Reeshma Nanaiah: ರೀಷ್ಮಾ ಕಣ್ಣಲ್ಲಿ ಎರಡು ಕನಸು: ಯುಐ,ಕೆಡಿ ಅಡ್ಡದಲ್ಲಿ ಗ್ಲ್ಯಾಮರಸ್ ಬೆಡಗಿ
Team Udayavani, Sep 16, 2024, 1:50 PM IST
ನಟಿ ರೀಷ್ಮಾ ನಾಣಯ್ಯ (Reeshma Nanaiah) ನಿರೀಕ್ಷೆ ಕಂಗಳೊಂದಿಗೆ ಎದುರು ನೋಡುತ್ತಿದ್ದಾರೆ. ಅದಕ್ಕೆ ಕಾರಣ ಎರಡು ಸಿನಿಮಾಗಳು. ಅದೂ ಸ್ಟಾರ್ ಸಿನಿಮಾಗಳು ಎಂಬುದು ವಿಶೇಷ. ಪ್ರೇಮ್ ನಿರ್ದೇಶನದ “ಏಕ್ ಲವ್ ಯಾ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಬಲಗಾಲಿಟ್ಟು ಬಂದ ಬೆಡಗಿ ರೀಷ್ಮಾ ಈಗ “ಯು-ಐ’ (UI) ಹಾಗೂ “ಕೆ.ಡಿ’ (KD) ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಈ ಎರಡೂ ಚಿತ್ರಗಳಲ್ಲೂ ರೀಷ್ಮಾ ನಟಿಸಿದ್ದು, ಈಗಾಗಲೇ ಯು-ಐ ಚಿತ್ರದ ಹಾಡು ಭರ್ಜರಿ ಹಿಟ್ ಆಗಿದೆ.
ತಮ್ಮ ಕುರಿತು ಮಾತನಾಡುವ ರೀಷ್ಮಾ, “ನಾನೊಬ್ಬಳು ಅದೃಷ್ಟವಂತೆ. ಎರಡು ಸ್ಟಾರ್ ಸಿನಿಮಾಗಳಲ್ಲಿ ಅವಕಾಶ ಸಿಕ್ಕಿದೆ. ಯು-ಐ ಉಪೇಂದ್ರ ಅವರ ಡೈರೆಕ್ಷನ್ ಎಂದಾಗ ಸ್ವಲ್ಪ ಭಯ ಆಯ್ತು. ಅಂಥ ಲೆಜೆಂಡರಿ ಡೈರೆಕ್ಟರ್ ಅವರು. ಚಿತ್ರಕ್ಕೆ ಉಪೇಂದ್ರ ಅವರಿಗೆ ಮುಗ್ಧ ತರುಣಿಯ ಪಾತ್ರ ಬೇಕಿತ್ತು. ಕಥೆ ಹೇಳಿದ್ರು. ಸಾಕಷ್ಟು ಲುಕ್ ಟೆಸ್ಟ್ ಮಾಡಿದ್ರು. ಆಗ ಅವರಿಗೆ ಸೂಕ್ತವೆನಿಸಿ ನನ್ನನ್ನು ಆಯ್ಕೆ ಮಾಡಿದ್ರು. ಚಿತ್ರೀಕರಣ ಶುರುವಾದಾಗ ಹೆದರಿಕೊಂಡಿದ್ದೆ. ಆದರೆ, ಮೂರ್‍ನಾಲ್ಕು ಶಾಟ್ ಆದ ಮೇಲೆ ಎಲ್ಲವೂ ಹೊಂದಾಣಿಕೆಯ ಆಯಿತು. ಯಾಕಂದ್ರೆ ಉಪೇಂದ್ರ ಅವರು ಚೆನ್ನಾಗಿ ಹೇಳಿಕೊಡುತ್ತಾರೆ. ಎಲ್ಲವನ್ನು ಬಹಳ ಸಹನೆಯಿಂದ ಕಲಿಸುತ್ತಾರೆ. ಅವರನ್ನು ನೋಡಿ ಕಲಿತಿದ್ದು ಬಹಳ’ ಎಂದರು.
ಕೆಡಿ ಚಿತ್ರದ ಬಗ್ಗೆ ಮಾತನಾಡುವ ರೀಷ್ಮಾ, “ಕೆಡಿ ಚಿತ್ರಕ್ಕೆ ಒಂದು ತಿಂಗಳು ಲುಕ್ ಟೆಸ್ಟ್ ನಡಿತು. ರಿಹರ್ಸಲ್ ಆಯ್ತು. ಚಿತ್ರದಲ್ಲಿ ನನ್ನ ಪಾತ್ರವೇ ದೊಡ್ಡ ಸವಾಲು. ನನ್ನ ವ್ಯಕ್ತಿತ್ವದ ತದ್ವಿರುದ್ಧ ಪಾತ್ರವಿದು. ಸಾಕಷ್ಟು ಗೊಂದಲ ಇತ್ತು. ತಯಾರಿ ಮಾಡಿಕೊಂಡೇ ಸೆಟ್‌ಗೆ ಬರುತ್ತಿದ್ದೇನೆ. ಚಿತ್ರ ಸದ್ಯಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಗಿದಿದೆ. ಹಾಡುಗಳ ಚಿತ್ರೀಕರಣ ನಡೆಯುತ್ತಿದೆ. ನಟ ಧ್ರುವ ತುಂಬಾ ಸಫೋರ್ಟ್ ಮಾಡುತ್ತಾರೆ. ಯಾವುದೇ ಅಹಂ ತೋರಿಸದ ವ್ಯಕ್ತಿತ್ವ ಅವರದ್ದು. ಇಲ್ಲಿನ ತಂಡದ ಕೆಲಸ ಚೆನ್ನಾಗಿದೆ. ಹಾಗಾಗಿ ಸಿನಿಮಾ ಕೂಡ ಚೆನ್ನಾಗಿಯೇ ಬರುತ್ತೆ. ಎಲ್ಲಕ್ಕಿಂತ ರಮೇಶ್, ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಈ ಎಲ್ಲ ಸ್ಟಾರ್‌ಗಳ ಜೊತೆ ನಟಿಸುತ್ತಿದ್ದೀನಿ. ಇದೇ ದೊಡ್ಡದು ನನಗೆ. ಹಾಗಾಗಿ ಇನ್ನೂ ಅಚ್ಚರಿಯ ಗುಂಗಿನಲ್ಲೇ ಇದ್ದೇನೆ’ ಎನ್ನುತ್ತಾರೆ ರೀಷ್ಮಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rakesh Adiga: ನಾನು ಮಿಡಲ್ ಕ್ಲಾಸ್ ಹುಡುಗ ಮರ್ಯಾದೆ ಉಳಿಸಿ!
Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ
Bhairathi Ranagal; ಶಿವಣ್ಣ ಡ್ರೀಮ್ ಪ್ರಾಜೆಕ್ಟ್ ಭೈರತಿ ಮೈಲುಗಲ್!
BBK11: ಎದ್ದು ಬಿದ್ದು ಟಾಸ್ಕ್ ಸೋತ ಹನುಮಂತು: ರಿಯಲ್ ಹುಲಿ ನೀವೇ ಎಂದ ಸಹಸ್ಪರ್ಧಿ
Sandalwood: 99 ರೂಪಾಯಿಗೆ ಆರಾಮ್ ಸಿನಿಮಾ: ಅರವಿಂದ ಸ್ವಾಮಿ ಹೊಸ ಪ್ಲ್ರಾನ್
MUST WATCH
ಹೊಸ ಸೇರ್ಪಡೆ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.