ಬಂತು ಪಟಾಕಿ ಟ್ರೇಲರ್ – 2
Team Udayavani, Apr 11, 2017, 12:02 PM IST
ಗಣೇಶ್ ಅವರ “ಪಟಾಕಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಮೊದಲ ಬಾರಿಗೆ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿರುವ ಗಣೇಶ್ ಅವರನ್ನು ಕಂಡು ಅಭಿಮಾನಿಗಳು ಮೆಚ್ಚಿದ್ದಾರೆ. 20 ಲಕ್ಷ ಹಿಟ್ಸ್ ಪಡೆಯುವ ಮೂಲಕ ಚಿತ್ರತಂಡ ಖುಷಿಯಾಗಿದೆ. ಇದೇ ಖುಷಿಯಲ್ಲಿ ಈಗ ಮತ್ತೂಂದು ಟ್ರೇಲರ್ ಬಿಡುಗಡೆ ಮಾಡಿದೆ.
ಈ ಟ್ರೇಲರ್ನ ವಿಶೇಷವೆಂದರೆ “ಎನ್ಜಿ ಶಾಟ್ಸ್’ ಮೂಲಕ ಮಾಡಿರೋದು. ಚಿತ್ರೀಕರಣದ ವೇಳೆ ಕೆಲವು ದೃಶ್ಯಗಳು ನಿರ್ದೇಶಕರ ಕಲ್ಪನೆಯಂತೆ ಮೂಡಿಬರೋದಿಲ್ಲ, ಅಥವಾ ಕಲಾವಿದರು ಡೈಲಾಗ್ನಲ್ಲಿ ಕಂಟಿನ್ಯೂಟಿ ಮಿಸ್ ಮಾಡುತ್ತಾರೆ. ಈ ತರಹದ ದೃಶ್ಯಗಳನ್ನು ಎನ್ಜಿ ಶಾಟ್ಸ್ (ನಾಟ್ ಗುಡ್) ಎಂದು ಕರೆಯಲಾಗುತ್ತದೆ.
“ಪಟಾಕಿ’ ಸಿನಿಮಾದಲ್ಲೂ ಈ ತರಹದ ಒಂದಷ್ಟು ದೃಶ್ಯಗಳು ಇವೆ. ಈ ದೃಶ್ಯಗಳನ್ನು ನೋಡುತ್ತಿದ್ದಂತೆ ಇದನ್ನೇ ಉಪಯೋಗಿಸಿಕೊಂಡು ಯಾಕೆ ಒಂದು ಟ್ರೇಲರ್ ಮಾಡಬಾರದು ಎನಿಸಿದೆ. ಅದರಂತೆ ಈಗ “ಪಟಾಕಿ’ ತಂಡ “ಎನ್ಜಿ ಶಾಟ್ಸ್’ಗಳನ್ನಿಟ್ಟುಕೊಂಡು ಟ್ರೇಲರ್ ಬಿಡುಗಡೆ ಮಾಡಿದೆ. ಗಣೇಶ್, ಸಾಧುಕೋಕಿಲ ಪ್ರಮುಖವಾಗಿ ಕಾಣಿಸಿಕೊಂಡಿರುವ ಈ ಟ್ರೇಲರ್ ಮಜಾವಾಗಿದ್ದು, ಪ್ರೇಕ್ಷಕರೂ ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ.
ಇನ್ನು, ಚಿತ್ರದ ಬಗೆಗಿನ ಸಂಪೂರ್ಣ ಮಾಹಿತಿ ನೀಡಲು “ಆ್ಯಪ್’ವೊಂದನ್ನು ಕೂಡಾ “ಪಟಾಕಿ’ ತಂಡ ಹೊರತಂದಿದೆ. “ಚಿತ್ರದ ಕುರಿತಾದ ಸಂಪೂರ್ಣ ವಿವರಗಳನ್ನು ಈ ಆ್ಯಪ್ನಲ್ಲಿ ನೀಡಲಾಗಿದೆ. ಈ ಮೂಲಕ ಮತ್ತೂಂದು ಹೊಸತನಕ್ಕೆ “ಪಟಾಕಿ’ ತಂಡ ತೆರೆದುಕೊಂಡಿದೆ’ ಎನ್ನುವುದು ನಿರ್ದೇಶಕ ಮಂಜು ಸ್ವರಾಜ್ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11 ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ 5 ಕೋಟಿ ಲಂಚ, ರೋಲ್ ಕಾಲ್ ಲಾಯರ್..
Komal Kumar: ತೆರೆಗೆ ಬರಲು ಸಿದ್ದವಾಯ್ತು ʼಯಲಾ ಕುನ್ನಿʼ
Seetha Payana: ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ʼಸೀತಾ ಪಯಣʼ; ನಿರಂಜನ್ ಹೀರೋ
Chethan Kumar: ನಟ ಚೇತನ್ ವಿರುದ್ಧದ ವಾರಂಟ್ ಹಿಂಪಡೆದ ಕೋರ್ಟ್
Actor Darshan: ಅ.22ಕ್ಕೆ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.