ಟ್ರೆಡಿಷನಲ್ ಲುಕ್ ನಲ್ಲಿ ಮಿಂಚಿದ ‘ಹರಿಪ್ರಿಯಾ’
Team Udayavani, Sep 14, 2021, 9:58 AM IST
ನಾರಿಯರಿಗೆ ಸೀರೆ ಮೇಲೆ ಇರುವ ಒಲವು ಎಲ್ಲರಿಗೂ ಗೊತ್ತಿರುವಂಥದ್ದೆ. ಇನ್ನು ನಟಿಮಣಿಯರು ಕೂಡ ಇಂಥದ್ದೊಂದು ಸೀರೆ ಮೇಲಿನ ಒಲವಿನಿಂದ ಹೊರತಾಗಿಲ್ಲ.
ಸಾಮಾನ್ಯವಾಗಿ ಹೀರೋಯಿನ್ಸ್ ಟ್ರೆಡಿಷನಲ್ ಲುಕ್ನಲ್ಲಿಕಾಣಿಸಿಕೊಳ್ಳುವುದು ಅಪರೂಪ ಎಂಬುದು ಬಹುತೇಕ ಅವರ ಅಭಿಮಾನಿಗಳ ಅಭಿಪ್ರಾಯ. ಆದರೆ ಅಪರೂಪಕ್ಕೊಮ್ಮೆ ನಟಿಮಣಿಯರು ಇಂಥ ಸೀರೆ ತೊಟ್ಟು ಸಾಂಪ್ರದಾಯಿಕ ಪೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ.
ಇತ್ತೀಚೆಗಷ್ಟೇ ಗೌರಿ-ಗಣೇಶ ಹಬ್ಬದ ಸೆಲೆಬ್ರೇಶನ್ ಜೋರಾಗಿ ನಡೆದಿದ್ದು, ಚಂದನವನದ ಅನೇಕ ನಟಿಯರು ಹಬ್ಬದ ಮೂಡ್ನಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದರು. ಅನೇಕ ನಟಿಯರು ಹಬ್ಬದ ಸಂಭ್ರಮದ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಇದನ್ನೂ ಓದಿ:ಓಲಾ ಘಟಕ ಮಹಿಳಾಮಯ!
ಇದೀಗ ನಟಿ ಹರಿಪ್ರಿಯಾ ಕೂಡ ಅಂಥದ್ದೇ ತಮ್ಮ ಟ್ರೆಡಿಷನಲ್ ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
#sareelove ❤️ pic.twitter.com/FzRB6rWoLb
— HariPrriya (@HariPrriya6) September 13, 2021
ಹೌದು, ತಮ್ಮ ಇತ್ತೀಚಿನ ಸೀರೆ ತೊಟ್ಟ ಪೋಟೋಶೂಟ್ ಪೋಟೋಗಳನ್ನು ಹರಿಪ್ರಿಯಾ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಕೆಲ ಸಮಯದಿಂದ ಗ್ಲಾಮರಸ್ ಲುಕ್ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಹರಿಪ್ರಿಯಾ, ಸೀರೆಯುಟ್ಟ ಪೋಟೋ ಅವರ ಅಭಿಮಾನಿಗಳಿಗೆ ಅಚ್ಚರಿ ತಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿಪ್ರಿಯಾ ಟ್ರೆಡಿಷನಲ್ ಲುಕ್ಗೆ ಫ್ಯಾನ್ಸ್ಕಡೆಯಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸದ್ಯ ಹರಿಪ್ರಿಯಾ “ಲಗಾಮ್’ ಚಿತ್ರದ ಚಿತ್ರೀಕರಣದಲ್ಲಿ ಬಿಝಿಯಾಗಿದ್ದು, ಅದರೊಂದಿಗೆ ತಮಿಳಿನ ಚಿತ್ರವೊಂದರಲ್ಲೂ ಅಭಿನಯಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.