ಚಮಕ್‌ನಲ್ಲಿ ಗಣೇಶ್ ಮಗಳು
Team Udayavani, Oct 25, 2017, 10:25 AM IST
ನಟ ಗಣೇಶ್ ಅವರ “ಚಮಕ್’ ಚಿತ್ರೀಕರಣ ಮುಗಿದು ಹೋಗಿದೆ. ಇನ್ನೇನು ಎರಡು ತಿಂಗಳಲ್ಲಿ “ಚಮಕ್’ ನಿಮ್ಮ ಮುಂದೆ ಬರಲಿದೆ. ವಿಶೇಷವೆಂದರೆ ಮೊದಲ ಬಾರಿಗೆ ಗಣೇಶ್ ಪುತ್ರಿ ಚಾರಿತ್ರ್ಯ “ಚಮಕ್’ ಮೂಲಕ ಕ್ಯಾಮರಾ ಎದುರಿಸಿದ್ದಾರೆ. ಹೌದು, “ಚಮಕ್’ ಚಿತ್ರದಲ್ಲಿ ಗಣೇಶ್ ಜೊತೆಗೆ ಮಗಳು ಚಾರಿತ್ರ್ಯ ಕೂಡಾ ನಟಿಸಿದ್ದಾರೆ. ಹಾಗಾದರೆ ಚಾರಿತ್ರ್ಯ ಪಾತ್ರವೇನು ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಮಗಳು.
ಹೌದು, ಚಾರಿತ್ರ್ಯ ಇಲ್ಲೂ ಗಣೇಶ್ ಮಗಳಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಅಪ್ಪ-ಮಗಳ ಭಾವನಾತ್ಮಕ ಸನ್ನಿವೇಶಗಳಿದ್ದು, ಆ ದೃಶ್ಯವನ್ನು ಚಿತ್ರೀಕರಿಸಲಾಗಿದೆ. “ಉದಯ ರವಿ ಬಂದನು …’ ಎನ್ನುತ್ತಾ ಚಾರಿತ್ರ್ಯ ಎಂಟ್ರಿಕೊಡಲಿದ್ದಾರಂತೆ. “ಚಿತ್ರದಲ್ಲಿ ಬರುವ ಗಣೇಶ್ ಅವರ ಮಗಳ ಪಾತ್ರವನ್ನು ಯಾರಿಂದ ಮಾಡಿಸೋದೆಂದು ಆಲೋಚಿಸುತ್ತಿದ್ದಾಗ ಬಂದ ಹೆಸರು, ಚಾರಿತ್ರ್ಯ ಅವರದು. ಅದರಂತೆ ಅವರು ನಟಿಸಿದ್ದಾರೆ.
ಮೊದಲ ಬಾರಿಗೆ ಗಣೇಶ್ ಹಾಗೂ ಅವರ ಮಗಳನ್ನು ಒಟ್ಟಿಗೆ ತೆರೆಮೇಲೆ ನೋಡಬಹುದು’ ಎನ್ನುವುದು ನಿರ್ದೇಶಕ ಸುನಿ ಮಾತು. ಅಂದಹಾಗೆ, ಚಿತ್ರದಲ್ಲಿ ಚಾರಿತ್ರ್ಯ ಕೆಲವೇ ಕೆಲವು ದೃಶ್ಯಗಳಲ್ಲಿ ಬಂದರೂ, ಅವೆಲ್ಲವೂ ಚಿತ್ರಕ್ಕೆ ತುಂಬಾ ಪ್ರಮುಖವಾದ ದೃಶ್ಯಗಳಂತೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ “ಚಮಕ್’ ಚಿತ್ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. “ಮುಂಗಾರು ಮಳೆ’ ಡಿಸೆಂಬರ್ 29 ರಂದು ಬಿಡುಗಡೆಯಾಗಿತ್ತು.
ಈಗ “ಚಮಕ್’ ಚಿತ್ರವನ್ನು ಅದೇ ದಿನ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ. “ಚಮಕ್’ನಲ್ಲಿ ಗಣೇಶ್ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದುವರೆಗೂ ಹೆಚ್ಚಾಗಿ ಲವ್ವರ್ ಬಾಯ್ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದ ಗಣೇಶ್, ಇದೇ ಮೊದಲ ಬಾರಿಗೆ ಡಾಕ್ಟರ್ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳ ಚಿತ್ರೀಕರಣ ಇಟಲಿಯಲ್ಲಿ ನಡೆದಿದೆ. ಚಿತ್ರದಲ್ಲಿ ಗಣೇಶ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.