ಚಿತ್ರೋತ್ಸವದ ಜ್ಯೂರಿ ಅವಾರ್ಡ್
ಪಿಕಾಸಿಗೆ ದಾದಾ ಸಾಹೇಬ್ ಫಾಲ್ಕೆ
Team Udayavani, May 10, 2020, 11:13 AM IST
ಮನುಷ್ಯನ ದುರಾಸೆ ಕುರಿತ ಕಿರುಚಿತ್ರಕ್ಕೆ ಪ್ರಶಂಸೆ ಕನ್ನಡದಲ್ಲಿ ಈಗಂತೂ ಸಾಕಷ್ಟು ಕಿರುಚಿತ್ರಗಳು ಪ್ರಭಾವ ಬೀರುತ್ತಿವೆ. ಅದರಲ್ಲೂ, ವಿಶೇಷ ಸಂದೇಶ ಸಾರುವ ಕಿರುಚಿತ್ರಗಳಿಗೆ ಶಾರ್ಟ್ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಮನ್ನಣೆ ಸಿಗುತ್ತಿದೆ. ಆ ಸಾಲಿಗೆ ಈಗ ಕನ್ನಡದ “ಪಿಕಾಸಿ’ ಚಿತ್ರವೂ ಸೇರಿದೆ. ಹೌದು, ಈ ಕಿರುಚಿತ್ರಕ್ಕೆ ಇತ್ತೀಚೆಗೆ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ವಿಶೇಷ ತೀರ್ಪುಗಾರರ ಪ್ರಶಸ್ತಿ ಸಿಕ್ಕಿದೆ.
ಬಹುತೇಕ ಹೊಸಬರೇ ಸೇರಿದ ಕೆಲಸ ಮಾಡಿರುವ ಈ ಕಿರುಚಿತ್ರಕ್ಕೆ ವಿಶೇಷ ಪ್ರಶಸ್ತಿ ಲಭಿಸಿರುವುದು ಸಹಜವಾಗಿಯೇ ಚಿತ್ರತಂಡದ ಖುಷಿಯನ್ನು ಹೆಚ್ಚಿಸಿದೆ. ಇನ್ನು ಮನುಷ್ಯನಿಗೆ ಎಷ್ಟೊಂದು ದುರಾಸೆ ಇದೆ ಎಂಬ ಅಂಶದೊಂದಿಗೆ ಮಾಡಿರುವ ಕಿರುಚಿತ್ರ ಇದಾಗಿದ್ದು, ಮನುಷ್ಯನಿಗೆ ಎಷ್ಟಿದ್ದರೂ ತೃಪ್ತಿ ಇರಲ್ಲ. ಆಸೆ, ದುರಾಸೆಯೇ ಹೆಚ್ಚು. ಅದೇ ಕಾನ್ಸೆಪ್ಟ್ ಮೇಲೆ ಇಡೀ ಕಿರುಚಿತ್ರ ಸಾಗುತ್ತದೆ. ಈ ಚಿತ್ರ ವೀಕ್ಷಿಸಿದ ತೀರ್ಪುಗಾರರು ವಿಶೇಷ ಪ್ರಶಸ್ತಿ ನೀಡಿದ್ದಾರೆ. ಈ ಸಂತಸವನ್ನು ಮುಖಪುಟದಲ್ಲಿ ಹಂಚಿಕೊಂಡಿರುವ ಚಿತ್ರತಂಡಕ್ಕೆ ಎಲ್ಲೆಡೆಯಿಂದ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿವೆ.
ನಟಿ ಅರುಣಬಾಲರಾಜ್ “ಪಿಕಾಸಿ’ ಕಿರುಚಿತ್ರದಲ್ಲಿ ಶಿಕ್ಷಕಿ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದ ಆರಂಭದಲ್ಲಿ ಅವರ ಪಾತ್ರ ಶುರುವಾಗಲಿದ್ದು, ಶಾಲೆಯಲ್ಲಿ ಮಕ್ಕಳಿಗೆ ಬುದ್ಧಿ ಹೇಳುವ ಸಮಯ ಬರುತ್ತೆ. ಆಗ “ಪಿಕಾಸಿ’ ಕಥೆ ಶುರುವಾಗಲಿದೆ ಎಂಬುದು ಅರುಣ ಬಾಲರಾಜ್ ಮಾತು. 25 ನಿಮಿಷಗಳ ಈ ಕಿರುಚಿತ್ರವನ್ನು ವಿನೋದ್ ಕುಲಶೇಖರ್ ನಿರ್ದೇಶನ ಮಾಡಿದ್ದಾರೆ. ಇವರಿಗೆ ಇದು ಹೊಸ ಅನುಭವ. ಇನ್ನು, ಸಂದೀಪ್ ಛಾಯಾಗ್ರಹಣ ಮಾಡಿದ್ದಾರೆ. ಹೇಮಂತ್ ಅವರು ಸಂಕಲನ ಮಾಡಿದ್ದಾರೆ. ಹೊಸಬರ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದಿರುವ ಚಿತ್ರತಂಡ, ಇದು ಎಲ್ಲರ ಪ್ರೀತಿಯ ಶ್ರಮಕ್ಕೆ ಸಿಕ್ಕ ಗೆಲುವು. “ಪಿಕಾಸಿ’ ಕಿರುಚಿತ್ರವಾದರೂ ಸಿನಿಮಾದಲ್ಲಿ ಕೆಲಸ ಮಾಡಿದ ಅನುಭವ ಆಗಿದೆ ಎಂದಿರುವ ಚಿತ್ರತಂಡ, ಈ ಕಿರುಚಿತ್ರ ಮೂಲಕ ಸಣ್ಣ ಸಂದೇಶ ಸಾರಲಾಗಿದೆ. ಇದೊಂದು ಮಾನವ ಪ್ರಪಂಚದ ಮೇಲಿನ ಚಿತ್ರವಾಗಿದ್ದು, ಬದಲಾವಣೆ ಅಗತ್ಯತೆ ಏನೆಂಬುದನ್ನು ಇಲ್ಲಿ ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.