ಹುಟ್ಟೂರು ಮಂಡ್ಯಕ್ಕೆ ಐಸಿಯು ಘಟಕ ಕೊಡುಗೆ ನೀಡಿದ ನಿರ್ಮಾಪಕ ವಿಜಯ್ ಕಿರಂಗದೂರು
Team Udayavani, Jun 17, 2021, 9:58 PM IST
ಬೆಂಗಳೂರು: ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ವಿಜಯ್ ಕಿರಂಗದೂರು ಅವರು ಕೋವಿಡ್ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ತಮ್ಮ ಹುಟ್ಟೂರು ಮಂಡ್ಯಕ್ಕೆ ಅಳಿಲು ಸೇವೆ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಬಿಗ್ ಸಿನಿಮಾಗಳ ನಿರ್ಮಾಪಕ ವಿಜಯ್ ಕಿರಂಗದೂರು ಅವರು ತಮ್ಮ ಹುಟ್ಟೂರು ಮಂಡ್ಯಕ್ಕೆ ನೆರವಿನ ಹಸ್ತ ಚಾಚಿದ್ದಾರೆ. 50 ಬೆಡ್ ಗಳನ್ನು ಹೊಂದಿರುವ ಒಂದು ಸುಸಜ್ಜಿತ ಐಸಿಯು ಘಟಕವನ್ನು ನಿರ್ಮಿಸಿದ್ದಾರೆ. ಇಂದು ( ಜೂನ್ 16) ಎಂಐಎಂಎಸ್ ಸಂಸ್ಥೆಗೆ ಈ ಘಟಕವನ್ನು ಹಸ್ತಾಂತರಿಸಲಾಯಿತು. ಈ ವಿಷಯವನ್ನು ವಿಜಯ್ ಅವರು ತಮ್ಮ ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ.
ನನ್ನ ಹುಟ್ಟೂರು ಮಂಡ್ಯಕ್ಕೆ ಒಂದು ಕಿರುಕಾಣಿಕೆ!
ಇಡೀ ನಾಡು ಕೊರೋನಾ ಸಂಕಷ್ಟದಲ್ಲಿರುವಾಗ ಸಕ್ಕರೆ ನಾಡು, ನಮ್ಮ ಮಂಡ್ಯಕ್ಕೂ ಏನಾದರೂ ಸಹಾಯ ಮಾಡಬೇಕೆಂದೆನಿಸಿತು. ಹೆಮ್ಮೆಯ MIMS ಸಂಸ್ಥೆಗೆ @HombaleGroup ವತಿಯಿಂದ ICU ಘಟಕ ಸಮರ್ಪಸಿದ್ದೇವೆ.
Thank you, @drashwathcn @narayanagowdakc @ZP_Mandya@hombalefilms @ChaluveG pic.twitter.com/UaWbcxQxy6
— Vijay Kiragandur (@VKiragandur) June 17, 2021
ಇನ್ನು ಲಾಕ್ ಡೌನ್ ಸಂದರ್ಭದಲ್ಲಿ ವಿಜಯ್ ಕಿರಂಗದೂರು ಅವರು, ಕರ್ನಾಟಕ ಚಲನಚಿತ್ರ ಒಕ್ಕೂಟದ ಕಾರ್ಮಿಕರಿಗೆ ನೆರವಾಗಿದ್ದರು. 32 ಲಕ್ಷ. ರೂ. ದೇಣಿಗೆ ನೀಡುವ ಮೂಲಕ ಸಂಕಷ್ಟಕ್ಕೆ ಸ್ಪಂದಿಸಿದ್ದರು. ಇದೀಗ ಮಂಡ್ಯಕ್ಕೆ ಐಸಿಯು ಘಟಕ ಕೊಡುಗೆಯಾಗಿ ನೀಡಿದ್ದಾರೆ.
ಇನ್ನು ವಿಜಯ್ ಕಿರಂಗದೂರು ಅವರು ಸ್ಯಾಂಡವುಡ್ ನಲ್ಲಿ ಬಿಗ್ ಬಜೆಟ್ ಸಿನಿಮಾಗಳಿಗೆ ಹಣ ಹೂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಡಿ ಕೆಜಿಎಫ್ ಹಾಗೂ ಯುವರತ್ನ ನಂತಹ ಸಾಕಷ್ಟು ಹಿಟ್ ಚಿತ್ರಗಳನ್ನು ಪ್ರೊಡ್ಯೂಸ್ ಮಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ತಮ್ಮದೆಯಾದ ಕೊಡುಗೆ ನೀಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Protest: ಆಶಾ ಕಾರ್ಯಕರ್ತೆಯರು ಪ್ರತಿಭಟಿಸದಂತೆ ಮನವೊಲಿಸುವ ಹೊಣೆ ಜಿಲ್ಲಾಧಿಕಾರಿಗಳಿಗೆ
Convention: ಮೊಗವೀರರ ಬೇಡಿಕೆ ಮುಂದಿನ ಬಜೆಟ್‌ನಲ್ಲಿ ಈಡೇರಿಸಲು ಬದ್ಧ: ಸಿದ್ದರಾಮಯ್ಯ
Kerala: ಬಾಲಕಿ ಮೇಲೆ ಅತ್ಯಾಚಾ*ರ: ಕೇರಳ ಯುವಕನಿಗೆ 87 ವರ್ಷ ಶಿಕ್ಷೆ
Kundapura: ಗೋಸಾಗಾಟ ತಡೆದ ಸಿಸಿಟಿವಿ ವೀಕ್ಷಣೆ
Horoscope: ಈ ರಾಶಿಯ ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.