Kannada Movies: ಸ್ಯಾಂಡಲ್‌ ವುಡ್‌ಗೆ ಜೀವಕಳೆ; ಜೂ.14ಕ್ಕೆ ಒಂದೇ ದಿನ 4 ಸಿನಿಮಾ ರಿಲೀಸ್


Team Udayavani, Jun 5, 2024, 1:46 PM IST

7

ಬೆಂಗಳೂರು: ಈ ವರ್ಷ ಅಷ್ಟಾಗಿ ಸದ್ದು ಮಾಡದ ಕನ್ನಡ ಚಿತ್ರರಂಗ ವರ್ಷದ ದ್ವಿತೀಯಾರ್ಧದಲ್ಲಿ ಒಂದೊಂದಾಗಿ ಸಿನಿಮಾಗಳನ್ನು ರಿಲೀಸ್‌ ಮಾಡುತ್ತಿದೆ.

ಐಪಿಎಲ್‌,ಚುನಾವಣೆ ಬಳಿಕ ಸರತಿ ಸಾಲಿನಲ್ಲಿ ಒಂದೊಂದೇ ಚಿತ್ರಗಳು ಥಿಯೇಟರ್‌ ಗೆ ಎಂಟ್ರಿ ಕೊಡುತ್ತಿದೆ. ಈಗಾಗಲೇ ಬಹು ನಿರೀಕ್ಷಿತ ಸ್ಟಾರ್‌ ನಟರ ಚಿತ್ರಗಳು ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದೆ. ವರ್ಷದ ಮೊದಲಾರ್ಧದಲ್ಲಿ ಚಿತ್ರಗಳು ರಿಲೀಸ್‌ ಆಗಿಲ್ಲ ಅಂಥೇನಿಲ್ಲ. ಕನ್ನಡ ಚಿತ್ರಗಳು ರಿಲೀಸ್‌ ಆಗಿವೆ. ಆದರೆ ಹೇಳುವಷ್ಟರ ಮಟ್ಟಿಗೆ ಸದ್ದು ಮಾಡಿಲ್ಲ.

ಜೂನ್‌ ತಿಂಗಳಿನಲ್ಲಿ ವಿಭಿನ್ನ ಕಂಟೆಂಟ್‌ ಗಳ್ಳುಳ ಚಿತ್ರಗಳು ರಿಲೀಸ್‌ ಆಗಲಿವೆ. ಅದರಲ್ಲೂ ಜೂನ್‌ 14 ರಂದು ಒಂದೇ ದಿನ 4 ಕನ್ನಡ ಚಿತ್ರಗಳು ಜೊತೆಯಾಗಿ ತೆರೆ ಕಾಣುತ್ತಿದೆ. ಯಾವೆಲ್ಲಾ ಸಿನಿಮಾಗಳು ಜೂ.14 ರಂದು ರಿಲೀಸ್‌ ಆಗಲಿದೆ ಎನ್ನುವುದನ್ನು ನೋಡಿಕೊಂಡು ಬರೋಣ..

ಲವ್‌ ಲೀ: ವಸಿಷ್ಠ ಸಿಂಹ ನಾಯಕನಾಗಿ ನಟಿಸಿರುವ ʼ ಲವ್‌ ಲೀʼ ಚಿತ್ರ ಒಂದಷ್ಟು ವಿಚಾರದಿಂದ ಕುತೂಹಲ ಹುಟ್ಟಿಸಿದೆ. ಯುವ ಪ್ರತಿಭೆ ಚೇತನ್‌ ಕೇಶವ್‌ ನಿರ್ದೇಶನ ಮಾಡುತ್ತಿರುವ ʼಲವ್‌ ಲೀʼ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ನಟ- ನಿರ್ದೇಶಕ ರಿಷಬ್‌ ಶೆಟ್ಟಿ ಅವರ ಸಮ್ಮುಖದಲ್ಲಿ ರಿಲೀಸ್‌ ಆಗಿದೆ.

ರೌಡಿಸಂ, ಲವ್‌, ಆ್ಯಕ್ಷನ್‌, ಸೆಂಟಿಮೆಂಟ್‌ ಅಂಶಗಳನ್ನು ʼಲವ್‌ ಲೀʼಯಲ್ಲಿ ಹೇಳಲಾಗಿದೆ. ರಿಲೀಸ್‌ ಆಗಿರುವ ಟ್ರೇಲರ್‌ ನಲ್ಲಿ ವಸಿಷ್ಠ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸ್ಟೆಫಿ ಪಟೇಲ್‌ ನಾಯಕಿಯಾಗಿ ನಟಿಸಿದ್ದು, ಇದೇ ಜೂ.14 ರಂದು ಚಿತ್ರ ರಿಲೀಸ್‌ ಆಗಲಿದೆ.

ಕೋಟಿ: ಡಾಲಿ ಧನಂಜಯ್‌ ಅಭಿನಯದ ʼಕೋಟಿʼ ಇತ್ತೀಚೆಗಿನ ದಿನಗಳಲ್ಲಿ ಚಂದನವನದಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ ಭರ್ಜರಿ ಪ್ರಚಾರಗಳಿಂದ ಸುದ್ದಿಯಾಗಿರುವ ʼಕೋಟಿʼ ಥಿಯೇಟರ್‌ ನಲ್ಲಿ ಕಮಾಲ್‌ ಮಾಡಲು ಕಾಯುತ್ತಿದೆ.

ದೇಶದ ಪ್ರಮುಖ ನಿರ್ಮಾಣ ಸಂಸ್ಥೆ ಜಿಯೋ ಸ್ಟುಡಿಯೋಸ್ ಮೊದಲ ಬಾರಿಗೆ ʼಕೋಟಿʼ ಮೂಲಕ ಕನ್ನಡ ಸಿನಿಮಾವೊಂದಕ್ಕೆ ಬಂಡವಾಳ ಹಾಕಲಿದೆ. ಈ ಚಿತ್ರವನ್ನು ಪರಮ್‌ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ರಿಲೀಸ್‌ ಆಗಿರುವ ಟೀಸರ್‌ ಗಮನ ಸೆಳೆದಿದೆ. ಹೊಸ ರೀತಿಯ ಕಥೆಯನ್ನು ಹೇಳಲು ಇದೇ ಜೂ.14 ರಂದು ಥಿಯೇಟರ್‌ ʼಕೋಟಿʼ ಲಗ್ಗೆ ಇಡಲಿದೆ.

ಚೆಫ್‌ ಚಿದಂಬರ:  ಅನಿರುದ್ಧ್‌ ಜಟ್ಕರ್‌ ಅಭಿನಯಿಸಿರುವ ಸಸ್ಪೆನ್ಸ್‌ , ಥ್ರಿಲ್ಲರ್‌ ʼಚೆಫ್‌ ಚಿದಂಬರʼ ಇತ್ತೀಚೆಗೆ ಟ್ರೇಲರ್‌ ಮೂಲಕ ಗಮನ ಸೆಳೆದಿದೆ. ಡಾರ್ಕ್‌ ಕಾಮಿಡಿ ಕಥೆಯನ್ನು ಥ್ರಿಲ್ಲರ್‌ ಮಾದರಿಯಲ್ಲಿ ಹೇಳಲಾಗಿದ್ದು, ಅನಿರುದ್ಧ್‌ ಟ್ರೇಲರ್‌ ನಲ್ಲಿ ಗಮನ ಸೆಳೆದಿದ್ದಾರೆ.

ನಿಧಿ ಸುಬ್ಬಯ್ಯ ಹಾಗೂ ಲವ್‌ ಮಾಕ್ಟೇಲ್ ಖ್ಯಾತಿಯ ರೆಚೆಲ್‌ ಡೇವಿಡ್‌  ನಾಯಕಿಯರಾಗಿ ನಟಿಸಿದ್ದಾರೆ. ಆನಂದರಾಜ್‌ ಎಂ. ನಿರ್ದೇಶಿಸಿರುವ ಈ ಸಿನಿಮಾ ಜೂ.14 ರಂದು ರಿಲೀಸ್‌ ಆಗಲಿದೆ.

ಶಿವಮ್ಮ:  ಈಗಾಗಲೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ವಿಶ್ವದ ಹದಿನೇಳಕ್ಕೂ ಹೆಚ್ಚಿನ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಂಸೆ ಪಡೆದುಕೊಂಡಿರುವ  ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಬ್ ಶೆಟ್ಟಿ ಅವರು ತಮ್ಮ ರಿಷಬ್ ಶೆಟ್ಟಿ ಫಿಲಂಸ್ ಮೂಲಕ ನಿರ್ಮಾಣ ಮಾಡಿರುವ ಚಿತ್ರ ‘ಶಿವಮ್ಮʼ ಚಿತ್ರ ಕೂಡ ಜೂ.14 ರಂದು ರಿಲೀಸ್‌ ಆಗಲಿದೆ.

ಜೈಶಂಕರ್ ಆರ್ಯರ್ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಯರೆಹಂಚಿನಾಳದ ಸರ್ಕಾರಿ ಶಾಲೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದ ಶಿವಮ್ಮನ ಬದುಕು ಹೇಗೆಲ್ಲಾ ಬದಲಾಗುತ್ತದೆ ಎನ್ನುವ ಕಥೆ ಚಿತ್ರದಲ್ಲಿದೆ. ಕುಟುಂಬ ಪೋಷಣೆಗಾಗಿ ಊರೆಲ್ಲಾ ಸಾಲ ಮಾಡಿಕೊಂಡ ಶಿವಮ್ಮ, ಕೊನೆಗೆ ಶಾಲಾ ಶಿಕ್ಷಕರ ಬಳಿಯೂ ಸಾಲ ಮಾಡಿ ಸಮಸ್ಯೆ ಎದುರಿಸುತ್ತಾಳೆ. ಬಳಿಕ ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪಾರ ಮಾಡಲು ಹೋಗಿ ಆಕೆ ಏನೆಲ್ಲಾ ಸಮಸ್ಯೆ ಎದುರಿಸುತ್ತಾಳೆ ಎನ್ನುವ ಕಥೆಯನ್ನು ಎಳೆ ಎಳೆಯಾಗಿ ಹೇಳಲಾಗಿದೆ.

ಟಾಪ್ ನ್ಯೂಸ್

1-india

Semi Final 2; ಇಂಗ್ಲೆಂಡ್ ವಿರುದ್ಧ ಅಮೋಘ ಜಯ ಸಾಧಿಸಿದ ಭಾರತ ಫೈನಲ್ ಗೆ ಲಗ್ಗೆ

DKShi

Congress;ಚುನಾವಣ ರಾಜಕೀಯಕ್ಕೆ ನಮ್ಮ ಕುಟುಂಬದವರು ಬರುವ ಪ್ರಶ್ನೆಯೇ ಇಲ್ಲ:ಡಿ.ಕೆ.ಶಿವಕುಮಾರ್

1-wedsadsad

Govt ನಿರ್ಲಕ್ಷ್ಯ; 2000 ಕೋಟಿ ರೂ.ಬಂಡವಾಳದ ಕಂಪನಿ ಮಹಾರಾಷ್ಟ್ರಕ್ಕೆ: ಬೆಲ್ಲದ ಆರೋಪ

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

jio

Jio ಪ್ರಿಪೇಡ್ /ಪೋಸ್ಟ್ ಪೇಡ್ ಪ್ಲಾನ್ ಗಳ ದರ ಏರಿಕೆ

26

Bantwal: ಬೈಕ್‌ ಸ್ಕೀಡ್; ಗಂಭೀರ ಗಾಯಗೊಂಡು ಸಹಸವಾರೆ ಮೃತ್ಯು

Mangalore: ಗಾಂಜಾ ಸೇವನೆ; ಮೂವರು ವಶಕ್ಕೆ

Mangalore: ಗಾಂಜಾ ಸೇವನೆ; ಮೂವರು ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Prajwal Devaraj; ‘ಮಾಫಿಯಾ’ ಮುಂದೆ ‘ರಾಕ್ಷಸ’ ಹಿಂದೆ; ಒಬ್ಬ ನಿರ್ದೇಶಕನ ಎರಡು ಸಿನಿಮಾ

Prajwal Devaraj; ‘ಮಾಫಿಯಾ’ ಮುಂದೆ ‘ರಾಕ್ಷಸ’ ಹಿಂದೆ; ಒಬ್ಬ ನಿರ್ದೇಶಕನ ಎರಡು ಸಿನಿಮಾ

D Boss, 6106…; title craze continues

D Gang, 6106….; ಮುಂದುವರಿದ ಟೈಟಲ್ ಕ್ರೇಜ್

Raj B Shetty: ಮತ್ತೆ ʼಒಂದು ಮೊಟ್ಟೆಯ ಕಥೆʼ ತಂಡದ ಸಿನಿಮಾ ಮಾಡಲಿದ್ದಾರೆ ರಾಜ್‌ ಬಿ ಶೆಟ್ಟಿ

Raj B Shetty: ಮತ್ತೆ ʼಒಂದು ಮೊಟ್ಟೆಯ ಕಥೆʼ ತಂಡದ ಸಿನಿಮಾ ಮಾಡಲಿದ್ದಾರೆ ರಾಜ್‌ ಬಿ ಶೆಟ್ಟಿ

ದರ್ಶನ್‌ ಆಡಿದ ತಮಾಷೆಯ ಮಾತುಗಳಿಂದಲೇ ಶುರುವಾಯಿತೇ ತರುಣ್‌ – ಸೋನಲ್‌  ಪ್ರೇಮ್‌ ಕಹಾನಿ?

ದರ್ಶನ್‌ ಆಡಿದ ತಮಾಷೆಯ ಮಾತುಗಳಿಂದಲೇ ಶುರುವಾಯಿತೇ ತರುಣ್‌ – ಸೋನಲ್‌ ಪ್ರೇಮ್‌ ಕಹಾನಿ?

ಸ್ಥಳ ಮಹಜರು ವೇಳೆ ಪವಿತ್ರಾಗೆ ಲಿಪ್‌ ಸ್ಟಿಕ್‌ ಹಚ್ಚಲು ಅವಕಾಶ: ಮಹಿಳಾ PSIಗೆ ನೋಟಿಸ್

ಸ್ಥಳ ಮಹಜರು ವೇಳೆ ಪವಿತ್ರಾಗೆ ಲಿಪ್‌ ಸ್ಟಿಕ್‌ ಹಚ್ಚಲು ಅವಕಾಶ: ಮಹಿಳಾ PSIಗೆ ನೋಟಿಸ್

MUST WATCH

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

ಹೊಸ ಸೇರ್ಪಡೆ

Rain: ಇನ್ನೂ ಎರಡು ದಿನ ವರುಣನ ಅಬ್ಬರ

Rain: ಇನ್ನೂ ಎರಡು ದಿನ ವರುಣನ ಅಬ್ಬರ

9

Price Rise: ದರ ಏರಿಕೆ; ನಾಳೆ ರಾಜ್ಯಾದ್ಯಂತ ಬಿಜೆಪಿಯಿಂದ ಕ್ಷೀರ ಅಭಿಯಾನ

1-india

Semi Final 2; ಇಂಗ್ಲೆಂಡ್ ವಿರುದ್ಧ ಅಮೋಘ ಜಯ ಸಾಧಿಸಿದ ಭಾರತ ಫೈನಲ್ ಗೆ ಲಗ್ಗೆ

priyanka gandhi (2)

Constitution;’ಜೈ ಸಂವಿಧಾನ’ ಹೇಳುವುದು ತಪ್ಪಾ?: ಪ್ರಿಯಾಂಕಾ ಪ್ರಶ್ನೆ

1-wtr

Moving ರೈಲಿಗೆ ನೀರು ಚಿಮ್ಮಿಸಿದ ಯುವಕರಿಗೆ ಪ್ರಯಾಣಿಕರಿಂದ ಗೂಸಾ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.