ಜುಲೈ 20 ರಿಂದ ದಿಗಂತ್ ಕಥೆ ಶುರು
Team Udayavani, Jun 26, 2018, 11:14 AM IST
ದಿಗಂತ್ ಸಿಕ್ಕಾಪಟ್ಟೆ ನಿರೀಕ್ಷೆಯಿಂದ ಎದುರು ನೋಡುತ್ತಿರುವ “ಕಥೆಯೊಂದು ಶುರುವಾಗಿದೆ’ ಚಿತ್ರದ ಬಿಡುಗಡೆಯ ದಿನಾಂಕ ಅಂತಿಮವಾಗಿದೆ. ಚಿತ್ರ ಜುಲೈ 20 ರಂದು ತೆರೆಕಾಣಲಿದೆ. ಈ ಮೂಲಕ ದಿಗಂತ್ ಖುಷಿಯಾಗಿದ್ದಾರೆ. ಈ ಖುಷಿಗೆ ಕಾರಣ ಈ ವರ್ಷ ಬಿಡುಗಡೆಯಾಗುತ್ತಿರುವ ದಿಗಂತ್ ಅವರ ಮೊದಲ ಸಿನಿಮಾವಿದು. ಕಳೆದ ವರ್ಷ ದಿಗಂತ್ ಅವರ “ಹ್ಯಾಪಿ ನ್ಯೂ ಇಯರ್’ ಚಿತ್ರ ತೆರೆಕಂಡಿತ್ತು.
ಆ ನಂತರ ಇಲ್ಲಿವರೆಗೆ ಅವರ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಈಗ “ಕಥೆಯೊಂದು ಶುರುವಾಗಿದೆ’ ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ ಈ ಬಿಡುಗಡೆಯಾಗಿರುವ ಈ ಚಿತ್ರದ ಟ್ರೇಲರ್‌ಗೂ ಮೆಚ್ಚುಗೆ ವ್ಯಕ್ತವಾಗಿದ್ದು, ಐದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸುವ ಮೂಲಕ ಚಿತ್ರತಂಡಕ್ಕೆ ಚಿತ್ರದ ಮೇಲಿನ ವಿಶ್ವಾಸ ಹೆಚ್ಚಿದೆ. ಜೊತೆಗೆ ಚಿತ್ರದ ಮೊದಲ ವಿಡಿಯೋ ಸಾಂಗ್ ಕೂಡಾ ಬಿಡುಗಡೆಯಾಗಿದೆ.
ಈ ಚಿತ್ರವನ್ನು ಸೆನ್ನಾ ಹೆಗ್ಡೆ ನಿರ್ದೇಶಿಸಿದ್ದು, ಪುಷ್ಕರ್ ಹಾಗೂ ಪರಂವಾ ಬ್ಯಾನರ್‌ನಡಿ ಈ ಚಿತ್ರ ನಿರ್ಮಾಣವಾಗಿದೆ. ದಿಗಂತ್‌ಗೆ ನಾಯಕಿಯಾಗಿ ಪೂಜಾ ದೇವರಿಯಾ ನಟಿಸಿದ್ದಾರೆ. ಈ ಚಿತ್ರದಲ್ಲಿ ದಿಗಂತ್ ನಾನಿಲ್ಲಿ ರೆಸಾರ್ಟ್ ಮಾಲೀಕನಾಗಿ ನಟಿಸಿದ್ದಾರೆ. ಮಿಡ್‌ಲೈಫ್ಗೆ ಬಂದ ಯುವಕನ ತಳಮಳನ್ನು ಅವರ ಪಾತ್ರದ ಮೂಲಕ ಇಲ್ಲಿ ತೋರಿಸಲಾಗಿದೆ. ಮದುವೆಯಾಗುತ್ತಾ, ಇಲ್ವಾ, ಒಂಟಿತನದ ಭಯವನ್ನು ಇಲ್ಲಿ ಬಿಂಬಿಸಲಾಗಿದೆ.
ಚಿತ್ರದಲ್ಲಿ ಮೂರು ವಯಸ್ಸಿನವರ ಮೂಲಕ ಜೀವನವನ್ನು ಕಟ್ಟಿಕೊಡಲಾಗಿದ್ದು, 20ರಿಂದ 21ರ ಒಂದು ಜೋಡಿ., 30ರ ಯುವಕ, 60 ರ ಒಂದು ಜೋಡಿ ಹಾಗೂ ಅವರ ಚಿಂತನೆಗಳೊಂದಿಗೆ ಇಡೀ ಸಿನಿಮಾ ಸಾಗುತ್ತದೆಯಂತೆ. “ಕಥೆಯೊಂದು ಶುರುವಾಗಿದೆ’ ನಾಲ್ಕು ದಿನದಲ್ಲಿ ನಡೆಯುವ ಕಥೆ. ಸೋಮವಾರ ಆರಂಭವಾಗಿ ಗುರುವಾರ ಮುಗಿಯುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಬರುವ ಕಥೆಯನ್ನು ಮಜಾವಾಗಿ ಹೇಳಲಾಗಿದೆಯಂತೆ. ಚಿತ್ರದಲ್ಲಿ ಅರುಣಾ ಬಾಲರಾಜ್, ಬಾಬು ಹಿರಣ್ಣಯ್ಯ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್ಲೆಸ್ ಅನಿಸಿತು…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.