ಅಯ್ಯರ್ ನಾಟಕ ಮಂಡಳಿ
Team Udayavani, Aug 31, 2017, 5:03 PM IST
ಕನ್ನಡ ಚಿತ್ರಂಗಕ್ಕೆ ನಿರ್ದೇಶಕ-ನಿರ್ಮಾಪಕ-ಚಿತ್ರಸಾಹಿತಿ-ನಟ ಜಿ.ವಿ. ಅಯ್ಯರ್ ಅವರ ಕೊಡುಗೆ ಅಪಾರ ಎಂದರೆ ತಪ್ಪಿಲ್ಲ. ಕನ್ನಡ ಚಿತ್ರರಂಗಕ್ಕೆ “ಕಣ್ತೆರೆದು ನೋಡು’, “ಭೂದಾನ’, “ಹಂಸಗೀತೆ’ ಸೇರಿದಂತೆ ಹಲವು ಕ್ಲಾಸಿಕ್ ಚಿತ್ರಗಳನ್ನು ನೀಡಿದ ಅಯ್ಯರ್ ಅವರು ಬದುಕಿರುತ್ತಿದ್ದರೆ ಈ ಸೆಪ್ಟೆಂಬರ್ ಮೂರಕ್ಕೆ ನೂರು ವರ್ಷ ತುಂಬುತ್ತಿತ್ತು. ಈ ನೆನಪಲ್ಲಿ ಅವರ ಮಗ ಜಿ.ವಿ. ರಾಘವೇಂದ್ರ
ಹಾಗೂ ಕುಟುಂಬದವರು ಹೊಸ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸುತ್ತಿರುವುದರ ಜೊತೆಗೆ, ಆ ಸಂಸ್ಥೆಯ ಮೂಲಕ ಹೊಸದೊಂದು ಚಿತ್ರವನ್ನು ಪ್ರಾರಂಭಿಸುವುದಕ್ಕೆ ಸಜ್ಜಾಗಿದ್ದಾರೆ.
ಹೌದು, ಇದೇ ಸೆಪ್ಟೆಂಬರ್ ಮೂರರಂದು ಜಿ.ವಿ. ಅಯ್ಯರ್ ಅವರ 100ನೇ ಹುಟ್ಟುಹಬ್ಬವಿದೆ. ಈ ಸಂದರ್ಭದಲ್ಲಿ ಜಿ.ವಿ.
ಅಯ್ಯರ್ ಪ್ರೊಡಕ್ಷನ್ಸ್ ಎಂಬ ಸಂಸ್ಥೆ ಪ್ರಾರಂಭವಾಗುವುದರ ಜೊತೆಗೆ, ಆ ಸಂಸ್ಥೆಯಿಂದ “ಭೂ ನಾಟಕ ಮಂಡಳಿ’
ಎಂಬ ಚಿತ್ರವೂ ಪ್ರಾರಂಭವಾಗಲಿದೆ.
“ಭೂ ನಾಟಕ ಮಂಡಳಿ’ ಚಿತ್ರವು ಮಕ್ಕಳ ಚಿತ್ರವಾಗಿದ್ದು, ಈ ಚಿತ್ರಕ್ಕೆ Unfi nished Sketches ಎಂಬ ಅಡಿಬರಹವೂ ಇದೆ. ಈ ಚಿತ್ರವನ್ನು ತಮ್ಮ ತಂದೆಯವರಿಗೆ ಅರ್ಪಿಸುತ್ತಿರುವ ರಾಘವೇಂದ್ರ ಮುಂಬರುವ ವರ್ಷಗಳಲ್ಲಿ, ಈ ಸಂಸ್ಥೆಯಿಂದ ಇನ್ನಷ್ಟು ಚಿತ್ರಗಳನ್ನು ತಯಾರು ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. “ಭೂ ನಾಟಕ ಮಂಡಳಿ’ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸುವುದರ ಜೊತೆಗೆ, ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನು ರಾಘವೇಂದ್ರ ಅವರೇ ಬರೆದಿದ್ದಾರೆ.
ಇನ್ನು ಸಾಹಿತ್ಯ ಮತ್ತು ಸಂಭಾಷಣೆ ರಚಿಸುವುದರ ಜೊತೆಗೆ ಸಂಗೀತ ಸಂಯೋಜಿಸಿದ್ದಾರೆ ಗುರುರಾಜ್ ಮಾರ್ಪಲ್ಲಿ. ಇನ್ನು ರಾಜು ಶಿರಾಳಕೊಪ್ಪ ಮತ್ತು ಎಂ.ಎನ್. ಸ್ವಾಮಿ ಅವರ ಸಂಕಲನ ಈ ಚಿತ್ರಕ್ಕಿದೆ. “ಭೂ ನಾಟಕ ಮಂಡಳಿ’ ಚಿತ್ರವು ಇದೇ ಭಾನುವಾರ (ಸೆಪ್ಟೆಂಬರ್ 3) ಬೆಳಿಗ್ಗೆ ರಾಮೋಹಳ್ಳಿಯಲ್ಲಿರುವ ಜಿ.ವಿ. ಅಯ್ಯರ್ ಸ್ಟುಡಿಯೋದಲ್ಲಿ ಪ್ರಾರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್
Podcast: ಗಾಂಧೀಜಿ ಎಂದೂ ಟೋಪಿ ಧರಿಸುತ್ತಿರಲಿಲ್ಲ, ಆದರೆ ದೇಶದಲ್ಲಿ “ಗಾಂಧಿ ಟೋಪಿ’ ಜನಜನಿತ!
ಅಂದು ಪ್ರತಾಪ್ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?
New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ
Allu Arjun; ಜಾಮೀನು ಷರತ್ತು ಸಡಿಲಿಕೆ: ವಿದೇಶ ಪ್ರಯಾಣಕ್ಕೆ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.