ಸರ್ಕಾರಿ ಹಾಡು ಬಂತು ದೇವರ ಜೊತೆ ಚಂದನ್ ಶೆಟ್ಟಿ
Team Udayavani, May 22, 2017, 11:58 AM IST
ಸರ್ಕಾರದ ಹಾಡು ಹೊರಬಂದಿದೆ. ಜನ ಕೂಡಾ ಕೇಳಿ ಖುಷಿಪಟ್ಟಿದ್ದಾರೆ! ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ಇಲ್ಲಿ ನಾವು ಹೇಳುತ್ತಿರುವುದು “ಸರ್ಕಾರಿ ಕೆಲಸ ದೇವರ ಕೆಲಸ’ ಚಿತ್ರದ ಆಡಿಯೋ ಬಗ್ಗೆ. “ಜೋಗಿ’ ಚಿತ್ರ ನಿರ್ಮಿಸಿರುವ ಅಶ್ವಿನಿ ರಾಮ್ ಪ್ರಸಾದ್ ನಿರ್ಮಾಣದ “ಸರ್ಕಾರಿ ಕೆಲಸ ದೇವರ ಕೆಲಸ’ ಚಿತ್ರದ ಆಡಿಯೋ ಇತ್ತೀಚೆಗೆ ಉತ್ತರ ಕರ್ನಾಟಕದ ತವರೂರು ಎನಿಸಿರುವ ವಿಜಾಪುರದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ.
15000 ಅಧಿಕ ಜನರ ಎದುರು ಆಡಿಯೋ ಬಿಡುಗಡೆ ಮಾಡಿದ ಚಿತ್ರತಂಡ ಖುಷಿಯಾಗಿದೆ. ಈ ಚಿತ್ರದ ಹಾಡಿನಲ್ಲಿ ಚಂದನ್ ಶೆಟ್ಟಿ ಕೂಡಾ ಕಾಣಿಸಿಕೊಂಡಿದ್ದಾರೆ. “ದಗಲ್‌ಬಾಜಿ’ ಹಾಡುನಲ್ಲಿ ಚಂದನ್ ಶೆಟ್ಟಿ ಇಲ್ಲಿ ಮಾಡರ್ನ್ ಸ್ವಾಮೀಜಿ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಹಿರಿತೆರೆಯಲ್ಲಿ ಕಾಣಿಸಿಕೊಂಡಿರುವ ಚಂದನ್ ಶೆಟ್ಟಿ ಸಹಜವಾಗಿಯೇ ಖುಷಿಯಾಗಿದ್ದಾರೆ.”ಹಾಡು ತುಂಬಾ ಚೆನ್ನಾಗಿದೆ. ಸಾಮಾಜಿಕ ಕಳಕಳಿಯ ಹಾಗೂ ಇಂದಿನ ವ್ಯವಸ್ಥೆಯನ್ನು ಎತ್ತಿ ತೋರಿಸುವಂತಹ ಹಾಡು.
ಹಾಗಾಗಿ, ನಾನು ಆ ಹಾಡಿನಲ್ಲಿ ಕಾಣಿಸಿಕೊಂಡೆ. ಎಲ್ಲರಿಂದಲೂ ಹಾಡುಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ’ ಎನ್ನುವುದು ಚಂದನ್ ಶೆಟ್ಟಿ ಮಾತು. ಚಿತ್ರದ “ದಗಲ್‌ಬಾಜಿ’ ಹಾಡಿನ ಮಾತನಾಡುವ ಗೀತರಚನೆಕಾರ ವಿ.ನಾಗೇಂದ್ರಪ್ರಸಾದ್, ಸರ್ಕಾರದ ವ್ಯವಸ್ಥೆ, ಅಧಿಕಾರ ಸೇರಿದಂತೆ ಇತರ ವಿಷಯಗಳನ್ನು ಇಲ್ಲಿ ವಿಡಂಬನಾತ್ಮಕವಾಗಿ ಹೇಳಲಾಗಿದೆ. ನಿರ್ಮಾಪಕರಿಗೆ ಸಿನಿಮಾ ಹಾಗೂ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಅನುಭವವಿದ್ದು, ಜನರ ನಾಡಿಮೀಡಿತ ತಿಳಿದ ಕಾರಣ ಒಳ್ಳೆಯ ಹಾಡು ಗಳನ್ನು ಮಾಡಿಸಿದ್ದಾರೆ’ ಎನ್ನುತ್ತಾರೆ ಚಂದನ್ ಶೆಟ್ಟಿ.
ಹೊರಟಿದೆ ಸರ್ಕಾರಿ ರಥ: “ಸರ್ಕಾರಿ ಕೆಲಸ ದೇವರ’ ಕೆಲಸ ಚಿತ್ರವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ “ಸರ್ಕಾರಿ ರಥ’ ಎಂಬ ವಾಹನವೊಂದನ್ನು ಸಿದ್ಧಪಡಿಸಿದ್ದು, ಈ ವಾಹನ ರಾಜ್ಯಾದ್ಯಂತ ಸಂಚರಿಸಿ ಸಿನಿಮಾ ಬಗ್ಗೆ ಜನರಿಗೆ ಮಾಹಿತಿ ನೀಡಲಿದೆ. ಮೈಸೂರು, ಹಾಸನ, ಗದಗ, ರಾಣೆಬೆನ್ನೂರು, ಹುಬ್ಬಳ್ಳಿ ಸೇರಿದಂತೆ ಅನೇಕ ಕಡೆ ಸಂಚರಿಸಿ ಸಿನಿಮಾದ ಹಾಡು, ಟೀಸರ್ ಪ್ರದರ್ಶನ ಮಾಡಲಿದೆ.
“ಸಿನಿಮಾ ಬಿಡುಗಡೆಗೆ ಮುನ್ನ ಸಿನಿಮಾ ಬಗ್ಗೆ ಜನರಿಗೆ ಮಾಹಿತಿ ಇರಬೇಕು. ಆ ಸಿನಿಮಾದೊಳಗಡೆ ಏನಿರಬಹುದೆಂಬ ಕಲ್ಪನೆ ಅವರಿಗೆ ಬರಬೇಕು. ಆ ಕಾರಣದಿಂದ “ಸರ್ಕಾರಿ ರಥ’ ಎಂಬ ವ್ಯಾನ್‌ವೊಂದನ್ನು ಸಿದ್ಧಪಡಿಸಿದ್ದೇವೆೆ’ ಎನ್ನುವುದು ನಿರ್ಮಾಪಕ ಅಶ್ವಿನಿ ರಾಮ್‌ಪ್ರಸಾದ್ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್ ದಾಖಲೆ ಮುರಿದ ಟೀಂ ಇಂಡಿಯಾ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.