ಚಂದನವನದಲ್ಲಿ ಯುಗಾದಿ ಸಂಭ್ರಮ
Team Udayavani, Apr 6, 2019, 11:23 AM IST
ಇಂದು ನಾಡಿನಾದ್ಯಂತ ಯುಗಾದಿ ಸಂಭ್ರಮ. ಹೊಸವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲು
ಚಂದನವನದ ತಾರೆಯರೂ ಕೂಡ ಭರ್ಜರಿಯಾಗಿ ತಯಾರಿ ನೆಡೆಸಿದ್ದಾರೆ. ಇದೇ ವೇಳೆ ಯುಗಾದಿಯ ಹಬ್ಬದ ಸಂಭ್ರಮ, ಸಿದ್ಧತೆಗಳ ಬಗ್ಗೆ ಹಲವು ತಾರೆಯರು ಮಾತನಾಡಿದ್ದಾರೆ. ಅದರ ಬಗ್ಗೆ ಸಣ್ಣದೊಂದು ರೌಂಡಪ್..
ಯುಗಾದಿ ಅಂದ್ರೇನೆ ಅಲ್ಲಿ ಏನೋ ಒಂಥರಾ ಸಂಭ್ರಮ ಇರುತ್ತೆ. ಮನೆಯಲ್ಲಿ ಎಲ್ಲರೂ ಜೊತೆಯಾಗಿದ್ದು ಪೂಜೆ, ಮಾತುಕತೆ, ಹಾಡು-ಹರಟೆ ಎಲ್ಲದನ್ನೂ ಮಾಡುವುದಕ್ಕೆ ಸಿಗುವ ಅವಕಾಶ. ಕಾಲ ಬದಲಾದಂತೆ ಯುಗಾದಿಯ ಸೆಲೆಬ್ರೇಷನ್ ಕೂಡ ಬದಲಾಗ್ತಿದೆ. ಮೊದಲೆಲ್ಲ ಯುಗಾದಿ ಅಂದ್ರೆ ಹೊಸ ಬಟ್ಟೆ ತೆಗೆದುಕೊಳ್ಳುವ ಕ್ರೇಜ್ ಜೋರಾಗಿತ್ತು. ಆದ್ರೆ ಈಗ ಹೊಸ ಬಟ್ಟೆಯ ಕ್ರೇಜ್ ಇಲ್ಲ. ಆದಷ್ಟು ಮನೆಯಲ್ಲಿದ್ದು, ಎಲ್ಲರ ಜೊತೆಗೆ ಹಬ್ಬವನ್ನು ಸೆಲೆಬ್ರೇಷನ್ ಮಾಡುತ್ತೇನೆ. ಅದ್ರಲ್ಲೂ ಇಂದಿಗೂ ಯುಗಾದಿಯಲ್ಲಿ ಮನೆಯ ಹಬ್ಬದೂಟವನ್ನು ಮಿಸ್ ಮಾಡಿಕೊಳ್ಳುವುದಿಲ್ಲ.
●ರಚಿತಾ ರಾಮ್
ನನಗೆ ಯುಗಾದಿ ಅಂದರೆ ಚಿಕ್ಕಂದಿನಿಂದಲೂ ಎಕ್ಸೈಮೆಂಟ್. ಆಗ ರಜೆ ಸಿಗುತ್ತೆ, ಹೊಸ ಬಟ್ಟೆ ಕೊಡಿಸ್ತಾರೆ ಎಂಬ ಎಕ್ಸೈಮೆಂಟ್ ಇತ್ತು. ಈಗ ಬಟ್ಟೆಯ ಎಕ್ಸೈಮೆಂಟ್ ಹೋಗಿದೆ. ಆದರೆ, ಹಬ್ಬದ ದಿನ ಶೂಟಿಂಗ್‌ನಿಂದ ಬಿಡುವು ಮಾಡಿಕೊಂಡು ಇಡೀ ದಿನ ಮನೆಯಲ್ಲಿರುತ್ತೇನೆ. ಅಮ್ಮ ಹಬ್ಬದೂಟ ಮಾಡುತ್ತಾರೆ. ಮನೆಯಲ್ಲಿ ನಾನೇ ಪೂಜೆ ಮಾಡಿ, ಇಡೀ ಕುಟುಂಬ ಒಟ್ಟಾಗಿ ಕುಳಿತು ಊಟ ಮಾಡುತ್ತೇವೆ. ಯುಗಾದಿ ದಿನ ಮನೆಬಿಟ್ಟು ಎಲ್ಲೂ ಹೋಗಲ್ಲ. ಫ್ಯಾಮಿಲಿ ಜೊತೆಗೆ ಖುಷಿಯಾಗಿರುತ್ತೇನೆ.
●ಹರಿಪ್ರಿಯಾ
ಚಿಕ್ಕಂದಿನಿಂದಲೂ ನನಗಿರುವ ಯುಗಾದಿ ಕ್ರೇಜ್ ಅಂತೂ, ಒಂಚೂರೂ ಕಡಿಮೆಯಾಗಿಲ್ಲ. ಎಷ್ಟೇ ಕೆಲಸ ಕಾರ್ಯಗಳಿದ್ದರೂ, ಯುಗಾದಿ ಹಬ್ಬವನ್ನು ಮಿಸ್ ಮಾಡದೆ ಮನೆಯವರ ಜೊತೆ ಆಚರಿಸುತ್ತ ಬಂದಿದ್ದೇನೆ. ಯುಗಾದಿ ದಿನ ಹೊಸ ಬಟ್ಟೆ ತೊಟ್ಟು, ಬೆಳಿಗ್ಗೆ ಪೂಜೆ ಮಾಡಿ, ಮನೆಯಲ್ಲಿದ್ದವರ ಆಶಿರ್ವಾದ ಪಡೆದುಕೊಂಡು ಕೆಲಸ ಶುರು ಮಾಡಿದ್ರೆ ವರ್ಷವಿಡೀ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ ಅನ್ನೋದು ನನ್ನ ನಂಬಿಕೆ. ಇನ್ನೊಂದು ವಿಶೇಷ ಅಂದ್ರೆ ಪ್ರತಿಸಲ ಯುಗಾದಿಗೂ ನನಗೆ ಸರ್‌ಪ್ರೈಸ್ ಅನ್ನುವಂಥ ಏನಾದ್ರೂ ವಿಷಯ ಕೇಳುತ್ತಿರುತ್ತಿದ್ದೇನೆ. ಈ ಯುಗಾದಿಗೆ ಅಂಥದ್ದೇನಿದೆ ಅಂಥ ನೋಡ್ತಿದ್ದೇನೆ.
●ಅದಿತಿ ಪ್ರಭುದೇವ
ಯುಗಾದಿ ಅಂದ್ರೇನೆ ಅಲ್ಲಿ ಒಂದು ಖುಷಿ, ಸಂಭ್ರಮ ಇದ್ದೇ ಇರುತ್ತೆ. ಈ ಸಲ ಮದುವೆಯಾಗಿರುವುದರಿಂದ ನನಗೂ, ಮೇಘನಾಗೂ ಮೊದಲ ಯುಗಾದಿ. ಹಾಗಾಗಿ
ಹಿಂದೆಂದಿಗಿಂತಲೂ ಸ್ವಲ್ಪ ಹೆಚ್ಚಾಗಿಯೇ ಎಕ್ಸೆ„ಟ್‌ಮೆಂಟ್, ಖುಷಿ ಎಲ್ಲವೂ ಇದೆ. ಮೊದಲು ನಮ್ಮ ಕುಟುಂಬ, ಫ್ರೆಂಡ್ಸ್ ಸರ್ಕಲ್ ಎಲ್ಲವೂ ಚಿಕ್ಕದಿತ್ತು. ಈಗ ಎಲ್ಲವೂ ದೊಡ್ಡದಾಗಿದೆ. ಫ್ರೆಂಡ್ಸ್, ಫ್ಯಾಮಿಲಿ ಜೊತೆ ಯುಗಾದಿ ಸೆಲೆಬ್ರೇಷನ್ ಮಾಡೋದು, ಎಲ್ಲರ ಜೊತೆ ಹಬ್ಬದ ಊಟ ಮಾಡೋದು
ಅಂದ್ರೇನೆ ಏನೋ ಒಂಥರಾ ಖುಷಿ ಕೊಡುತ್ತದೆ.
●ಚಿರಂಜೀವಿ ಸರ್ಜಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.