ಕನ್ನಡ ಚಿತ್ರಗಳಿಗೆ ಆದ್ಯತೆ ಕೊಡಿ
ಪಿವಿಆರ್ ಅಧಿಕಾರಿಗಳ ಎದುರು ಪುನೀತ್ ಮಾತು
Team Udayavani, Mar 7, 2020, 7:00 AM IST
“ಪಿವಿಆರ್‌ಗಳು ಕನ್ನಡ ಚಿತ್ರಗಳಿಗೆ ಹೆಚ್ಚಿನ ಆದ್ಯತೆ ಕೊಡಬೇಕು…’ ಇದು ಪುನೀತ್‌ರಾಜಕುಮಾರ್ ಎತ್ತಿರುವ ಧ್ವನಿ. ಹೌದು. ಪ್ರಸ್ತುತ ಕನ್ನಡ ಚಿತ್ರಮಂದಿರಗಳ ಸ್ಥಿತಿಗತಿ ಸರಿ ಇಲ್ಲ. ಅದರಲ್ಲೂ ಪಿವಿಆರ್‌ಗಳ ಧೋರಣೆಯಿಂದಾಗಿ ಕನ್ನಡ ಸಿನಿಮಾಗಳಿಗೆ ಪೆಟ್ಟು ಬೀಳುತ್ತಿರುವುದು ಗೊತ್ತಿರುವ ವಿಚಾರ. ಕನ್ನಡದಲ್ಲಿ ಕನ್ನಡ ಚಿತ್ರಗಳಿಗೆ ಆಗುತ್ತಿರುವ ತಾರತಮ್ಯದ ವಿರುದ್ಧ ಕೇಳಿ ಬರುತ್ತಿರುವ ಆರೋಪ, ದೂರುಗಳು ಹೊಸದೇನಲ್ಲ. ಈಗ ಪುನೀತ್‌ರಾಜಕುಮಾರ್ ಅವರೂ ಸಹ, ಕನ್ನಡ ಸಿನಿಮಾಗಳ ಪರ ಪುನಃ ಧ್ವನಿ ಎತ್ತಿದ್ದಾರೆ.
ಅದರಲ್ಲೂ ಪಿವಿಆರ್‌ಗಳಿಂದ ಕನ್ನಡ ಸಿನಿಮಾಗಳಿಗೆ ತಾರತಮ್ಯ ಆಗಬಾರದು. ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು ಎಂದು ಮನವಿ ಮಾಡಿದ್ದಾರೆ. ಸಂದರ್ಭ; “ಪಿವಿಆರ್‌ನ ನೂರನೇ ಸ್ಕ್ರೀನ್ ಉದ್ಘಾಟನೆ ಕಾರ್ಯಕ್ರಮ. ಹೌದು, ಕೆ.ಆರ್.ಪುರಂನ ಒರಾಯನ್ ಅಪ್‌ಟೌನ್ ಮಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುನೀತ್ ಹೀಗೆ ಹೇಳಿದ್ದಾರೆ. ಅದರಲ್ಲೂ, ಆ ಕಾರ್ಯಕ್ರಮದಲ್ಲಿದ್ದ ಪಿವಿಆರ್‌ನ ಉನ್ನತ ಅಧಿಕಾರಿಗಳ ಸಮ್ಮುಖದಲ್ಲೇ, ಪಿವಿಆರ್‌ಗಳು ಕನ್ನಡದ ಬಹುತೇಕ ಚಿತ್ರಗಳ ಬಗ್ಗೆ ತೋರುತ್ತಿರುವ ಅಸಡ್ಡೆ ಕುರಿತು ಹೇಳುವುದರ ಜೊತೆಯಲ್ಲಿ, ಕನ್ನಡ ಚಿತ್ರಗಳಿಗೂ ಹೆಚ್ಚು ಆದ್ಯತೆ ನೀಡಬೇಕು ಎನ್ನುವುದರ ಜೊತೆಯಲ್ಲಿ ಸಿಂಗಲ್ ಥಿಯೇಟರ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸದ್ಯದ ಪರಿಸ್ಥಿತಿ ಗಮನಿಸಿದರೆ, ಪಿವಿಆರ್‌ಗಳು ಚಿತ್ರಮಂದಿರಗಳ ಸಂಸ್ಕೃತಿ ಹಾಗು ಅವುಗಳನ್ನು ಕ್ರಮೇಣ ಕೊಲ್ಲುತ್ತಿರುವ ಕುರಿತು ಪರೋಕ್ಷವಾಗಿ ಹೇಳಿಕೊಂಡ ಅವರು, “ನನಗೆ ಈಗಲೂ ಚಿತ್ರಮಂದಿರದಲ್ಲಿ ಜನರ ಮಧ್ಯೆ ಕುಳಿತು ಸಿನಿಮಾ ವೀಕ್ಷಿಸುವುದು ಖುಷಿ ಕೊಡುತ್ತದೆ. ಅದೊಂದು ಅದ್ಭುತ ಅನುಭವ’ ಎಂದು ಮಲ್ಟಿಪ್ಲೆಕ್ಸ್ ಮಾಲೀಕರ ಎದುರು ಚಿತ್ರಮಂದಿರಗಳ ಬಗ್ಗೆ ಹೊಗಳಿದ್ದಾರೆ. ಇದೇ ವೇಳೆ ಅವರು, ಪಿವಿಆರ್‌ನಲ್ಲಿ ಅಪ್ಪಾಜಿ ಹಾಗು ರಜನಿಕಾಂತ್ ಅವರೊಂದಿಗೆ ಶಿವಣ್ಣ ಅವರ “ಜೋಗಿ’ ಚಿತ್ರ ನೋಡಿದ ಬಗ್ಗೆ ನೆನಪು ಮಾಡಿಕೊಂಡರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.