ಏಪ್ರಿಲ್‌ನಲ್ಲಿ ಹೊಸಬರ ಹ್ಯಾಂಗೋವರ್!
Team Udayavani, Mar 27, 2018, 2:39 PM IST
ವಿಠಲ್‌ಭಟ್ ನಿರ್ದೇಶನದ “ಹ್ಯಾಂಗೋವರ್’ ಬಹುತೇಕ ಚಿತ್ರೀಕರಣ ಮುಗಿದಿದೆ. ಚಿತ್ರದ ಶೀರ್ಷಿಕೆ ಕೇಳಿದಾಕ್ಷಣ, ತಕ್ಷಣವೇ ನೆನಪಾಗೋದು ಹಾಲಿವುಡ್‌ನ “ಹ್ಯಾಂಗೋವರ್ 1 2 3′ ಚಿತ್ರಗಳು. ಆದರೆ, ಆ ಚಿತ್ರಗಳಿಗೂ ಕನ್ನಡದ ಈ “ಹ್ಯಾಂಗೋವರ್’ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಶೀರ್ಷಿಕೆಗೆ ತಕ್ಕಂತೆ ಇಲ್ಲೂ ಅದೇ ರೀತಿಯ ಹ್ಯಾಂಗೋವರ್ ಇದೆಯಂತೆ. ಮೂವರು ಯುವಕರು ಕುಡಿದ ನಶೆಯಲ್ಲಿ ಮಾಡುವ ಕಿತಾಪತಿ ಚಿತ್ರದ ಹೈಲೈಟ್. ಅದನ್ನು ನಿರ್ದೇಶಕರು ಚಿತ್ರಕಥೆಯಲ್ಲಿ ಹೊಸದಾಗಿ ಹೇಳುತ್ತಾ ಹೋಗಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ವಿಭಿನ್ನ ತಿರುವುಗಳೊಂದಿಗೆ ಸಾಗುವ ಕಥೆ ಮನರಂಜನೆಯಲ್ಲಿ ಸಾಗಲಿದೆ.
ಕಾಕ್‌ಟೇಲ್ ವಿತ್ ಸೆಲಬ್ರಿಟಿ ಡಾನ್ಸ್ ಷೋ ಕಾರ್ಯಕ್ರಮಕ್ಕೆ ಮೂವರು ಹುಡುಗರು ಮತ್ತು ಮೂವರು ಹುಡುಗಿಯರು ಹೋಗಿ, ಅಲ್ಲಿ ನಡೆಯುವ ಪಾರ್ಟಿಯಲ್ಲಿ ಎಂಜಾಯ್ ಮಾಡಿ, ನಂತರ ನಾಯಕನ ಮನೆಗೆ ಹಿಂದಿರುಗುತ್ತಾರೆ. ಆದರೆ, ಬೆಳಗ್ಗೆ ಅವರೆಲ್ಲರೂ ಎದ್ದೇಳುವ ಹೊತ್ತಿಗೆ ಹುಡುಗಿಯೊಬ್ಬಳ ಕೊಲೆಯಾಗಿರುತ್ತದೆ. ಅದು ಯಾಕೆ ನಡೆಯುತ್ತೆ ಎಂಬುದು ಸಸ್ಪೆನ್ಸ್.
ಈ ಚಿತ್ರದ ಇನ್ನೊಂದು ವಿಶೇಷವೆಂದರೆ, ಚಿತ್ರದಲ್ಲಿ ಬರುವ ಸೆಲೆಬ್ರೆಟಿ ಡ್ಯಾನ್ಸ್ ಷೋಗೆ ನೀತು ಅವರು ಹೆಜ್ಜೆ ಹಾಕಿದ್ದಾರೆ. ಛಾಯಾಗ್ರಾಹಕ ಯೋಗಿ ಅವರು ಚಿತ್ರದ ಆ ಹಾಡನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಇನ್ನು, ಭರತ್, ರಾಜ್ ಮತ್ತು ಚಿರಾಗ್ ಮೂವರು ಹೀರೋಗಳು. ಇವರಿಗೆ ಮಹತಿ, ಸಹನ್ ಮತ್ತು ನಂದಿನಿ ನಾಯಕಿಯರು.
ಈ ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ನೀಡಿದರೆ, ಬಹದ್ದೂರ್ ಚೇತನ್, ಕೃಷ್ಣ ಅವರ ಸಾಹಿತ್ಯವಿದೆ. ಗಣೇಶ್ ರಾಣೆಬೆನ್ನೂರು ಸಂಭಾಷಣೆ ಬರೆದಿದ್ದಾರೆ. ರಾಕೇಶ್ ಈ ಚಿತ್ರದ ನಿರ್ಮಾಪಕರು. ಚಿತ್ರದಲ್ಲಿ ತೆಲುಗು ಖ್ಯಾತಿಯ ಶಫಿ, ನೀನಾಸಂ ಅಶ್ವತ್, ಕೆ.ಎಸ್.ಶ್ರೀಧರ್, ಯತಿರಾಜ್ ಮುಂತಾದವರು ನಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ
ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ದಾಸನಿಗೆ ಖಾಕಿ ಶಾಕ್: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ
Vijay Raghavendra: ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ರುದ್ರಾಭಿಷೇಕಂ’
Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್; ದಶಕದ ಬಳಿಕ ಕನ್ನಡಕ್ಕೆ
Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್ ಪ್ರಸಾದ್ ಸಿನಿಮಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.