆನ್ನೆಲುಬು. ಅಂತಹ ನಿರ್ಮಾಪಕರೇ ಈಗ ಸಮಸ್ಯೆಯಲ್ಲಿದ್ದಾರೆ. ಅಂತಹವರ ಸಹಾಯಕ್ಕೆ ಕೈ ಜೋಡಿಸಬೇಕಾಗಿದೆ ‘ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.