Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Team Udayavani, Nov 5, 2024, 1:51 PM IST
ಬೆಂಗಳೂರು: ನಟ, ನಿರ್ದೇಶಕ ಗುರುಪ್ರಸಾದ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಮಾದನಾಯಕನಹಳ್ಳಿ ಠಾಣೆ ಪೊಲೀಸರು, ಜಪ್ತಿ ಮಾಡಿದ ಮೊಬೈಲ್‌ಗಳನ್ನು ರಿಟ್ರೈವ್‌ಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳು ಹಿಸಿದ್ದಾರೆ. ಮತ್ತೂಂದೆಡೆ ಸಾಲಗಾರರ ಪಟ್ಟಿ ತಯಾರಿಸಿ ನೋಟಿಸ್ ಕೊಡಲು ಸಿದ್ಧತೆ ನಡೆಸಿದ್ದಾರೆ.
ನಿರ್ದೇಶಕ ಗುರು ಪ್ರಸಾದ್ ಸಿನಿಮಾಗಾಗಿ ಕೋಟ್ಯಂತರ ರೂ. ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಅಲ್ಲದೆ, ಅವರ 2ನೇ ಪತ್ನಿ ಸಮಿತ್ರಾ ಕೂಡ ದೂರಿನಲ್ಲಿ ಸಾಲ ಮಾಡಿಕೊಂಡಿದ್ದರು ಎಂದು ಉಲ್ಲೇಖೀಸಿದ್ದಾರೆ. ಹೀಗಾಗಿ ಗುರುಪ್ರಸಾದ್ ಎಷ್ಟು ಸಾಲ ಮಾಡಿ ಕೊಂಡಿದ್ದರು. ಸಾಲ ಪಾವತಿಯೇ ಮಾಡಿಲ್ಲವೇ? ಅವರಿಂದ ಕಿರುಕುಳ ಇತ್ತೆ? ಎಂಬ ಬಗ್ಗೆ ಮಾಹಿತಿ ಪಡೆಯಲು ಯಾರೆಲ್ಲ ಸಾಲ ಕೊಟ್ಟಿದ್ದಾರೆ ಎಂಬ ಮಾಹಿತಿ ಪಡೆಯಲಾಗುತ್ತಿದೆ.
ಜತೆಗೆ ಅವರ ಮೊಬೈಲ್ ರಿಟ್ರೈವ್ ಬಳಿಕ ಒಂದಷ್ಟು ಮಾಹಿತಿ ದೊರೆಯಲಿದೆ. ಅಲ್ಲದೆ, ಬ್ಯಾಂಕ್‌ನಿಂದ ಹಣಕಾಸಿನ ವಹಿವಾಟಿನ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತದೆ. ಇನ್ನು ಫ್ಲ್ಯಾಟ್‌ನಲ್ಲಿ ಮೂರು ಮೊಬೈಲ್‌ಗಳು, ಎರಡು ಟ್ಯಾಬ್‌ಗಳು ಹಾಗೂ 1 ಲ್ಯಾಪ್‌ಟಾಪ್ ಪತ್ತೆಯಾಗಿದ್ದು, ಎಲ್ಲವನ್ನು ಎಫ್ಎಸ್‌ಎಲ್‌ಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಂಬಂಧಿಕರ ಹೇಳಿಕೆ ದಾಖಲು: ಸಾಲಗಾರರ ಪಟ್ಟಿ ತಯಾರಿ ನಡುವೆ, ಗುರುಪ್ರಸಾದ್ ಸಂಬಂಧಿಕರ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತದೆ. ಮೊದಲಿಗೆ 2ನೇ ಪತ್ನಿ, ಬಳಿಕ ಮೊದಲ ಪತ್ನಿ ಹಾಗೂ ಇತರೆ ಸಂಬಂಧಿಕರ ಹೇಳಿಕೆ ಪಡೆಯುತ್ತೇವೆ. ಆ ನಂತರ ಗುರುಪ್ರಸಾದ್ ಜತೆ ಕೆಲಸ ಮಾಡುತ್ತಿದ್ದ ಸಹ ನಿರ್ದೇಶಕರು ಹಾಗೂ ಇತರರ ಹೇಳಿಕೆ ಪಡೆಯಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಉಸಿರುಗಟ್ಟಿ ಸಾವು: ಮರಣೋತ್ತರ ವರದಿ
ಗುರುಪ್ರಸಾದ್ ಅವರ ಪ್ರಾಥಮಿಕ ಮರಣೋತ್ತರ ವರದಿ ಬಹಿರಂಗವಾಗಿದ್ದು, ನಾಲ್ಕು ದಿನಗಳ ಹಿಂದೆಯೇ ಉಸಿರುಗಟ್ಟಿ ಗುರುಪ್ರಸಾದ್ ಮೃತಪಟ್ಟಿದ್ದಾರೆ. ಹೀಗಾಗಿ ದೇಹ ಊದಿಕೊಂಡು ರಕ್ತಸ್ರಾವ ಬಂದಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.