ಗಣೇಶ್ ಹೀರೋ ಆಗಿ 13 ವರ್ಷ
ಚೆಲ್ಲಾಟದಿಂದ ಜರ್ನಿ ಶುರು
Team Udayavani, Apr 22, 2019, 3:00 AM IST
ಭಾನುವಾರ (ಏ.21) ಗಣೇಶ್ಗೆ ಎಂದಿಗಿಂತ ಸ್ಪೆಷಲ್ ಆಗಿತ್ತು. ಅದಕ್ಕೆ ಕಾರಣ ಗಣೇಶ್ ಚಿತ್ರರಂಗಕ್ಕೆ ಬಂದು ಬರೋಬ್ಬರಿ 13 ವರ್ಷ. ಹೌದು, ಗಣೇಶ್ ನಾಯಕರಾಗಿರುವ ಮೊದಲ ಚಿತ್ರ “ಚೆಲ್ಲಾಟ’ ಬಿಡುಗಡೆಯಾಗಿ ಭಾನುವಾರಕ್ಕೆ ಬರೋಬ್ಬರಿ 13 ವರ್ಷ.
ಹದಿಮೂರು ವರ್ಷಗಳ ಹಿಂದೆ ಹೊಸ ಹೀರೋ ಆಗಿ, ಭಯ, ಕಾತರದೊಂದಿಗೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಗಣೇಶ್, ಈ ಹದಿಮೂರು ವರ್ಷಗಳಲ್ಲಿ ಸ್ಟಾರ್ ನಟರಾಗಿ ಬೆಳೆದಿದ್ದಾರೆ. ಸಾಕಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಗೆಲುವಿನ ಜೊತೆಗೆ ಸೋಲು-ನೋವು ಎಲ್ಲವನ್ನು ಅನುಭವಿಸಿದ್ದಾರೆ.
ಇನ್ನು, ಗಣೇಶ್ ತಾವು ಚಿತ್ರರಂಗದಲ್ಲಿ ಹೀರೋ ಆಗಿ 13 ವರ್ಷ ಪೂರೈಸಿದ ಕುರಿತಾಗಿ ಟ್ವೀಟ್ ಮಾಡಿದ್ದಾರೆ. “ನಮಸ್ಕಾರ ನಮಸ್ಕಾರ ನಮಸ್ಕಾರ ಎನ್ನುತ್ತಾ ಚಿತ್ರರಂಗಕ್ಕೆ ಬಂದು 19 ವರ್ಷಗಳು ಹಾಗೂ ನಾಯಕ ನಟನಾಗಿ “ಚೆಲ್ಲಾಟ’ಆರಂಭಿಸಿದ 13 ವರ್ಷಗಳ ಸಿನಿಜರ್ನಿಯಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ನನ್ನ ಏಳಿಗೆಗೆ ಸಹಕರಿಸಿ, ಹಾರೈಸಿದ ಚಿತ್ರರಂಗದ ಪ್ರತಿಯೊಬ್ಬರಿಗೂ,ಮಾಧ್ಯಮ ಮಿತ್ರರಿಗೂ ಹಾಗೂ ಪ್ರೀತಿಯ ಅಭಿಮಾನಿಗಳಿಗೂ ಧನ್ಯವಾದಗಳು. ನಿಮ್ಮ ಪ್ರೀತಿ,ಹಾರೈಕೆ ಸದಾ ಇರಲಿ’ ಎಂದು ಗಣೇಶ್ ಟ್ವೀಟ್ ಮಾಡಿದ್ದಾರೆ.
ನಮಸ್ಕಾರ ನಮಸ್ಕಾರ ನಮಸ್ಕಾರ ಎನ್ನುತ್ತಾ ಚಿತ್ರರಂಗಕ್ಕೆ ಬಂದ 19 ವರ್ಷಗಳು ಹಾಗೂ ನಾಯಕ ನಟನಾಗಿ ‘ಚೆಲ್ಲಾಟ’ಆರಂಭಿಸಿದ 13 ವರ್ಷಗಳ ಸಿನಿಜರ್ನಿಯಲ್ಲಿ ಪ್ರತ್ಯಕ್ಷ,ಪರೋಕ್ಷವಾಗಿ ನನ್ನ ಏಳಿಗೆಗೆ ಸಹಕರಿಸಿ,ಹಾರೈಸಿದ ಚಿತ್ರರಂಗದ ಪ್ರತಿಯೊಬ್ಬರಿಗೂ,ಮಾಧ್ಯಮ ಮಿತ್ರರಿಗೂ ಹಾಗೂ ಪ್ರೀತಿಯ ಅಭಿಮಾನಿಗಳಿಗೂ ಧನ್ಯವಾದಗಳು. ನಿಮ್ಮ ಪ್ರೀತಿ,ಹಾರೈಕೆ ಸದಾ ಇರಲಿ pic.twitter.com/cDRzYDDj05
— Ganesh (@Official_Ganesh) April 21, 2019
ಗಣೇಶ್ ಇಲ್ಲಿವರೆಗೆ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಅವರ “99′ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಅದರ ಬೆನ್ನಿಗೆ “ಗಿಮಿಕ್’, “ಗೀತಾ’ ಚಿತ್ರಗಳು ತೆರೆಕಾಣಲಿದೆ. ಇದರ ಜೊತೆಗೆ “ವೇರ್ ಇಸ್ ಮೈ ಕನ್ನಡಕ’ ಎಂಬ ಸಿನಿಮಾವನ್ನು ಗಣೇಶ್ ಒಪ್ಪಿಕೊಂಡಿದ್ದಾರೆ. ಇದರ ಜೊತೆಗೆ ಇನ್ನೊಂದಿಷ್ಟು ಸಿನಿಮಾಗಳ ಮಾತುಕತೆ ಕೂಡಾ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.