ಕರಾವಳಿ ಶೈಲಿಯಲ್ಲಿದ್ರೂ ಪ್ರೇಕ್ಷಕರ ಮನಸೆಳೆದ ಗರುಡ ಗಮನ ವೃಷಭ ವಾಹನ
Team Udayavani, Nov 23, 2021, 10:22 AM IST
ಇತ್ತೀಚೆಗಷ್ಟೇ ರಾಜ್ ಬಿ. ಶೆಟ್ಟಿ ಮತ್ತು ರಿಷಭ್ ಶೆಟ್ಟಿ ಅಭಿನಯದ “ಗರುಡ ಗಮನ ವೃಷಭ ವಾಹನ’ ಚಿತ್ರ ತೆರೆಗೆ ಬಂದಿದ್ದು ನಿಮಗೆ ಗೊತ್ತಿರಬಹುದು. ಸದ್ಯ ಬಿಡುಗಡೆಯಾಗಿರುವ “ಗರುಡ ಗಮನ ವೃಷಭ ವಾಹನ’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ಚಿತ್ರದ ಗಳಿಕೆಯಲ್ಲೂ ನಿಧಾನವಾಗಿ ಏರಿಕೆಯಾಗುತ್ತಿದೆ. ಚಿತ್ರ ಬಿಡುಗಡೆಯಾದ ಬಹುತೇಕ ಕಡೆಗಳಲ್ಲಿ ಚಿತ್ರಮಂದಿರದ ಮುಂದೆ ಹೌಸ್‌ಫುಲ್ ಬೋರ್ಡ್ ಕೂಡ ಬೀಳುತ್ತಿದೆ. ಇದು ಚಿತ್ರತಂಡದ ಖುಷಿಗೆ ಕಾರಣವಾಗಿದೆ.
ಇದೇ ಖುಷಿಯನ್ನು ಹಂಚಿಕೊಳ್ಳಲು ಮಾಧ್ಯಮಗಳ ಮುಂದೆ ಬಂದಿದ್ದ “ಗರುಡ ಗಮನ ವೃಷಭ ವಾಹನ’ ಚಿತ್ರತಂಡ, ಚಿತ್ರದ ಬಿಡುಗಡೆಯ ಬಳಿಕ ಸಿಗುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಮಾತನಾಡಿತು. ಮೊದಲಿಗೆ ಮಾತನಾಡಿದ ನಟ ಕಂ ನಿರ್ಮಾಪಕ ರಕ್ಷಿತ್ ಶೆಟ್ಟಿ, “ತುಂಬ ಕಷ್ಟಪಟ್ಟು ಮಾಡಿದ ಒಳ್ಳೆಯ ಸಿನಿಮಾಕ್ಕೆ ಆಡಿಯನ್ಸ್, ಇಂಡಸ್ಟ್ರಿ ಕಡೆಯಿಂದಲೂ ಒಳ್ಳೆಯ ಸಪೋರ್ಟ್, ರೆಸ್ಪಾನ್ಸ್ ಸಿಗುತ್ತಿದೆ.
ಇದನ್ನೂ ಓದಿ:- 18 ಹಳ್ಳಿಗಳ ಜನರ ಸ್ಥಳಾಂತರ: ತಿರುಪತಿಗೆ ರಸ್ತೆ, ರೈಲು ಸಂಪರ್ಕ ಕಡಿತ
ಜನ ಖುಷಿಯಿಂದ ಸಿನಿಮಾ ನೋಡುತ್ತಿದ್ದಾರೆ’ ಎಂದು ಚಿತ್ರತಂಡದ ಪ್ರಯತ್ನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ನಿರ್ದೇಶಕ ಕಂ ನಟ ರಾಜ್ ಬಿ ಶೆಟ್ಟಿ ಮಾತನಾಡಿ, “ಸಿನಿಮಾ ಬಿಡುಗಡೆಯಾದ ಎಲ್ಲ ಕಡೆಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಸುಮಾರು ಎರಡುವರೆ- ಮೂರು ವರ್ಷ ಪರಿಶ್ರಮ ಹಾಕಿ ಮಾಡಿರುವುದಕ್ಕೆ ಸಾರ್ಥಕ ಎನಿಸುತ್ತಿದೆ. ಎಲ್ಲ ಥರದ ಆಡಿಯನ್ಸ್‌ಗೂ ಸಿನಿಮಾ ಇಷ್ಟವಾಗುತ್ತಿದೆ. ಗಳಿಕೆ ಕೂಡ ನಿಧಾನವಾಗಿ ಹೆಚ್ಚಾಗು ತ್ತಿದೆ.
ಇಡೀ ಟೀಮ್ ಒಂದೊಳ್ಳೆ ಸಿನಿಮಾ ಮಾಡಿದ ಖುಷಿಯಲ್ಲಿದ್ದೇವೆ. ನಿರ್ದೇಶಕನಾಗಿ ಮತ್ತು ನಟನಾಗಿ ಸಿನಿಮಾ ನನಗೆ ತೃಪ್ತಿ ನೀಡಿದೆ’ ಎಂದರು. ನಟ ರಿಷಭ್ ಶೆಟ್ಟಿ ಮಾತನಾಡಿ, “ಜನ ತುಂಬ ಎಂಜಾಯ್ ಮಾಡಿಕೊಂಡು ಸಿನಿಮಾ ನೋಡುತ್ತಿದ್ದಾರೆ. ಕೆಲವರು ಇದನ್ನು ಕರಾವಳಿ ಶೈಲಿಯ ಸಿನಿಮಾ ಅಂದರೂ, ಇದು ಎಲ್ಲ ಭಾಗದ ಪ್ರೇಕ್ಷಕರಿಗೂ ಇಷ್ಟವಾಗುತ್ತಿದೆ.
ಮಂಡ್ಯ, ಮೈಸೂರು, ಹುಬ್ಬಳ್ಳಿ, ಉತ್ತರ ಕರ್ನಾಟಕದ ಹಲವು ಕಡೆಗಳಲ್ಲಿ ಸಿನಿಮಾ ತುಂಬ ಚೆನ್ನಾಗಿ ಓಡುತ್ತಿರು ವುದೇ ಇದಕ್ಕೆ ಸಾಕ್ಷಿ. ನನ್ನ ಪಾತ್ರದ ಬಗ್ಗೆಯೂ ಎಲ್ಲರೂ ಮಾತನಾಡುತ್ತಿದ್ದಾರೆ. ಮೊದಲ ಬಾರಿಗೆ ಇಂಥದೊಂದು ಪಾತ್ರ ಮಾಡಿರುವುದಕ್ಕೆ ಖುಷಿಯಿದೆ’ ಎಂದು ಹೇಳಿಕೊಂಡರು. ಉಳಿದಂತೆ ಚಿತ್ರದ ನಿರ್ಮಾಪಕರಾದ ರವಿ ರೈ, ಸೇರಿದಂತೆ ಚಿತ್ರತಂಡದ ಅನೇಕರು “ಗರುಡ ಗಮನ ವೃಷಭ ವಾಹನ’ ಚಿತ್ರದ ಬಿಡುಗಡೆಯ ನಂತರ ಸಿಗುತ್ತಿರುವ ಪ್ರತಿಕ್ರಿಯೆ ಬಗ್ಗೆ ಖುಷಿಯನ್ನು ಹಂಚಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.