‘ಕಸ್ತೂರ್ ಬಾ’ ಪಾತ್ರದಲ್ಲಿ ಹರಿಪ್ರಿಯಾ: ಬಿಝಿ ನಟಿಯ ಅಕೌಂಟ್‌ಗೆ ಮತ್ತೂಂದು ಸಿನಿಮಾ
Team Udayavani, Apr 9, 2021, 8:00 AM IST
“ಬಿಚ್ಚುಗತ್ತಿ’, “ಅಮೃತಮತಿ’ಯಂತಹ ಐತಿಹಾಸಿಕ ಚಿತ್ರಗಳ ಪಾತ್ರಗಳ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದ ನಟಿ ಹರಿಪ್ರಿಯಾ, ಈಗ ಮಹಾತ್ಮ ಗಾಂಧಿ ಪತ್ನಿ ಕಸ್ತೂರ್‌ಬಾ ಅವರ ಪಾತ್ರಕ್ಕೆ ಜೀವತುಂಬುವ ತಯಾರಿಯಲ್ಲಿದ್ದಾರೆ.
ಹೌದು, ಕಸ್ತೂರ್‌ಬಾ ಅವರ ಜೀವನಾಧಾರಿತ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಚಿತ್ರಕ್ಕೆ “ತಾಯಿ ಕಸ್ತೂರ್ ಗಾಂಧಿ’ ಎಂದು ಹೆಸರಿಡಲಾಗಿದ್ದು, ಈ ಚಿತ್ರದಲ್ಲಿ ಕಸ್ತೂರ್‌ಬಾ ಪಾತ್ರದಲ್ಲಿ ಹರಿಪ್ರಿಯಾ ಕಾಣಿಸಿಕೊಳ್ಳುತ್ತಿದ್ದಾರೆ.
ಮೊದಲ ಬಾರಿಗೆ ಇಂಥದ್ದೊಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದರ ಬಗ್ಗೆ ಮಾತನಾಡುವ ಹರಿಪ್ರಿಯಾ, “ಇಲ್ಲಿಯವರೆಗೆ ಗಾಂಧಿ ಜೀ ಬಗ್ಗೆ ಅನೇಕ ಸಿನಿಮಾಗಳು, ಡಾಕ್ಯುಮೆಂಟರಿಗಳು, ಕೃತಿಗಳು ಬಂದಿವೆ. ಪ್ರತಿಯೊಂದರಲ್ಲೂ ಗಾಂಧಿ ಜೀ ಅವರನ್ನು ಬೇರೆ ಬೇರೆ ದೃಷ್ಟಿಕೋನದಲ್ಲಿ, ಆಯಾಮದಲ್ಲಿ ಚಿತ್ರಿಸಲಾಗಿದೆ. ಆದರೆ ಗಾಂಧಿ ಜೀ ಅವರನ್ನು ಅತ್ಯಂತ ಹತ್ತಿರದಿಂದ ಬಲ್ಲವರು ಅಂದ್ರೆ, ಅದು ಅವರ ಪತ್ನಿ ಕಸ್ತೂರಿ ಬಾ. ಈ ಸಿನಿಮಾದಲ್ಲಿ ಕಸ್ತೂರಿ ಬಾ ಅವರ ದೃಷ್ಟಿಕೋನದಲ್ಲಿ ಗಾಂಧಿ ಜೀ ಅವರನ್ನು ತೆರೆಮೇಲೆ ತರುವ ಪ್ರಯತ್ನ ಆಗುತ್ತಿದೆ. ಕಸ್ತೂರ್ ಬಾ ಅವರ ಕಣ್ಣಲ್ಲಿ ಗಾಂಧಿ ಹೇಗೆ ಕಾಣುತ್ತಾರೆ ಅನ್ನೋದೆ ಈ ಸಿನಿಮಾ’ ಎನ್ನುತ್ತಾರೆ.
“ನನ್ನ ಜನರೇಶನ್‌ನ ಬೇರೆ ಹೀರೋಯಿನ್ಸ್‌ಗೆ ಸಿಗದಂಥ ಅಪರೂಪದ ಪಾತ್ರ ಈ ಸಿನಿಮಾದಲ್ಲಿ ನನಗೆ ಸಿಕ್ಕಿದೆ. ಹೊಸಥರದ ಪಾತ್ರಗಳನ್ನು ಬಯಸುವ ನನಗೆ, ಈ ಕಥೆ ಮತ್ತು ಪಾತ್ರ ಎರಡೂ ತುಂಬ ಇಷ್ಟವಾಯ್ತು. ಒಬ್ಬ ತಾಯಿಯಾಗಿ, ಹೆಂಡತಿಯಾಗಿ, ಸ್ವತಂತ್ರ್ಯ ಹೋರಾಟಗಾರರಾಗಿ ಕಸ್ತೂರ್‌ಬಾ ಅವರ ಬೇರೆ ಬೇರೆ ವ್ಯಕ್ತಿತ್ವಗಳ ಪರಿಚಯ ಇಲ್ಲಿದೆ. ಈ ಪಾತ್ರಕ್ಕಾಗಿ ಈಗಾಗಲೇ ಒಂದಷ್ಟು ತಯಾರಿ ಶುರುವಾಗಿದ್ದು, ಈ ಪಾತ್ರದಲ್ಲಿ ನಾನು ಮೂರು ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ನಾನು ಕೂಡ ಈ ಪಾತ್ರದ ಬಗ್ಗೆ ಸಾಕಷ್ಟು ಕುತೂಹಲ, ನಿರೀಕ್ಷೆ ಇಟ್ಟುಕೊಂಡಿದ್ದೇನೆ’ ಎನ್ನುವುದು ಹರಿಪ್ರಿಯಾ ಮಾತು.
ಇನ್ನು ಹಿರಿಯ ಸಾಹಿತಿ ಕಂ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರ “ಕಸ್ತೂರ್ ಬಾ ವರ್ಸಸ್ ಗಾಂಧಿ’ ಕಾದಂಬರಿಯನ್ನು ಆಧರಿಸಿ ನಿರ್ಮಾಣವಾಗುತ್ತಿರುವ “ತಾಯಿ ಕಸ್ತೂರ್ ಗಾಂಧಿ’ ಚಿತ್ರಕ್ಕೆ ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನವಿದೆ.
ಕಸ್ತೂರ್‌ಬಾ ಮತ್ತು ಗಾಂಧಿಜೀ ತಮ್ಮ ಜೀವನದ ಪ್ರಮುಖ ಘಟ್ಟಗಳನ್ನು ಕಳೆದಿದ್ದ ಗುಜರಾತಿನ ಸಬರಮತಿ ಆಶ್ರಮ, ಮಹಾರಾಷ್ಟ್ರದ ವಾರ್ಧಾ ಆಶ್ರಮ, ಪುಣೆಯಲ್ಲಿರುವ ಆಗಾಖಾನ್ ಬಂಗಲೆ ಮೊದಲಾದ ಐತಿಹಾಸಿಕ ಸ್ಥಳಗಳಲ್ಲೇ ಈ ಚಿತ್ರದ ಹೆಚ್ಚಿನ ಭಾಗಗಳನ್ನು ಚಿತ್ರೀಕರಿಸಲು ಯೋಜಿಸಲಾಗಿದೆ. ಸದ್ಯ ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಇದೇ ವರ್ಷದ ಮಧ್ಯ ಭಾಗದಲ್ಲಿ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.
ಜಿ.ಎಸ್.ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.