ಕ್ರೇಜಿಸ್ಟಾರ್ ಗೋಲ್ಡನ್ ಸ್ಟಾರ್ ಜೊತೆಜೊತೆಯಲಿ..12ಕ್ಕೆ ಗಾಳಿಪಟ2, ರವಿಬೋಪಣ್ಣ ರಿಲೀಸ್
Team Udayavani, Aug 8, 2022, 10:27 AM IST
ಒಂದು ಕಡೆ “ಗಾಳಿಪಟ-2′ ಮತ್ತೂಂದು ಕಡೆ “ರವಿ ಬೋಪಣ್ಣ’. ಹೌದು, ಇದು ಈ ವಾರ ತೆರೆಕಾಣುತ್ತಿರುವ ಚಿತ್ರಗಳು. ಈ ಮೂಲಕ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಗೋಲ್ಡನ್‌ಸ್ಟಾರ್ ಗಣೇಶ್ ಒಂದೇ ವಾರ ಅಭಿಮಾನಿಗಳಿಗೆ ದರ್ಶನ ನೀಡುತ್ತಿದ್ದಾರೆ. ಗಾಳಿಪಟ-2 ತನ್ನ ಪ್ರಮುಖ ಚಿತ್ರಮಂದಿರವನ್ನಾಗಿ ವೀರೇಶ್ ಅನ್ನು ಆಯ್ಕೆ ಮಾಡಿಕೊಂಡರೆ, ರವಿ ಬೋಪಣ್ಣ ಚಿತ್ರ ಕೆ.ಜಿ.ರಸ್ತೆಯ ಸಂತೋಷ್ ಚಿತ್ರಮಂದಿರದಲ್ಲಿ ತೆರೆಕಾಣುತ್ತಿದೆ. ತುಂಬಾ ದಿನಗಳಿಂದ ತನ್ನ ಪ್ರದರ್ಶನ ನಿಲ್ಲಿಸಿದ್ದ ಸಂತೋಷ್ ಚಿತ್ರಮಂದಿರ ಈಗ ರವಿ ಬೋಪಣ್ಣ ಮೂಲಕ ಮತ್ತೆ ಪ್ರದರ್ಶನ ನೀಡಲಿದೆ.
ಈ ವಾರ ತೆರೆಕಾಣುತ್ತಿರುವ ಈ ಎರಡೂ ಚಿತ್ರಗಳ ವಿಶೇಷವೆಂದರೆ ನಾಯಕ ಗಣೇಶ್ ಹಾಗೂ ರವಿಚಂದ್ರನ್ ಅವರಿಗೆ ಈ ಚಿತ್ರಗಳು ತುಂಬಾ ಸ್ಪೆಷಲ್. ಅದಕ್ಕೆ ಕಾರಣ ಚಿತ್ರದ ಕಥೆ. ಯೋಗರಾಜ್ ಭಟ್ ಹಾಗೂ ಗಣೇಶ್ ಕಾಂಬಿನೇಶನ್‌ನಲ್ಲಿ ತೆರೆಕಂಡಿದ್ದ “ಗಾಳಿಪಟ’ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈಗ ಅದೇ ಕಾಂಬಿನೇಶನ್‌ನಲ್ಲಿ “ಗಾಳಿಪಟ-2′ ಬರುತ್ತಿದ್ದು, ನಾಯಕ ಗಣೇಶ್ ಈ ಚಿತ್ರ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಹಿಟ್‌ಲಿಸ್ಟ್ ಸೇರಿವೆ. ಹೀಗಾಗಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.
ಇನ್ನು, ರವಿಚಂದ್ರನ್ ಅವರು “ರವಿ ಬೋಪಣ್ಣ’ದಲ್ಲಿ ಒಂದು ವಿಭಿನ್ನ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಹಿಂದೆ ಅವರಿಗೆ “ದೃಶ್ಯ’ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲುವು ತಂದುಕೊಟ್ಟಿತ್ತು. ಈಗ “ರವಿ ಬೋಪಣ್ಣ’ದಲ್ಲಿ ಅದಕ್ಕಿಂತಲೂ ಭಿನ್ನವಾಗಿರುವ ಕಥೆ ಸಿಕ್ಕಿದ್ದು, ಹೊಸ ಗೆಟಪ್‌ನಲ್ಲಿ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ.
ಇದು ರವಿಚಂದ್ರನ್ ಅವರದ್ದೇ ನಿರ್ದೇಶನದ ಸಿನಿಮಾ ಕೂಡಾ. ಜೊತೆಗೆ ಈ ಚಿತ್ರದಲ್ಲಿ ನಟ ಸುದೀಪ್ ಕೂಡಾ ಲಾಯರ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಈ ಇಬ್ಬರು ನಟರಿಗೂ ತಮ್ಮ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಿದೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗ ಹಾಗೂ ವಿಭಿನ್ನ ಕಥೆಗಳಿಗೆ ಪ್ರೇಕ್ಷಕ ಜೈ ಎನ್ನುತ್ತಿರುವುದರಿಂದ ಚಿತ್ರತಂಡದ ವಿಶ್ವಾಸ ಕೂಡಾ ಹೆಚ್ಚಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್ ಭೇಟಿ: 21ರಿಂದ ಮೋದಿ ಪ್ರವಾಸ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.