ಬೆಲ್ ಬಾಟಮ್‌ಗೆ ಹರಿಪ್ರಿಯಾ ನಾಯಕಿ
Team Udayavani, Jan 27, 2018, 10:24 AM IST
ಜಯತೀರ್ಥ ನಿರ್ದೇಶನದಲ್ಲಿ “ಬೆಲ್ ಬಾಟಮ್’ ಎಂಬ ಸಿನಿಮಾ ಬರುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈ ಚಿತ್ರದಲ್ಲಿ ರಿಷಭ್ ಶೆಟ್ಟಿ ನಾಯಕರಾಗಿ ನಟಿಸುತ್ತಿದ್ದಾರೆ. ಆರಂಭದಲ್ಲಿ ಚಿತ್ರತಂಡ ವಿಭಿನ್ನವಾದ ಡಿಸೈನ್‌ವೊಂದನ್ನು ಕೊಟ್ಟು ಚಿತ್ರದ ಶೀರ್ಷಿಕೆ ಹುಡುಕುವ ಸವಾಲನ್ನು ಜನರಿಗೆ ಬಿಟ್ಟಿತ್ತು. ಈಗ ಮತ್ತೂಂದು ಸವಾಲು ಕೊಟ್ಟಿದೆ. ಅದು ನಾಯಕಿಯ ಯಾರೆಂದು ಕಂಡು ಹಿಡಿಯೋದು.
ಡಿಸೈನ್‌ವೊಂದರಲ್ಲಿ ಒಂದಷ್ಟು ಅಕ್ಷರಗಳನ್ನು ಹಾಕಲಾಗಿದ್ದು, ಅವೆಲ್ಲವನ್ನು ಕೂಡಿಸಿದರೆ “ಬೆಲ್ ಬಾಟಮ್’ ನಾಯಕಿಯ ಪೂರ್ಣ ಹೆಸರು ಸಿಗುತ್ತದೆ. ಹಾಗಂತ ಕೇವಲ ಬೆಲ್ ಬಾಟಮ್ ನಾಯಕಿಯ ಹೆಸರಿಗೆ ಸಂಬಂಧಿಸಿದ ಅಕ್ಷಗಳಷ್ಟೇ ಅಲ್ಲ, ಇತರ ನಾಯಕಿಯರ ಹೆಸರಿಗೆ ಸಂಬಂಧಿಸಿದ ಅಕ್ಷರಗಳೂ ಇವೆ. ಆದರೆ, ಅದು ಅಪೂರ್ಣವಾಗಿವೆ. ಎಲ್ಲಾ ಓಕೆ, ನಾಯಕಿ ಯಾರು ಎಂದು ನೀವು ಕೇಳಿದರೆ ಅದಕ್ಕೆ ಉತ್ತರ ಹರಿಪ್ರಿಯಾ.
ಹೌದು, “ಬೆಲ್ ಬಾಟಮ್’ ಚಿತ್ರದಲ್ಲಿ ಹರಿಪ್ರಿಯಾ ನಾಯಕಿಯಾಗಿ ನಟಿಸಲಿದ್ದಾರೆ. ಈಗಾಗಲೇ ಚಿತ್ರತಂಡ ಮಾತುಕತೆ ನಡೆಸಿದ್ದು, ಹರಿಪ್ರಿಯ ಕೂಡಾ ಒಪ್ಪಿಕೊಂಡಿದ್ದಾರೆ. ಈ ಮೂಲಕ ಮತ್ತೂಮ್ಮೆ ಜಯತೀರ್ಥ ಹಾಗೂ ರಿಷಭ್ ಜೊತೆ ಕೆಲಸ ಮಾಡುವಂತಾಗಿದೆ. ಈ ಹಿಂದೆ ರಿಷಭ್ ನಿರ್ದೇಶನದ “ರಿಕ್ಕಿ’ ಚಿತ್ರದಲ್ಲಿ ಹರಿಪ್ರಿಯಾ ನಾಯಕಿಯಾಗಿದ್ದರು. ಈಗ “ಬೆಲ್ ಬಾಟಮ್’ನಲ್ಲಿ ರಿಷಭ್‌ಗೆ ನಾಯಕಿಯಾಗಿದ್ದಾರೆ.
ಇನ್ನು, ಜಯತೀರ್ಥ ನಿರ್ದೇಶನದ “ಬುಲೆಟ್ ಬಸ್ಯಾ’ ಚಿತ್ರದಲ್ಲಿ ಹರಿಪ್ರಿಯ ನಟಿಸಿದ್ದು, ಈಗ ಮತ್ತೂಮ್ಮೆ ಅವರ ಸಿನಿಮಾದಲ್ಲಿ ನಾಯಕಿಯಾಗುತ್ತಿದ್ದಾರೆ. ಈ ಚಿತ್ರವನ್ನು ಗೋಲ್ಡನ್ ಹಾರ್ಸ್ ಸಿನಿಮಾಸ್‌ನಡಿ ಸಂತೋಷ್ ಕುಮಾರ್ ಎನ್ನುವವರು ನಿರ್ಮಿಸುತ್ತಿದ್ದಾರೆ. ಚಿತ್ರದ ಬರವಣಿಗೆಯಲ್ಲಿ ದಯಾನಂದ್ ಟಿ.ಕೆ. ಕೂಡಾ ಕೈ ಜೋಡಿಸಿದ್ದಾರೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ. ಫೆಬ್ರವರಿಯಿಂದ ಚಿತ್ರೀಕರಣ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.