ಅಜ್ಜನಾದ ದತ್ತಣ್ಣ!
Team Udayavani, Aug 9, 2017, 10:50 AM IST
ಹಿರಿಯ ಕಲಾವಿದ ದತ್ತಣ್ಣ ಈಗ “ಅಜ್ಜ’ ಆಗಿದ್ದಾರೆ. ಅರೇ, ಅದರಲ್ಲೇನು ವಿಶೇಷ ಎಂಬ ಪ್ರಶ್ನೆ ಎದುರಾಗಬಹುದು. ಅವರಿಗೆ ಅಜ್ಜನ ವಯಸ್ಸಾಗಿದೆ ನಿಜ. ಇದು ರೀಲ್ ಸುದ್ದಿ. ಅಂದರೆ, “ಅಜ್ಜ’ ಎಂಬ ಚಿತ್ರದಲ್ಲಿ ಅವರು ಅಜ್ಜನಾಗಿ ನಟಿಸುತ್ತಿದ್ದಾರೆ. ಕೆ.ಪಿ. ಚಿದಾನಂದ್ ನಿರ್ಮಾಣದ ಈ ಚಿತ್ರವನ್ನು ವೇಮಗಲ್ ಜಗನ್ನಾಥರಾವ್ ನಿರ್ದೇಶಿಸಿದ್ದಾರೆ. ಈಗಾಗಲೇ ಚಿತ್ರದ ಮೊದಲ ಹಂತದ ಚಿತ್ರೀಕರಣ ಮಡಿಕೇರಿ ಸುತ್ತ ಮುತ್ತ ಸುಮಾರು ಹದಿನೆಂಟು ದಿನಗಳ ಕಾಲ ನಡೆದಿದೆ.
ಇದೀಗ ಕುಮಟಾ, ಬಸರೂರು ಹಾಗೂ ಇತರ ಸ್ಥಳಗಳಲ್ಲಿ ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದೆ ತಂಡ. “ಅಜ್ಜ’ ಎಂಬ ಶೀರ್ಷಿಕೆಗೆ “ಆನ್ ಟೋಲ್ಡ್ ರಿಯಲ್ ಮಿಸ್ಟರಿ’ ಎಂಬ ಅಡಿಬರಹವಿದೆ. ಇದೊಂದು ಕುತೂಹಲದ ಕಥಾವಸ್ತು. ಇಲ್ಲಿ ಅಜ್ಜ, ಮಹಾನ್ ಬುದ್ದಿಜೀವಿ, ಟೆಲಿಪತಿ ಕೂಡಾ ಗೊತ್ತು, ಚಿತ್ರ ಬಿಡುಸುವುದರಲ್ಲಿಯೂ ನಿಸ್ಸೀಮ. ಅಜ್ಜನಿರುವ ಮನೆಗೆ ನಾಲ್ವರು ವೈದ್ಯಕೀಯ ವಿಧ್ಯಾರ್ಥಿಗಳು ಬರುತ್ತಾರೆ.
ಹಳ್ಳಿಯ ಗುಡ್ಡಗಾಡು ಪ್ರದೇಶದಲ್ಲಿ ಉಚಿತ ವೈದ್ಯಕೀಯ ಸೌಲಭ್ಯ ನೀಡುವ ಈ ವೈದ್ಯರ ತಂಡ ಒಂದು ಹಂತದಲ್ಲಿ ಹೇಗೆ ಸಿಕ್ಕಿ ಹಾಕಿಕೊಂಡು ಹೋರಾಟ ನಡೆಸುವ ಸಂದರ್ಭ ಎದುರಾಗುತ್ತೆ ಎಂಬುದು ಚಿತ್ರದ ಕಥಾ ಹಂದರವಂತೆ. ಚಿತ್ರದಲ್ಲಿ ಬೇಬಿ ಕೃತಿಶ್ರೀ, ದೀಪಕ್ ರಾಜ್, ರಾಜ್ ನವೀನ್, ಮಾಧುರಿ, ಆಶಿನಿ, ಲತೀಶ್ ಕೂರ್ಗ್ ಇತರರು ನಟಿಸಿದ್ದಾರೆ. ಸಾಯಿ ಕಿರಣ್ ಎರಡು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ರಾಜು ಶಿರಾಳಕೊಪ್ಪಕ್ಯಾಮೆರಾ ಹಿಡಿದರೆ, ಶಿವಯಾದವ್ ಸಂಕಲನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.