ಪುರುಷೋತ್ತಮ ಚಿತ್ರೀಕರಣ ಪೂರ್ಣ
Team Udayavani, Jul 29, 2021, 2:46 PM IST
ಜಿಮ್ ರವಿ ಮೊದಲ ಬಾರಿ ನಾಯಕನಾಗಿ ಕಾಣಿಸಿಕೊಂಡಿರುವ “ಪುರುಷೋತ್ತಮ’ ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ. ಹಾಡಿನ ಚಿತ್ರೀಕರಣದೊಂದಿಗೆ ಪೂರ್ಣಗೊಂಡಿದ್ದು, ಎಸ್.ವಿ.ಅಮರನಾಥ್ ನಿರ್ದೇಶನದಲ್ಲಿ ಈ ಚಿತ್ರ ತಯಾರಾಗುತ್ತಿದೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕರು, “ಇದು ಮೂರನೇ ಚಿತ್ರವಾಗಿದೆ. ಗಂಡ-ಹೆಂಡತಿ ನಡುವಿನ ಪ್ರೇಮಕತೆಯಾಗಿರುವುದಿಲ್ಲ. ಕುಟುಂಬ ಸಮೇತ ನೋಡಬಹುದಾದ ಕುತೂಹಲಕರ ಕತೆ ಇರಲಿದೆ. ನಿಗದಿತ ದಿನಕ್ಕಿಂತ ಎರಡು ದಿವಸ ಮುಂಚೆ ನಲವತ್ತು ದಿನಗಳಲ್ಲಿ ಚಿತ್ರೀಕರಣವನ್ನು ಮುಗಿಸಲಾಗಿದೆ’ ಎಂದರು.
ಇದನ್ನೂ ಓದಿ:‘ಕೆಜಿಎಫ್’ ಅಡ್ಡಾಗೆ ಖಡ್ಗ ಹಿಡಿದು ಎಂಟ್ರಿ ಕೊಟ್ಟ ‘ಅಧೀರ’: ಸಂಜು ಬಾಬಾ ರಗಡ್ ಲುಕ್ ರಿಲೀಸ್
ರವಿಚಂದ್ರನ್ ಅಭಿನಯದ “ಅಪೂರ್ವ’ದ ನಾಯಕಿ ಅಪೂರ್ವ ಪತ್ನಿಯಾಗಿ ನಟಿಸಿದ್ದಾರೆ. ಇನ್ನು ತಮ್ಮ ಪಾತ್ರದ ಬಗ್ಗೆ ಮಾತನಾಡುವ ಜಿಮ್ ಎ.ವಿ.ರವಿ, “ಚಿತ್ರದಲ್ಲಿ ಯಾರನ್ನು ವಿಜೃಂಭಿಸಿಲ್ಲ. ನಾನು ನಾಯಕ ಅನ್ನುವ ಬದಲು ಒಂದು ಒಳ್ಳೆ ಪಾತ್ರ ಮಾಡಿದ್ದೇನೆಂದು ಹೇಳಬಹುದು. ಸ್ನೇಹಿತರು ಉತ್ತೇಜನ ನೀಡಿದ್ದರಿಂದಲೇ ನಾಯಕನಾಗಲು ತೀರ್ಮಾನ ತೆಗೆದುಕೊಂಡೆ. ಸುಂದರ ಸಂಸಾರ ಹೇಗಿರುತ್ತದೆಂದು ತಿಳಿಸಲು ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಅವರೊಂದಿಗೆ ಸೇರಿಕೊಂಡು ಸಾಹಿತ್ಯ ರಚಿಸಲಾಗಿದೆ. ದೀಪಾವಳಿಗೆ ತೆರೆಗೆ ತರಲು ಚಿಂತನೆ ನಡೆಸಲಾಗಿದೆ’ ಎಂದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.