ಕುಡ್ಲದ ಹುಡುಗಿಯ ಸಿನಿಗನಸು
Team Udayavani, Sep 6, 2017, 10:38 AM IST
ಮಾಡೆಲಿಂಗ್ ಕ್ಷೇತ್ರಕ್ಕೆ ಧುಮುಕಿದರೆಂದರೆ ಮುಂದೆ ಅವರು ಸಿನಿಮಾಕ್ಕೆ ಬರುತ್ತಾರೆಂದು ಆರಾಮವಾಗಿ ಊಹಿಸಿಕೊಳ್ಳಬಹುದು. ಅದಕ್ಕೆ ಸಾಕ್ಷಿಯಾಗಿ ಈಗಾಗಲೇ ಮಾಡೆಲಿಂಗ್‌ನಿಂದ ಸಿನಿಮಾಕ್ಕೆ ಸಾಕಷ್ಟು ಮಂದಿ ಬಂದಿದ್ದಾರೆ. ಈಗ ಅದಕ್ಕೆ ಹೊಸ ಸೇರ್ಪಡೆ ಅಮಿತಾ ಕುಲಾಲ್. ಯಾವ ಅಮಿತಾ ಕುಲಾಲ್ ಎಂದರೆ “ಆ ಎರಡು ವರ್ಷಗಳು’ ಸಿನಿಮಾ ತೋರಿಸಬೇಕು.
ಕೆಲವು ತಿಂಗಳ ಹಿಂದೆ ಬಿಡುಗಡೆಯಾದ “ಆ ಎರಡು ವರ್ಷಗಳು’ ಚಿತ್ರದಲ್ಲಿ ನಾಯಕಿಯಾಗುವ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ ಅಮಿತಾ. ಇಂತಿಪ್ಪ ಅಮಿತಾ ನಟಿಸಿದ “ಹ್ಯಾಪಿ ಜರ್ನಿ’ ಚಿತ್ರ ಮೊನ್ನೆಯಷ್ಟೇ ಬಿಡುಗಡೆಯಾಗಿದೆ. ಅಮಿತಾ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಅಮಿತಾ ಖುಷಿಯಾಗಿದ್ದಾರೆ. ಅಂದಹಾಗೆ, “ಜಗತ್ ಕಿಲಾಡಿ’ ಚಿತ್ರಗಳಲ್ಲಿ ಅಮಿತಾ ನಾಯಕಿಯಾಗಿ ನಟಿಸಿದ್ದಾರೆ.
ಆ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಅಂದಹಾಗೆ, ಅಮಿತಾ ಮೂಲತಃ ಕರಾವಳಿ ಹುಡುಗಿ. ಮುಂಬೈನಲ್ಲಿ ಮಾಡೆಲಿಂಗ್ ಮಾಡುತ್ತಿದ್ದ ಅಮಿತಾಗೆ ಸಿನಿಮಾ ಮಾಡಬೇಕೆಂಬ ಆಸೆ ಇತ್ತಂತೆ. ಒಳ್ಳೆಯ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾಗ ಸಿಕ್ಕಿದ್ದು, “ಹ್ಯಾಪಿ ಜರ್ನಿ’. ಸೃಜನ್ ಲೋಕೇಶ್ ನಾಯಕರಾಗಿರುವ ಈ ಚಿತ್ರಕ್ಕೆ ನಿರ್ದೇಶಕ ಶ್ಯಾಮ್ ನಾಯಕಿಗಾಗಿ ಹುಡುಕಾಟ ನಡೆಸುತ್ತಿದ್ದರು.
ಆಗ ಸಿಕ್ಕಿದ್ದು ಅಮಿತಾ ಕುಲಾಲ್. ಹಾಗಂತ ಅಮಿತಾಗೆ ಏಕಾಏಕಿ ಅವಕಾಶ ಸಿಕ್ಕಿಲ್ಲ. ಅದು ಆಡಿಷನ್ ಮೂಲಕ. ಇದನ್ನು ನೀವು ವಿಡಿಯೋ ಆಡಿಷನ್ ಎಂದು ಕರೆಯಬಹುದು. ನಿರ್ದೇಶಕರು ಕಳುಹಿಸಿಕೊಟ್ಟ ಡೈಲಾಗ್ ಹಾಗೂ ಸನ್ನಿವೇಶವನ್ನು ನಟಿಸಿ, ಅದನ್ನು ವಿಡಿಯೋ ಮಾಡಿ ಕಳುಹಿಸಿದರಂತೆ. ಹುಡುಗಿಯಲ್ಲಿ ಪ್ರತಿಭೆ ಎಂದು ಗುರುತಿಸಿದ ಶ್ಯಾಮ್ ಅವಕಾಶ ನೀಡಿದ್ದಾರೆ.
“ನನಗೆ ಸಿಕ್ಕಿರುವ ಎರಡು ಪಾತ್ರಗಳು ಭಿನ್ನವಾಗಿವೆ. “ಹ್ಯಾಪಿ ಜರ್ನಿ’ ಸಿನಿಮಾದಲ್ಲಿ ಬಬ್ಲಿ ಹುಡುಗಿಯ ಪಾತ್ರವಾದರೆ, “ಆ ಎರಡು ವರ್ಷಗಳು’ ಚಿತ್ರದಲ್ಲಿ ಭಿನ್ನವಾದ ಪಾತ್ರ ಸಿಕ್ಕಿತ್ತು. ಈಗ “ಜಗತ್ ಕಿಲಾಡಿ’ಯಲ್ಲೂ ಒಳ್ಳೆಯ ಪಾತ್ರ ಸಿಕ್ಕಿದೆ. ಮೂರೂ ಸಿನಿಮಾಗಳಿಂದಲೂ ನಾನು ಸಾಕಷ್ಟು ಕಲಿತೆ. ಮೊದಲ ಸಿನಿಮಾದಲ್ಲೇ ಒಳ್ಳೆಯ ತಂಡ ಸಿಕ್ಕ ಖುಷಿ ಇದೆ’ ಎನ್ನುವುದು ಅಮಿತಾ ಮಾತು.
ಅಂದಹಾಗೆ, ಅಮಿತಾಗೆ ಮೊದಲು ಅವಕಾಶ ಸಿಕ್ಕಿದ್ದು, “ಹ್ಯಾಪಿ ಜರ್ನಿ’ ಸಿನಿಮಾದಲ್ಲಿ. ಆದರೆ, ಆ ಚಿತ್ರ ತಡವಾಗುತ್ತಿರುವುದರಿಂದ “ಆ ಎರಡು ವರ್ಷಗಳು’ ಬಿಡುಗಡೆಯಾಗಿದೆ. ಹಾಗಾಗಿ, ಅಮಿತಾ ಕೆರಿಯರ್‌ನ ಮೊದಲ ಚಿತ್ರ “ಆ ಎರಡು ವರ್ಷಗಳು’. ಅಮಿತಾಗೆ ಒಂದು ಖುಷಿ ಇದೆ. ಅದೇನೆಂದರೆ ಇಷ್ಟು ದಿನದ ಬೆಳವಣಿಗೆ. ಸಾಮಾನ್ಯವಾಗಿ ಸಿನಿಮಾಕ್ಕೆ ಬರುವ ನಟಿಯರಿಗೆ ಯಾರದಾದರೂ ರೆಫರೆನ್ಸ್ ಅಥವಾ ಗಾಡ್‌ಫಾದರ್ ಎಂದಿರುತ್ತಾರೆ. ಅವರ ಬೆಂಬಲದಿಂದ ಅವಕಾಶ ಪಡೆಯುತ್ತಾರೆ.
ಆದರೆ, ಅಮಿತಾಗೆ ಚಿತ್ರರಂಗದಲ್ಲಿ ಯಾರೊಬ್ಬರು ಗಾಡ್‌ಫಾದರ್ ಇಲ್ಲವಂತೆ. ಸ್ವಸಾಮರ್ಥ್ಯದಿಂದ ಅವಕಾಶ ಪಡೆಯುತ್ತಿರುವ ಖುಷಿ ಅವರಿಗಿದೆ. “ನನಗೆ ಮೂರು ಸಿನಿಮಾಗಳ ಅವಕಾಶ ಸಿಕ್ಕಿದ್ದು ಕೂಡಾ ಆಡಿಷನ್ ಮೂಲಕ. ಯಾರ ರೆಫರೆನ್ಸ್ ಇಲ್ಲದೇ, ಆಡಿಷನ್‌ನಲ್ಲಿ ಭಾಗವಹಿಸಿ, ಪಾತ್ರಕ್ಕೆ ಸೂಟ್ ಆಗುತ್ತೇನೆ ಎಂಬ ಕಾರಣಕ್ಕೆ ನನಗೆ ಅವಕಾಶ ಸಿಕ್ಕಿದೆ. ಆ ಬಗ್ಗೆ ನನಗೆ ಖುಷಿ ಇದೆ. ಮುಂದೆಯೂ ಅದನ್ನೇ ಮುಂದುವರೆಸಿಕೊಂಡು ಹೋಗುತ್ತೇನೆ’ ಎನ್ನುತ್ತಾರೆ ಅಮಿತಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.