ಸಿನಿ ರಸಿಕರ ಗಮನ ಸೆಳೆದ ‘ಗರುಡ ಗಮನ, ವೃಷಭ ವಾಹನ’ ಟ್ರೈಲರ್
Team Udayavani, Oct 15, 2021, 6:06 PM IST
ಬೆಂಗಳೂರು: ‘ಒಂದು ಮೊಟ್ಟೆಯ ಕತೆ’ ಖ್ಯಾತಿಯ ರಾಜ್ ಬಿ ಶೆಟ್ಟಿ, ನಟಿಸಿ, ನಿರ್ದೇಶಿಸಿರುವ ‘ಗರುಡ ಗಮನ, ವೃಷಭ ವಾಹನ’ ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ.
ಶಿವ ಹಾಗೂ ಹರಿ ಎಂಬ ಇಬ್ಬರು ಸ್ನೇಹಿತರ ಕತೆ ಇದೆಂಬುದು ಟ್ರೇಲರ್ ನೋಡಿದರೆ ಗೊತ್ತಾಗುತ್ತಿದೆ. ಮುಂಗೋಪಿ, ಹಿಂಸೆಗೆ ಹಿಂಜರಿಯದ ವ್ಯಕ್ತಿ ಶಿವನ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ನಟಿಸಿದ್ದು, ಹರಿ ಪಾತ್ರದಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಕರಾವಳಿ ಭಾಗದ ಕತೆಯನ್ನು ಸಿನಿಮಾ ಹೊಂದಿದ್ದು, ಕರಾವಳಿ ಸಂಸ್ಕೃತಿಯು ಕತೆಯ ಒಳಗೆ ಸೇರಿಕೊಂಡಿದೆ ಎಂಬುದು ಟ್ರೇಲರ್‌ನಲ್ಲಿ ವೇದ್ಯವಾಗುತ್ತಿದೆ.
ಟ್ರೇಲರ್‌ನಲ್ಲಿಯೇ ರಾಜ್ ಬಿ ಶೆಟ್ಟಿ ನಟನೆ ಗಮನ ಸೆಳೆಯುತ್ತಿದೆ, ಸಿನಿಮಾದಲ್ಲಿ ಇನ್ನಷ್ಟು ಇಂಟೆನ್ಸ್ ಆಗಿ ರಾಜ್ ಬಿ ಶೆಟ್ಟಿ ಆವರಿಸಿಕೊಳ್ಳುವ ಎಲ್ಲ ಕುರುಹು ಟ್ರೇಲರ್‌ನಲ್ಲಿದೆ. ಹರಿ ಪೊಲೀಸ್ ಅಧಿಕಾರಿ ಆಗಿದ್ದು ಆತನ ಗೆಳೆಯ ಶಿವ ಕೊಲೆಗಾರನಾಗಿರುವ ಬಗ್ಗೆಯೂ ಟ್ರೇಲರ್‌ನಲ್ಲಿ ಸುಳಿವಿದೆ. ಕತೆಯ ಕೆಲವು ಸುಳಿವುಗಳನ್ನಷ್ಟೆ ಟ್ರೇಲರ್ ಬಿಟ್ಟುಕೊಟ್ಟಿದ್ದು, ಪೂರ್ಣ ಕತೆಯನ್ನು ಆಸ್ವಾದಿಸಲು ಸಿನಿಮಾ ಬಿಡುಗಡೆವರೆಗೆ ಕಾಯಬೇಕು.
ನಮ್ಮ ‘ಗರುಡ ಗಮನ ವೃಷಭ ವಾಹನ’ ಚಿತ್ರದ ಅನುಭವ ಟ್ರೈಲರ್ ರೂಪದಲ್ಲಿ ಇದೀಗ ನಿಮ್ಮ ಮುಂದೆ.
A short glimpse into something magnificient that is to follow! #GGVVTrailer out now ?In theatres from 19th November 2021 ✨https://t.co/3d2njOl9fO #GGVVOnNov19 #WelcomeToMangaladevi
— Rakshit Shetty (@rakshitshetty) October 15, 2021
ಸಿನಿಮಾ ಬಿಡುಗಡೆ ದಿನಾಂಕವನ್ನೂ ಘೋಷಿಸಲಾಗಿದ್ದು, ನವೆಂಬರ್ 19 ಕ್ಕೆ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಜೂನ್ ತಿಂಗಳಿನಲ್ಲಿಯೇ ಸಿನಿಮಾ ಬಿಡುಗಡೆ ಅಗುವುದಿತ್ತು, ಆದರೆ ಕೋವಿಡ್ ಕಾರಣದಿಂದ ಬಿಡುಗಡೆ ತಡವಾಗಿದೆ. ತಮ್ಮ ಸಿನಿಮಾದ ಮೇಲೆ ಬಹಳ ನಂಬಿಕೆ ಹೊಂದಿರುವ ರಾಜ್ ಬಿ ಶೆಟ್ಟಿ, ”ಯಾವುದೇ ಕಾರಣಕ್ಕೂ ನೇರವಾಗಿ ಒಟಿಟಿಯಲ್ಲಿ ನಮ್ಮ ಸಿನಿಮಾ ಬಿಡುಗಡೆ ಆಗುವುದಿಲ್ಲ” ಎಂದಿದ್ದರು. ಅಂತೆಯೇ ತಡವಾದರೂ ಸರಿ ಚಿತ್ರಮಂದಿರಗಳಿಗೆ ಸಿನಿಮಾವನ್ನು ತರುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.