ಮುತ್ತುಮಣಿ ಸ್ಪೀಕಿಂಗ್‌ ಜೂಟ್‌ನಿಂದ ಹೀರೋವರೆಗೆ…


Team Udayavani, Aug 2, 2017, 10:36 AM IST

Taranga-Vishwa-(3).jpg

ಮುತ್ತುಮಣಿ ಈಗ ಹ್ಯಾಪಿಮೂಡ್‌ನ‌ಲ್ಲಿದ್ದಾರೆ. ಅರೇ, ಯಾರೀ ಮುತ್ತುಮಣಿ ಅನ್ನೋ ಪ್ರಶ್ನೆ ಎದುರಾದರೆ, ಸೃಜನ್‌ಲೋಕೇಶ್‌ ನಡೆಸಿಕೊಡುವ “ಮಜಾ ಟಾಕೀಸ್‌’ ನೆನಪಿಸಿಕೊಳ್ಳಿ. ತೂ(ಪೂ)ಜಾ ಬಾರ್‌ ಓನರ್ರೆ ಈ ಮುತ್ತುಮಣಿ’! ಹೌದು, ಆ ಪಾತ್ರದ ಮೂಲಕ ನಗೆಬುಗ್ಗೆ ಎಬ್ಬಿಸುತ್ತಿರುವ ತರಂಗ ವಿಶ್ವ, ಈಗ ಬಲು ಖುಷಿಯಲ್ಲಿದ್ದಾರೆ. ಆ ಖುಷಿಗೆ ಕಾರಣ, ಗ್ಯಾಪ್‌ ಬಳಿಕ ಬಂದರೂ ಅವರನ್ನ ಜನ ಒಪ್ಪಿ ಅಪ್ಪಿರೋದು. ಅಷ್ಟೇ ಅಲ್ಲ, ಇದೀಗ ಅವರು ಹೀರೋ ಆಗುತ್ತಿದ್ದಾರೆ ಅನ್ನೋದೇ ಈ ಹೊತ್ತಿನ ವಿಶೇಷ.

ತರಂಗ ವಿಶ್ವ ಎದಿತ್‌ ಫಿಲ್ಮ್ ಫ್ಯಾಕ್ಟರಿ ಎಂಬ ಹೊಸ ಬ್ಯಾನರ್‌ವೊಂದನ್ನು ಶುರು ಮಾಡಿದ್ದಾರೆ. ಆ ಮೂಲಕ ಒಂದು ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಅವರೇ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಆ ಚಿತ್ರವನ್ನು ಕರೂರು ಮೂಲದ ಅರುಣ್‌ ಎಂಬುವರು ನಿರ್ದೇಶಿಸುತ್ತಿದ್ದಾರೆ. ಸದ್ಯಕ್ಕೆ ವಿಶ್ವ ಅಲಿಯಾಸ್‌ ಮುತ್ತುಮಣಿ ನಟಿಸುತ್ತಿರೋದು ಮಲಯಾಳಂನ ರಿಮೇಕ್‌ ಚಿತ್ರದಲ್ಲಿ. ಆ ಚಿತ್ರದ ಹಕ್ಕು ಕುರಿತು ಈಗಷ್ಟೇ ಮಾತುಕತೆ ನಡೆಯುತ್ತಿದೆ.

ಒಳ್ಳೆಯ ತಂತ್ರಜ್ಞರು, ಗೆಳೆಯರ ಜತೆ ಸೇರಿ ಆ ಚಿತ್ರ ಮಾಡುತ್ತಿದ್ದೇನೆ. ಅದೊಂದು ಔಟ್‌ ಅಂಡ್‌ ಔಟ್‌ ಕಾಮಿಡಿ ಸಿನಿಮಾವಂತೂ ಹೌದು ಎನ್ನುತ್ತಾರೆ ಅವರು. ಹಾಗಾದರೆ, ಅವರು ಹೀರೋ ಆಗಿಬಿಟ್ಟರೆ, ಬೇರೆ ಪಾತ್ರಗಳಲ್ಲಿ ನಟಿಸೋದಿಲ್ಲವೇ? ಖಂಡಿತ ಅಂತಹ ಯಾವುದೇ ಸಂಕೋಚವಿಲ್ಲ ಎನ್ನುವ ವಿಶ್ವ, ಹೀರೋ ಆಗಿ ನಟಿಸಿದರೂ, ಎಂಥಾ ಪಾತ್ರದಲ್ಲೂ ನಟಿಸಲು ರೆಡಿ. ಅದು ಸಣ್ಣದಿರಲಿ, ದೊಡ್ಡದಿರಲಿ, ಒಳ್ಳೇ ಪಾತ್ರವಿದ್ದರೆ ಖಂಡಿತ ನಟಿಸುತ್ತೇನೆ. ನನಗೆ ಹೀರೋ ಪಟ್ಟ ಬೇಡ.

ಸ್ಟಾರ್‌ಗಿರಿಯ ಆಸೆಯೂ ಇಲ್ಲ. ಸದ್ಯಕ್ಕೆ ನನಗೆ ಒಳ್ಳೇ ಮೈಲೇಜ್‌ ಕೊಟ್ಟಿರೋದು “ಮಜಾ ಟಾಕೀಸ್‌’. ಅಲ್ಲಿನ ಮುತ್ತುಮಣಿ ಎಂಬ ಪಾತ್ರ ನನ್ನಲ್ಲಿ ಇನ್ನಷ್ಟು ಆತ್ಮವಿಶ್ವಾಸ ಹೆಚ್ಚಿಸಿದೆ. ನಾನು ಬೆಳಗ್ಗೆ 6 ಕ್ಕೆ ಟೀ ಕುಡಿಯಲು ಹೊರ ಹೋದರೆ, ಜನರು “ಮುತ್ತುಮಣಿ, ನಿಮ್ಮ ತೂಜಾ ಬಾರ್‌ ಓಪನ್‌ ಆಗೋದು ಯಾವಾಗ’ ಅಂತ ಕೇಳುವಷ್ಟರ ಮಟ್ಟಿಗೆ ಆ ಪಾತ್ರ ಹಿಟ್‌ ಆಗಿದೆ. ನಾನು ಒಂದುವರೆ ವರ್ಷದ ಗ್ಯಾಪ್‌ ಬಳಿಕ ಬಂದರೂ ಜನರು ನನ್ನನ್ನು ಮಜಾ ಟಾಕೀಸ್‌ನಲ್ಲಿ ಮಜವಾಗಿ ನೋಡುತ್ತಿದ್ದಾರೆ. ಇದಕ್ಕಿಂತ ಖುಷಿ ಬೇರೊಂದಿಲ್ಲ.

“ಪಂಟ’ ನಂತರ ನಾಲ್ಕೈದು ಸಿನಿಮಾಗಳು ಬಂದಿವೆ. ಈ ಮೂಲಕ ನನ್ನ ಪಯಣ ಮತ್ತೆ ಜೋರಾಗಿದೆ. ನಾನು ಸ್ಟಾರ್‌ ಸಿನಿಮಾದಲ್ಲಿ ನಟಿಸಿದ್ದರಿಂದ ಸಂಭಾವನೆ ಜಾಸ್ತಿ ಅಂತ ಕೆಲವರು ಪುಕಾರು ಎಬ್ಬಿಸಿದರು. ಆದರೆ, ಯಾಕೆ ಹಾಗೆ ಮಾಡಿದರೋ ಗೊತ್ತಿಲ್ಲ. ನನ್ನ ಬಳಿ ಬಂದರೆ ತಾನೇ ಸತ್ಯ ಗೊತ್ತಾಗೋದು. ನಾನು ಸಂಭಾವನೆಗಿಂತ ಪಾತ್ರ ನಂಬಿದವನು. 1994ರಿಂದ “ಅಭಿನಯ ತರಂಗ’ ಮೂಲಕ ನಾಟಕ ಮಾಡಿಕೊಂಡು ಬಂದವನು.

ನಾಟಕ ನಿರ್ದೇಶನ, ನಟನೆ ಮಾಡುತ್ತಲೇ ಕಿರುತೆರೆಯಲ್ಲೂ “ಗುಗ್ಗು ನನ್ಮಕ್ಳು’, “ಐತಲಕ್ಕಡಿ’ ಧಾರಾವಾಹಿ ನಿರ್ದೇಶಿಸಿ, ಗಾಂಧಿನಗರಕ್ಕೆ ಬಂದೆ. “ಜೂಟ್‌’ ಮೂಲಕ ಸಿನಿಜರ್ನಿ ಶುರುಮಾಡಿದ ನಾನು, ಈವರೆಗೆ 75ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದೇನೆ. ಆ ಪೈಕಿ ತೆಲುಗಿನ “ನೇನು ನಾ ಪ್ರೇಮಕಥಾ’, “ಖುಯಂ ಬಾಯ್‌’ ಕೂಡ ಸೇರಿದೆ. ನನಗೀಗ ಒಳ್ಳೇ ಫ್ಲಾಟ್‌ಫಾರಂ ಕೊಟ್ಟಿರುವ “ಮಜಾ ಟಾಕೀಸ್‌’ ಇಷ್ಟಕ್ಕೆಲ್ಲಾ ಕಾರಣ’ ಅನ್ನೋದನ್ನ ಮರೆಯೋದಿಲ್ಲ.

ಟಾಪ್ ನ್ಯೂಸ್

Na

Haryana: ಸೈನಿ ಪ್ರಮಾಣವಚನಕ್ಕೆ ಬಿಜೆಪಿ ಸಿದ್ಧತೆ: ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ

Repo Rate: ಸತತ 10ನೇ ಬಾರಿಯೂ ರೆಪೋ ದರ ಯಥಾಸ್ಥಿತಿ: RBI ಗವರ್ನರ್‌ ಶಕ್ತಿಕಾಂತ್‌ ದಾಸ್

Repo Rate: ಸತತ 10ನೇ ಬಾರಿಯೂ ರೆಪೋ ದರ ಯಥಾಸ್ಥಿತಿ: RBI ಗವರ್ನರ್‌ ಶಕ್ತಿಕಾಂತ್‌ ದಾಸ್

1-jin

Haryana; ಬಿಜೆಪಿಗೆ ಸೆಡ್ದು ಹೊಡೆದು ಪಕ್ಷೇತರರಾಗಿ ಗೆದ್ದ ದೇಶದ ಶ್ರೀಮಂತ ಮಹಿಳೆ !

Bengaluru: ಹರಳು ಕೂರಿಸುವುದಾಗಿ 1 ಕೋಟಿ ರೂ. ಮೌಲ್ಯದ ಚಿನ್ನ ಕದ್ದ!

Bengaluru: ಹರಳು ಕೂರಿಸುವುದಾಗಿ 1 ಕೋಟಿ ರೂ. ಮೌಲ್ಯದ ಚಿನ್ನ ಕದ್ದ!

BBK11: ಯಾವ್ ಸೀಮೆ ಕ್ಯಾಪ್ಟನ್ ರೀ ನೀವು.. ಹಂಸಾ ಮೇಲೆ ನರಕ ವಾಸಿಗಳ ಕೂಗಾಟ

BBK11: ಯಾವ್ ಸೀಮೆ ಕ್ಯಾಪ್ಟನ್ ರೀ ನೀವು.. ಹಂಸಾ ಮೇಲೆ ನರಕ ವಾಸಿಗಳ ಕೂಗಾಟ

pramod madhwaraj

Pramod Madhwaraj;ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಆಸ್ಪತ್ರೆಗೆ ದಾಖಲು

1-koppala

Koppala: ಉದ್ಯಮಿ ಅರ್ಜುನ್ ಸಾ ಕಾಟ್ವಾ ಶವ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಆ ನಾಲ್ವರ ಒಂದು ತಪ್ಪಿನಿಂದ ಇಡೀ ಬಿಗ್ ಬಾಸ್ ಮನೆಗೆ ದೊಡ್ಡ ಶಿಕ್ಷೆ.. ಏನದು?

BBK11: ಆ ನಾಲ್ವರ ಒಂದು ತಪ್ಪಿನಿಂದ ಇಡೀ ಬಿಗ್ ಬಾಸ್ ಮನೆಗೆ ದೊಡ್ಡ ಶಿಕ್ಷೆ.. ಏನದು?

Sanju Weds Geetha 2: ‘ಸಂಜು ವೆಡ್ಸ್‌ ಗೀತಾ-2’

Sanju Weds Geetha 2: ‘ಸಂಜು ವೆಡ್ಸ್‌ ಗೀತಾ-2’

12

Bhuvanam Gaganam Movie: ಹೃದಯವೇ ಚೂರು ನಿಲ್ಲು…

Dhruva Sarja: ಮಾರ್ಟಿನ್‌ ನನ್ನ ಕೆರಿಯರ್‌ನ ಬೆಸ್ಟ್‌  ಆ್ಯಕ್ಷನ್‌

Dhruva Sarja: ಮಾರ್ಟಿನ್‌ ನನ್ನ ಕೆರಿಯರ್‌ನ ಬೆಸ್ಟ್‌  ಆ್ಯಕ್ಷನ್‌

yash shetty’s jungle mangal kannada movie

Jangal Mangal Movie: ಜಂಗಲ್‌ನಲ್ಲಿ ಮಂಗಲ್‌ ಲವ್‌ ಸ್ಟೋರಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Na

Haryana: ಸೈನಿ ಪ್ರಮಾಣವಚನಕ್ಕೆ ಬಿಜೆಪಿ ಸಿದ್ಧತೆ: ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ

4-shivamogga

Shivamogga: ಭಾರಿ ಮಳೆ: ರೈಲ್ವೆ ಹಳಿಗೆ ಜಲ್ಲಿಕಲ್ಲುಗಳು ಕೊಚ್ಚಿ ಹೋಗಿ ಸಂಚಾರದಲ್ಲಿ ವ್ಯತ್ಯಯ

Repo Rate: ಸತತ 10ನೇ ಬಾರಿಯೂ ರೆಪೋ ದರ ಯಥಾಸ್ಥಿತಿ: RBI ಗವರ್ನರ್‌ ಶಕ್ತಿಕಾಂತ್‌ ದಾಸ್

Repo Rate: ಸತತ 10ನೇ ಬಾರಿಯೂ ರೆಪೋ ದರ ಯಥಾಸ್ಥಿತಿ: RBI ಗವರ್ನರ್‌ ಶಕ್ತಿಕಾಂತ್‌ ದಾಸ್

1-jin

Haryana; ಬಿಜೆಪಿಗೆ ಸೆಡ್ದು ಹೊಡೆದು ಪಕ್ಷೇತರರಾಗಿ ಗೆದ್ದ ದೇಶದ ಶ್ರೀಮಂತ ಮಹಿಳೆ !

3-ankola

Ankola:ಸಂಭವನೀಯ ರೈಲು ಅಪಘಾತ ತಪ್ಪಿಸಿದ ಟ್ರ್ಯಾಕ್‌ಮ್ಯಾನ್ ಗೆ ರೈಲ್ವೆಅಧಿಕಾರಿಗಳಿಂದ ಸನ್ಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.