ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣ: ಬಿಗ್‌ಬಾಸ್ ಸ್ಪರ್ಧಿ ಆದಂ ಪಾಷಾ ಬಂಧನ
Team Udayavani, Oct 21, 2020, 8:42 AM IST
ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ಬಾಸ್ ಸ್ಪರ್ಧಿ ಆದಂ ಪಾಷಾ ಅವರನ್ನು ಮಾದಕ ವಸ್ತು ನಿಯಂತ್ರಣ ಘಟಕ (ಎನ್‌ಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ.
ಆದಂ ಪಾಷಾ ಈ ಹಿಂದೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಕಿಂಗ್ ಪಿನ್ ಅನಿಕಾಳ ಬಳಿ ಮಾದಕ ವಸ್ತು ಖರೀದಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಎನ್‌ಸಿಬಿ ಅಧಿಕಾರಿಗಳು ಮಾಹಿತಿ ನೀಡಿದರು.
ಆ.19ರಂದು ಎನ್‌ಸಿಬಿ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದ ಅನಿಕಾ ಬಳಿ ಆದಂ ಪಾಷಾಗೆ ಸಂಪರ್ಕವಿತ್ತು. ವಿಚಾರಣೆ ವೇಳೆ ಅನಿಕಾಳಿಂದ ಆರೋಪಿ ಡ್ರಗ್ಸ್ ಖರೀದಿಸಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಪಾಷಾ ಕೂಡ ಬೇರೆಯ ವರಿಗೆ ಕೊಟ್ಟಿರುವ ಮಾಹಿತಿ ಇದೆ. ಈ ಕುರಿತ ಕೆಲವೊಂದು ಸಾಕ್ಷ್ಯ ಸಂಗ್ರಹಿಸಿ ಇದೀಗ ಬಂಧಿಸಲಾಗಿದೆ ಎಂದು ಎನ್‌ಸಿಬಿ ಅಧಿಕಾರಿಗಳು ಮಾಹಿತಿ ನೀಡಿದರು.
ಇದನ್ನೂ ಓದಿ:ಶಾರುಖ್- ಕಾಜಲ್ ನಟನೆಯ ಸೂಪರ್‌ಹಿಟ್ ಚಿತ್ರಕ್ಕೆ 25; ಟ್ರೆಂಡ್ ಆದ ಡಿಡಿಎಲ್‌ಜೆ
ವರ್ಷದ ಹಿಂದೆ ಕಮ್ಮನಹಳ್ಳಿಯ ಕ್ಲಬ್‌ನಲ್ಲಿ ಪಾಷಾಗೆ ಅನಿಕಾ ಪರಿಚಯ ಆಗಿದ್ದಳು. ನಾನು ಯಾವುದೇ ತಪ್ಪು ಮಾಡಿಲ್ಲ, ಹೀಗಾಗಿ ಯಾವುದಕೂ ಹೆದರಿಕೊಳ್ಳುವುದಿಲ್ಲ. ಅನಿಕಾ ಜತೆ ಯಾರು ಬರುತ್ತಿದ್ದರು ಎಂಬುದು ಗೊತ್ತಿಲ್ಲ. ನಾನು ಕ್ಲಬ್ ನಲ್ಲಿ ಡ್ಯಾನ್ಸ್ ಮಾಡಲು ಹೋಗುತ್ತಿದೆ ಎಂದು ವಿಚಾರಣೆ ವೇಳೆ ಆದಂ ಪಾಷಾ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯ ಎನ್‌ಸಿಬಿ ಅಧಿಕಾರಿಗಳ ಮಾಹಿತಿ ಮೇರೆಗೆ ಬೆಂಗಳೂರು ಎನ್‌ಸಿಬಿ ಅಧಿಕಾರಿಗಳು 3 ಕಡೆ ದಾಳಿ ನಡೆಸಿ ಅನಿಕಾ ಸೇರಿ ಮೂವರನ್ನು ಬಂಧಿಸಿದ್ದರು. ಆಗ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ವಿಚಾರ ಬಾಯಿಬಿಟ್ಟಿದ್ದಳು.
ಗೈರಾದ ಪ್ರಿಯಾಂಕಾ ಆಳ್ವ
ಸ್ಯಾಂಡಲ್‌ವುಡ್ ಪ್ರಕರಣದ6ನೇ ಆರೋಪಿ ಆದಿತ್ಯ ಆಳ್ವಗಾಗಿ ಹುಡುಕಾಟ ನಡೆಸುತ್ತಿರುವ ಸಿಸಿಬಿ ಪೊಲೀಸರು, ಇತ್ತೀಚೆಗೆ ಮುಂಬೈನ ಆದಿತ್ಯ ಆಳ್ವನ ಸಹೋದರಿ ಪ್ರಿಯಾಂಕಾ ಒಬೆರಾಯ್ ಆಳ್ವ ಮನೆ ಮೇಲೆ ದಾಳಿ ನಡೆಸಿದ್ದರು. ಪತಿ, ನಟ ವಿವೇಕ್ ಒಬೆರಾಯ್ ಸೇರಿ ಇಬ್ಬರನ್ನು ವಿಚಾರಣೆಗೊಳ ಪಡಿಸಿದ್ದರು. ಸಹೋದರ ನಾಪತ್ತೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದರೆ, ಕೆಲ ಕಾರಣ ನೀಡಿ ನಿರಾಕರಿಸಿದ್ದರು. ಅನಂತರ ಅ.20ರಂದು ಖುದ್ದು ಹಾಜರಾಗಲು ನೋಟಿಸ್ ಜಾರಿ ಮಾಡಿದ್ದರು. ಆದರೆ, ಗೈರಾಗಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.