ನೆಗೆಟಿವ್‌ನಿಂದ ಪಾಸಿಟಿವ್‌ನತ್ತ …
Team Udayavani, Mar 9, 2018, 3:23 PM IST
ವಸಿಷ್ಠ ಸಿಂಹ ಎಂಬ ಯುವ ನಟನನ್ನು ನೀವು ಇಲ್ಲಿವರೆಗೆ ನೋಡಿರುವುದು ನೆಗೆಟಿವ್ ಪಾತ್ರಗಳಲ್ಲೇ. ಅದು “ರಾಜಾಹುಲಿ’ಯಿಂದ ಹಿಡಿದು ಮೊನ್ನೆ ಮೊನ್ನೆ ತೆರೆಕಂಡ “ಟಗರು’ ಚಿತ್ರದ ಚಿಟ್ಟೆ ಪಾತ್ರದವರೆಗೂ. ಸಾಮಾನ್ಯವಾಗಿ ನೆಗೆಟಿವ್ ಪಾತ್ರಗಳ ಮೂಲಕ ಬಂದವರಿಗೆ ಅಂತಹದ್ದೇ ಪಾತ್ರ ಸಿಗುತ್ತಾ ಹೋಗುತ್ತದೆ. ಕೆರಿಯರ್‌ನುದ್ದಕ್ಕೂ ವಿಲನ್ ಆಗಿಯೇ ಸಾಗಬೇಕಾಗುತ್ತದೆ. ಆದರೆ, ವಸಿಷ್ಠ ಸಿಂಹ ಮಾತ್ರ ಆ ವಿಚಾರದಲ್ಲಿ ಅದೃಷ್ಟ ಮಾಡಿದ್ದಾರೆ. ವಿಲನ್ ಆಗಿ ಬಂದ ಅವರು ಈಗ ಹೀರೋ ಆಗುತ್ತಿದ್ದಾರೆ.
ಈಗಾಗಲೇ ಅವರನ್ನು ಹೀರೋ ಮಾಡಿ ಸಿನಿಮಾ ನಿರ್ದೇಶನಕ್ಕೆ ನಿರ್ದೇಶಕರು ತಯಾರಾಗಿದ್ದಾರೆ. ಹಾಗಾಗಿ ನೆಗೆಟಿವ್‌ನಿಂದ ಪಾಸಿಟಿವ್‌ನತ್ತ ವಸಿಷ್ಠ ಎನ್ನಬಹುದು. ಈ ಬದಲಾವಣೆ ಬಗ್ಗೆ ವಸಿಷ್ಠ ಅವರಿಗೆ ಖುಷಿ ಇದೆ. ಜೊತೆಗೆ ಪಾತ್ರ ಮುಖ್ಯವೇ ಹೊರತು ಇಮೇಜ್ ಅಲ್ಲ ಎಂಬ ನಿರ್ಧಾರಕ್ಕೂ ಅವರು ಬಂದಿದ್ದಾರೆ. “ನಾನು ಇಮೇಜ್ ಬಗ್ಗೆ ತಲೆಕೆಡಿಸಿಕೊಳ್ಳೋದಿಲ್ಲ. ಮಾಡೋ ಪಾತ್ರ ಚೆನ್ನಾಗಿರಬೇಕು. ಒಬ್ಬ ಕಲಾವಿದನಾಗಿ ಒಂದು ಸಿನಿಮಾದಿಂದ ಮತ್ತೂಂದು ಸಿನಿಮಾಕ್ಕೆ ಬದಲಾವಣೆ ಬೇಕು.
ಅದನ್ನು ನಾನು ಎದುರು ನೋಡುತ್ತಿದ್ದೇನೆ ಮತ್ತು ಪ್ರತಿ ಪಾತ್ರಕ್ಕೂ ನನ್ನಿಂದ ಹೊಸದನ್ನು ಕೊಡಲು ಸಾಧ್ಯವೋ ಅದನ್ನು ಕೊಡುತ್ತಿದ್ದೇನೆ’ ಎನ್ನುತ್ತಾರೆ. ವಸಿಷ್ಠ ಸಿಂಹ ಸೋಲೋ ಹೀರೋ ಆದರೂ ಅವರ ಪಾತ್ರಗಳು ನೆಗೆಟಿವ್ ಶೇಡ್‌ನೊಂದಿಗೆ ಸಾಗಬೇಕು ಎಂಬ ಆಸೆ ಇದೆ. ನೆಗೆಟಿವ್ ಅಂಶ ಪ್ರತಿ ಮನುಷ್ಯನಲ್ಲೂ ಇರುತ್ತದೆ. ಅದನ್ನು ಪಾತ್ರಗಳಲ್ಲಿ ತುಂಬಿದರೆ ಚೆನ್ನಾಗಿರುತ್ತದೆ ಎಂಬುದು ವಸಿಷ್ಠ ಆಸೆ. “ಪಾತ್ರಗಳಲ್ಲಿ ನೆಗೆಟಿವ್ ತುಣುಕು ಇರಬೇಕು. ಆಗಲೇ ಮನುಷ್ಯ ಅನಿಸೋದು. ಸಾಮಾನ್ಯವಾಗಿ ನಾನು ನೀಟಾದ ಔಟ್ ಅಂಡ್ ಔಟ್ ಪಾಸಿಟಿವ್ ಪಾತ್ರ ಒಪ್ಪಲ್ಲ.
ನಾನು ಸಾಚಾ, ಒಳ್ಳೆಯವನು ಅನ್ನೋದೆಲ್ಲ ಕಥೆ. ಪ್ರತಿ ಮನುಷ್ಯನಲ್ಲೂ ಒಂದಲ್ಲ ಒಂದು ನೆಗೆಟಿವ್ ಅಂಶ ಇದ್ದೇ ಇರುತ್ತದೆ. ಆ ಅಂಶ ನನ್ನ ಪಾತ್ರದಲ್ಲಿದ್ದರಬೇಕೆಂಬ ಆಸೆ. ಸನ್ಯಾಸಿ ಪಾತ್ರ ಬೇಕಾದರೂ ಮಾಡುತ್ತೇನೆ. ಆದರೆ, ಒಂದು ಅಂಶದಲ್ಲಾದರೂ ಆತನ ನೆಗೆಟಿವ್ ಸೈಡ್ ತೋರಿಸಬೇಕು’ ಎನ್ನುವುದು ವಸಿಷ್ಠ ಮಾತು. ವಸಿಷ್ಠ ಸಿಂಹ ಹೀರೋ ಆಗುತ್ತಿದ್ದರೂ ಅವರಿಗೆ ವಿಲನ್ ಪಾತ್ರಗಳ ಮೇಲೆ ಅತೀವ ಪ್ರೀತಿ. ಅದು ಅವರ ಮಾತುಗಳಲ್ಲಿ ಎದ್ದು ಕಾಣುತ್ತಿತ್ತು. “ನಾನು ರಂಗಭೂಮಿ ಹಿನ್ನೆಲೆಯಿಂದ ಬಂದವನು.
ಅಲ್ಲಿ ಸಾಕಷ್ಟು ನೆಗೆಟಿವ್ ರೋಲ್‌ಗಳನ್ನು ಮಾಡಿದ್ದೆ. ಹಾಗಾಗಿಯೇ ನನಗೆ ನೆಗೆಟಿವ್ ಪಾತ್ರಗಳ ಮೇಲೆ ಒಲವು ಜಾಸ್ತಿ. ಜೊತೆಗೆ ನೆಗೆಟಿವ್ ಪಾತ್ರಗಳಲ್ಲಿ ನಟನೆಯ ಅವಕಾಶ ಕೂಡಾ ಹೆಚ್ಚು. ಯಾವುದೇ ಚಿತ್ರವನ್ನಾದರೂ ನೀವು ತೆಗೆದುಕೊಳ್ಳಿ, ಅಲ್ಲಿ ವಿಲನ್ ಯಾವುದಕ್ಕೂ ಕೇರ್ ಮಾಡಲ್ಲ, ಬಯಸಿದ್ದನ್ನು ಪಡೆಯುತ್ತಾನೆ, ತಾನು ಇಷ್ಟಪಟ್ಟಿದ್ದನ್ನು ಪಡೆದುಕೊಳ್ಳಲು ಆತನ ಹೊಡೆದಾಡತ್ತಾನೆ. ಒಂದರ್ಥದಲ್ಲಿ ಆತ ಹೀರೋಗಿಂತ ಛಲಗಾರ.
ಸಾಮಾನ್ಯವಾಗಿ ಹೀರೋಗಳಿಗೆ ಇಂಟ್ರೋಡಕ್ಷನ್, ಸಾಂಗ್ ಮೂಲಕ ಅವರ ಪಾತ್ರವನ್ನು ಬಿಲ್ಡ್ ಮಾಡುತ್ತಾರೆ. ಅದೇ ವಿಲನ್ ಒಂದು ಕೆಟ್ಟ ಲುಕ್ ಕೊಟ್ಟರೂ ಅದು ಆತನ ಇಮೇಜ್ ಅನ್ನು ಹೆಚ್ಚಿಸುತ್ತದೆ’ ಎಂದು ವಿಲನ್ ಪಾತ್ರದ ಆಳ-ವಿಸ್ತಾರದ ಬಗ್ಗೆ ಮಾತನಾಡುತ್ತಾರೆ ವಸಿಷ್ಠ. ವಸಿಷ್ಠ ಚಿತ್ರರಂಗಕ್ಕೆ ಬಂದು ಹೆಚ್ಚೇನು ವರ್ಷಗಳಾಗಿಲ್ಲ. “ರಾಜಾಹುಲಿ’ ಚಿತ್ರದ ಮೂಲಕ ಬಂದವರು ವಸಿಷ್ಠ. ಆ ಚಿತ್ರದ ನಂತರ ಸಾಕಷ್ಟು ಆಫರ್‌ಗಳು ಬಂತಂತೆ. ಜೊತೆಗೆ ಚಾಕಲೇಟ್ ಹೀರೋ ತರಹ ಇದ್ದೀಯ ನೆಗೆಟಿವ್ ಪಾತ್ರಕ್ಕೆ ಈ ಲುಕ್ ಸೆಟ್ ಆಗಲ್ಲ ಎಂಬ ಮಾತೂ ಕೇಳಿಬಂತಂತೆ.
ಆಗಲೇ ವಸಿಷ್ಠ ಎಚ್ಚೆತ್ತುಕೊಂಡಿದ್ದು. ಗಡ್ಡ, ಮೀಸೆ ಬಿಟ್ಟು, ವಕೌìಟ್ ಮಾಡಿ, ದೇಹದಾಕೃತಿಯಲ್ಲೂ ಬದಲಾವಣೆ ಮಾಡಿಕೊಂಡರಂತೆ. ಆ ನಂತರ ವಸಿಷ್ಠ ತಿರುಗಿ ನೋಡಿಲ್ಲ. ಆರಂಭದಲ್ಲಿ ಒಂದೆರಡು ಸಿನಿಮಾಗಳ ಕಥೆ ಕೇಳದೇ ಎಡವಿದ ವಸಿಷ್ಠ ಬೇಗನೇ ಪಾಠ ಕಲಿತರಂತೆ. “ನಾನು ಯಾವುದೇ ಸಿನಿಮಾವನ್ನು ಕೂಡಾ ಕಥೆ ಕೇಳದೇ, ಕ್ಲಾéರಿಟಿ ಇಲ್ಲದೇ ಒಪ್ಪಲ್ಲ. ಆರಂಭದಲ್ಲಿ ಎರಡು ಸಿನಿಮಾಗಳನ್ನು ಕಥೆ ಕೇಳದೇ ಮಾಡಿ ಅದರಿಂದ ಪಾಠ ಕಲಿತೆ. ಒಂದು ಸಿನಿಮಾದಲ್ಲಂತೂ ವಿಲನ್ ಪಾತ್ರ ಕೊಟ್ಟು, ನನ್ನನ್ನು ಹೀರೋ ಎಂದು ಬಿಂಬಿಸಿದರು.
ಅದಕ್ಕೆ ಕಾರಣ ಆ ಸಿನಿಮಾದಲ್ಲಿ ಗೊತ್ತಿದ್ದ ಮುಖ ನಾನೊಬ್ಬನೇ ಇದ್ದಿದ್ದು. ಆದರೆ, ಸಿನಿಮಾ ನೋಡಿದಾಗ ನನ್ನ ಪಾತ್ರ ಜೂನಿಯರ್ ಆರ್ಟಿಸ್ಟ್ ತರಹ ಇತ್ತು. ಆ ನಂತರ ಕಥೆ ಕೇಳದೇ ಒಪ್ಪಿಕೊಳ್ಳಲ್ಲ. ಇತ್ತೀಚೆಗೆ ಕಥೆ ಕೇಳದೇ ಒಪ್ಪಿಕೊಂಡ ಸಿನಿಮಾವೆಂದರೆ ಅದು “ಟಗರು’. ಅದಕ್ಕೆ ಕಾರಣ ಸೂರಿ ಮೇಲಿನ ನಂಬಿಕೆ. ಆದರೂ ಸಿನಿಮಾ ಆರಂಭವಾಗುವಾಗ ಪಾತ್ರ ಹೇಗೆ ಟ್ರಾವೆಲ್ ಮಾಡುತ್ತೆ ಎಂಬುದನ್ನು ಕೇಳಿಕೊಂಡಿದ್ದೆ’ ಎನ್ನುತ್ತಾರೆ ವಸಿಷ್ಠ. ವಸಿಷ್ಠಗೆ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆಯಾಗಲೀ, ಸಿನಿಮಾ ಬಗ್ಗೆ ಕುತೂಹಲವಾಗಲೀ ಇರಲಿಲ್ಲವಂತೆ.
ಚಿತ್ರರಂಗಕ್ಕೆ ಬಂದಿದ್ದು ಅಚಾನಕ್ ಆಗಿ ಎನ್ನುತ್ತಾರೆ. “ನನಗೆ ಸಿನಿಮಾ ಬಗ್ಗೆ ಆಸಕ್ತಿ ಇರಲಿಲ್ಲ. ನನಗೆ ಗಾಯಕನಾಗಬೇಕೆಂಬ ಆಸೆಯಷ್ಟೇ ಇತ್ತು. ಆದರೆ, ಅಚಾನಕ್ ಆಗಿ ಬಂದೆ. ಆರಂಭದಲ್ಲಿ ಒಂದೆರಡು ಪಾತ್ರ ಮಾಡಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಜನ ಫೋಟೋ, ಆಟೋಗ್ರಾಫ್ ಎಂದು ಗುರುತಿಸಿದಾಗ, ಸಿನಿಮಾ ಬಗ್ಗೆ ಆಸೆ ಹೆಚ್ಚಾಯಿತು. ಅದರಂತೆ ಆರಂಭದಲ್ಲಿ ಪಾಕೇಟ್ ಮನಿ ತರಹದ ಸಂಭಾವನೆ ಸಿಗುತ್ತಿತ್ತು. ಹೇಗೋ ಜೀವನ ಸಾಗುತ್ತಿತ್ತು.
ಇಷ್ಟು ಕೊಟ್ಟಿದೆ ಅಂದಮೇಲೆ ಇನ್ನೂ ಕೊಡುತ್ತೆ ಎಂಬ ನಂಬಿಕೆಯೊಂದಿಗೆ ಹೆಚ್ಚೆಚ್ಚು ಶ್ರಮ ಹಾಕಿ ಚಿತ್ರರಂಗದಲ್ಲಿ ತೊಡಗಿಕೊಂಡೆ’ ಎಂದು ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಸದ್ಯ ತೆರೆಕಂಡಿರುವ “ಟಗರು’ ಚಿತ್ರದಲ್ಲಿ ವಸಿಷ್ಠ ಚಿಟ್ಟೆ ಎಂಬ ಪಾತ್ರ ಮಾಡಿದ್ದಾರೆ. ಆದರೆ, ಸೂರಿಯವರ “ಕಡ್ಡಿಪುಡಿ’ ಚಿತ್ರದಲ್ಲಿ ಜೂನಿಯರ್ ಆರ್ಟಿಸ್ಟ್ ತರಹ ವಸಿಷ್ಠ ಹಿಂದೆ ನಿಂತಿದ್ದರು ಎಂಬುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. “ಕಡ್ಡಿಪುಡಿ ಚಿತ್ರದಲ್ಲಿ ನನ್ನ ಸ್ನೇಹಿತ ನಟಿಸುತ್ತಿದ್ದ. ಅದೊಂದು ದಿನ ಅವನನ್ನು ಬಿಡಲು ನಾನು ಸೆಟ್‌ಗೆ ಹೋದೆ.
ಆಗ ಸೂರಿಯವರು, “ಬಾ, ಹೇಗೂ ಉದ್ದಕ್ಕಿದ್ದೀಯಾ, ನಿಲ್ಲು’ ಎಂದು ಹಿಂದುಗಡೆ ನಿಲ್ಲಿಸಿದರು. ಆಗ ಅವರಿಗೆ ನನ್ನ ಪರಿಚಯವೂ ಇರಲಿಲ್ಲ. ಆ ಸೀನ್ ನಂತರವೂ ಚಿತ್ರೀಕರಣದಲ್ಲಿ ಮುಂದುವರಿಯುವಂತೆ ಹೇಳಿದರು. ಆದರೆ, ಥಿಯೇಟರ್ ಹಿನ್ನೆಲೆಯಿಂದ ಬಂದ ನನಗೆ ಸುಮ್ಮನೆ ಹಿಂದೆಲ್ಲೋ ನಿಂತುಕೊಳ್ಳಲು ಮನಸ್ಸು ಒಪ್ಪಲಿಲ್ಲ. ಆದರೆ, ಈಗ “ಟಗರು’ವಿನಲ್ಲಿ ಒಳ್ಳೆಯ ಪಾತ್ರವೇ ಸಿಕ್ಕಿದೆ’ ಎಂದು ಫ್ಲ್ಯಾಶ್‌ಬ್ಯಾಕ್‌ಗೆ ಜಾರುತ್ತಾರೆ. ಎಲ್ಲಾ ಓಕೆ, ವಸಿಷ್ಠಗೆ ಬ್ರೇಕ್ ಕೊಟ್ಟ ಸಿನಿಮಾ ಯಾವುದು ಎಂದರೆ, “ಗೋಧಿ ಮೈ ಬಣ್ಣ ಸಾಧಾರಣ ಮೈಕಟ್ಟು’ ಎನ್ನುತ್ತಾರೆ.
“ಆ ಸಿನಿಮಾ ನನ್ನ ನಿದ್ದೆ ಕೆಡಿಸ್ತು. ಅವತ್ತಿನಿಂದ ಇವತ್ತಿನವರೆಗೂ ನಾನು ಬಿಝಿ ಇರುವಂತೆ ಮಾಡಿದೆ. ಊಟ, ತಿಂಡಿ ಎಲ್ಲವನ್ನು ಮೀರಿ ಕೆಲಸ ಎಂಬುದು ವಾಡಿಕೆಯಾಗಿದೆ. ಇವತ್ತು ಒಂದು ದಿನ ಶೂಟಿಂಗ್ ಕ್ಯಾನ್ಸಲ್ ಆದರೆ, ನಾನು ಹುಚ್ಚನಾಗಿಬಿಡುತ್ತೇನೆ. ನನಗೆ ಏನು ಮಾಡಬೇಕೆಂದು ತೋಚುವುದಿಲ್ಲ. ಕೆಲಸಕ್ಕೆ ಅಷ್ಟೊಂದು ಅಡಿಕ್ಟ್ ಆಗಿದ್ದೇನೆ. ಸರಿಯಾಗಿ ನಿದ್ದೆ ಮಾಡದೇ ಎರಡೂವರೆ ತಿಂಗಳಾಯಿತು. ನಿದ್ದೆ ಏನಿದ್ದರೂ ಗಾಡಿ ರನ್ನಿಂಗ್‌ನಲ್ಲಿರುವಾಗಷ್ಟೇ’ ಎಂದು ತಾವು ಬಿಝಿ ಇರುವ ಬಗ್ಗೆ ಹೇಳುತ್ತಾರೆ.
* ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
Christmas: ಸಿಲಿಕಾನ್ ಸಿಟಿಯಲ್ಲಿ ಕಳೆಗಟ್ಟಿದ ಕ್ರಿಸ್‌ಮಸ್ ಸಂಭ್ರಮ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.