ಕಿರುತೆರೆಯಿಂದ ಹಿರಿತೆರೆಗೆ…ಆರ್ವ ಅಭಿನಯ ಪರ್ವ!
Team Udayavani, Nov 15, 2018, 3:41 PM IST
ಕಿರುತೆರೆ ಪ್ರೇಕ್ಷಕರಿಗೆ ಖಂಡಿತ ಇವರ ಪರಿಚಯವಿರುತ್ತದೆ. “ಪಾಯಿಂಟ್ ಪರಿಮಳ’, “ಪಾರ್ವತಿ ಪರಮೇಶ್ವರ’, “ಶ್ರೀಮಾನ್ ಶ್ರೀಮತಿ’, “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋ ಹೀಗೆ ಹಲವು ಕಾರ್ಯಕ್ರಮಗಳಲ್ಲಿ ವಿವಿಧ ಪಾತ್ರಗಳ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಲೋಕೇಶ್ ಬಸವಟ್ಟಿ, ಈಗ ಆರ್ವ ಎಂಬ ಹೊಸ ಹೆಸರಿನಲ್ಲಿ ನಾಯಕ ನಟನಾಗಿ ಹಿರಿತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಸುಮಾರು ಹದಿನೈದು ವರ್ಷಗಳಿಂದ ರಂಗಭೂಮಿ, ಕಿರುತೆರೆಯಲ್ಲಿ ನಟನೆಯಲ್ಲಿ ಸಕ್ರಿಯವಾಗಿದ್ದ ಆರ್ವ “ಚತುಭುìಜ’ ಚಿತ್ರದ ಮೂಲಕ ಹೀರೋ ಆಗಿ ಹಿರಿತೆರೆಗೂ ಕಾಲಿಟ್ಟಿದ್ದರು. ಈ ಚಿತ್ರದಲ್ಲಿ ಆರ್ವ ಅಭಿನಯದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದರೂ, ಚಿತ್ರ ಮಾತ್ರ ಗಲ್ಲಾ ಪೆಟ್ಟಿಗೆಯಲ್ಲಿ ಗೆಲ್ಲಲಿಲ್ಲ. ಬಳಿಕ ಮತ್ತೆ ಕಿರುತೆರೆಯಲ್ಲೇ ಸಕ್ರಿಯವಾದ ಆರ್ವ ಈಗ “ಸುರ್ ಸುರ್ ಬತ್ತಿ’ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಮತ್ತೂಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಮೂಲತಃ ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದರಿಂದ ಬೇರೆ ಬೇರೆ ಪಾತ್ರಗಳಿಗೆ ಒಗ್ಗಿಕೊಳ್ಳುವ ಬಗ್ಗೆ ತಿಳಿದಿತ್ತು. ಆದರೆ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಅಭಿನಯದ ಶೈಲಿ ಬೇರೆಯದೇ ಆಗಿರುವುದರಿಂದ, ಪಾತ್ರಗಳು ಮತ್ತು ನಿರ್ದೇಶಕರು ಬಯಸಿದಂತೆ ಅರ್ಥೈಸಿಕೊಂಡು ಪಾತ್ರವನ್ನು ನಿರ್ವಹಿಸುವುದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ನನ್ನ ಮೊದಲ ಚಿತ್ರ ಸೋತರೂ, ಅದು ಸಾಕಷ್ಟು ಅನುಭವ – ಪಾಠಗಳನ್ನು ಕಲಿಸಿದೆ. ಅದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು “ಸುರ್ ಸುರ್ ಬತ್ತಿ’ ಚಿತ್ರದಲ್ಲಿ ಅಭಿನಯಿಸಿದ್ದೇನೆ ಎನ್ನುತ್ತಾರೆ ಆರ್ವ.
ಇನ್ನು ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡುವ ಆರ್ವ, “ಒಬ್ಬ ಮುಗ್ಧ ಹುಡುಗನ ಪಾತ್ರ. ನಾನು ಈಗ ಹೇಗಿದ್ದೇನೋ ಹಾಗೆಯೇ ಪಾತ್ರವಿದೆ. ತಾಯಿ-ಮಗನ ನಡುವೆ ಬಾಂಧವ್ಯದ ಕಥೆ ಚಿತ್ರದಲ್ಲಿದೆ. ನಾವೊಂದು ಬಯಸಿದರೆ, ದೈವವೊಂದು ಬಗೆದಿತ್ತು ಎಂಬ ಮಾತೇ ಚಿತ್ರದ ಸಂದೇಶ. ನನ್ನ ತಾಯಿಯ ಪಾತ್ರವನ್ನು ಹಿರಿಯ ನಟಿ ಊವರ್ಶಿ ನಿರ್ವಹಿಸಿದ್ದಾರೆ. ಸಾಧುಕೋಕಿಲ ಅವರೊಂದಿಗೆ ಅಭಿನಯಿಸುವ ಅವಕಾಶ ಈ ಚಿತ್ರದಲ್ಲಿ ಸಿಕ್ಕಿದೆ. ನಿರ್ದೇಶಕ ಮುಗಿಲ್ ಯಾವುದೇ ಡಬಲ್ ಮೀನಿಂಗ್ ಇಲ್ಲದೆ, ಸರಳ ಕಥೆಯೊಂದನ್ನು ಇಟ್ಟುಕೊಂಡು, ಅಚ್ಚುಕಟ್ಟಾಗಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂಬ ಭರವಸೆಯ ಮಾತುಗಳನ್ನಾಡುತ್ತಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.