ಶುಭ ಕಾಲ ಬರ್ತೈತೆ…


Team Udayavani, Feb 28, 2017, 11:40 AM IST

poonja-shunbha.jpg

ಈ ವರ್ಷ ಶುಭಾ ಪೂಂಜ ಪಾಲಿಗೆ ಮಹತ್ವದ ವರ್ಷ ಎನ್ನಬಹುದೇನೋ| ಏಕೆಂದರೆ, ಈ ವರ್ಷ ಏನಿಲ್ಲವೆಂದರೂ ಅವರ ಅಭಿನಯದ ಆರು ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಲಿವೆ. ಅವರ ವೃತ್ತಿ ಜೀವನದಲ್ಲಿ ಇಷ್ಟೊಂದು ಸಿನಿಮಾಗಳು ಒಂದೇ ವರ್ಷದಲ್ಲಿ ತೆರೆಗೆ ಅಪ್ಪಳಿಸುತ್ತಿರು ವುದು ಮೊದಲಂತೆ. ಹಾಗಾಗಿ 2017ರ ಮೇಲೆ ಶುಭ ಸಾಕಷ್ಟು ಭರವಸೆ ಇಟ್ಟು ಕೊಂಡಿದ್ದಾರೆ.

ಶುಭಾ ಪೂಂಜ ಈಗಾಗಲೇ “ನವೆಂಬರ್‌ 19′, “ಮಗಳೇ ಐ ಲವ್‌ ಯೂ’, “ತಾತನ್‌ ತಿಥಿ ಮೊಮ್ಮಗನ್‌ ಪ್ರಸ್ಥ’, “ಕರೋನ’ ಮತ್ತು ತಮಿಳಿನ “ಮಾತಂಗಿ’ ಎಂಬ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ವಿಜಯ್‌ ರಾಘವೇಂದ್ರ ಜೊತೆಗೆ ಹೆಸರಿಡದ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರಂತೆ. ಇದಲ್ಲದೆ ಹೊಸಬರ ಜತೆಯಲ್ಲಿ ಇನ್ನೂ ಹೆಸರಿಡದ ಎರಡು ಸಿನಿಮಾಗಳಲ್ಲಿ ಅವರು ನಟಿಸುವ ಸಾಧ್ಯವಿದೆ.

ಈ ಎಂಟು ಸಿನಿಮಾಗಳಲ್ಲಿ, ಈ ವರ್ಷ ಏನಿಲ್ಲವೆಂದರೂ ಆರು ಚಿತ್ರಗಳು ಬಿಡುಗಡೆಯಾಗಬಹುದೆಂದು ಶುಭ ಅವರ ನಂಬಿಕೆ. ಅದಕ್ಕೆ ಸರಿಯಾಗಿ, ಈಗಾಗಲೇ ಹೃದಯಶಿವ ನಿರ್ದೇಶನದ ತಮಿಳಿನ “ಮಾತಂಗಿ’ ರಿಲೀಸ್‌ಗೆ ರೆಡಿಯಾಗಿದೆ. ಆನಂದ ಪ್ರಿಯ ನಿರ್ದೇಶಿಸಿರುವ “ಕರೋನ’ ಕೂಡ ಪ್ರೇಕ್ಷಕರ ಮುಂದೆ ಬರೋಕೆ ಸಿದ್ಧವಾಗಿದೆ. ಉಳಿದಂತೆ ನಾಗೇಂದ್ರಪ್ರಸಾದ್‌ ನಿರ್ದೇಶನದ “ಮಗಳೇ ಐ ಲವ್‌ ಯು’ ಸಿನಿಮಾ ಕೂಡ ಚಿತ್ರೀಕರಣ ಮುಗಿಸಿ, ಡಬ್ಬಿಂಗ್‌ ಹಂತದಲ್ಲಿದೆ.

ಆರ್ಯನ್‌ ಪ್ರತಾಪ್‌ ಎಂಬ ಹೊಸ ನಿರ್ದೇಶಕನ “ನವೆಂಬರ್‌ 19′ ಚಿತ್ರಕ್ಕೆ ಸಾಂಗ್‌ ಬಾಕಿ ಉಳಿದಿದೆ. ಉಳಿದಂತೆ ಮುಸ್ಸಂಜೆ ಮಹೇಶ್‌ ಶಿಷ್ಯ ಕೃಷ್ಣ ಚಂದ್ರ ನಿರ್ದೇಶಿಸುತ್ತಿರುವ “ತಾತನ್‌ ತಿಥಿ ಮೊಮ್ಮಗನ್‌ ಪ್ರಸ್ಥ’ ಚಿತ್ರಕ್ಕೆ ಚಿತ್ರೀಕರಣ ನಡೆಯುತ್ತಿದೆ. ವಿಜಯ್‌ ರಾಘವೇಂದ್ರ ಜತೆಗಿನ ಹೊಸ ಚಿತ್ರ ಕೂಡ ಚಿತ್ರೀಕರಣದಲ್ಲಿದೆ. ಹಾಗಾಗಿ ಈ ಎಲ್ಲಾ ಚಿತ್ರಗಳು ಈ ವರ್ಷ ಬಿಡುಗಡೆಯಾಗುವ ಉತ್ಸಾಹದಲ್ಲಿ ಅವರಿದ್ದಾರೆ.

ಕೇವಲ ಸಿನಿಮಾ ಮಾತ್ರವಲ್ಲ, ಸದ್ದಿಲ್ಲದೆಯೇ ಅವರು ಪ್ರಾಣಿಗಳ ಸೇವೆಯನ್ನೂ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೊಸನಗರ ಮಠದಲ್ಲಿರುವ ಗೋವುಗಳ ರಕ್ಷಣೆಗೆ ಸಂಬಂಧಿಸಿದಂತೆ ಹೊಸದೊಂದು ಯೋಜನೆ ಹಾಕಿಕೊಂಡಿದ್ದಾರಂತೆ. ಗೋ ಸಂರಕ್ಷಣೆಗೆ ನಿಂತಿರುವ ಮಠಕ್ಕೆ ಇಂತಿಷ್ಟು ಅಂತ ಸಹಾಯಧನ ಮಾಡುವ ಮೂಲಕ ಹೊಸ ಸೇವೆಗೆ ಅಣಿಯಾಗುತ್ತಿದ್ದಾರೆ. 

ಕೊಲ್ಲೂರಿನಲ್ಲೂ ಅಂಥದ್ದೊಂದು ಗೋ ರಕ್ಷಣೆ ಸಂಘವಿದ್ದು, ಅದಕ್ಕೂ ತಮ್ಮ ಕೈಲಾದ ಸೇವೆಗೆ ಬದ್ಧರಾಗಿದ್ದಾರಂತೆ. ಕಳೆದ ಒಂದು ದಶಕದಿಂದಲೂ ಬಳಲುತ್ತಿರುವ ಪ್ರಾಣಿಗಳನ್ನು ರಕ್ಷಿಸಿ, ಪ್ರಾಣಿ ದಯಾ ಸಂಘ ಸೇರಿದಂತೆ ಎಸ್‌ಪಿಸಿಎ ಎಂಬ ಸಂಸ್ಥೆಗೆ ಶುಭಾಪೂಂಜಾ ಸದ್ದಿಲ್ಲದೆಯೇ ನೆರವಾಗುತ್ತಿದ್ದಾರೆ.

ಟಾಪ್ ನ್ಯೂಸ್

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ

1-ree

Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್

mamata

West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Love Reddy movie released today

Love Reddy: ತೆರೆಗೆ ಬಂತು ʼಲವ್‌ ರೆಡ್ಡಿʼ

tenant kannada movie

Sandalwood: ತೆರೆಗೆ ಬಂತು ʼಟೆನೆಂಟ್ʼ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

7

Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.