ಫಸ್ಟ್ ಕಿಸ್ ಕಥೆ ಹೇಳಿದ ಹರಿಪ್ರಿಯಾ
Team Udayavani, Apr 11, 2023, 2:50 PM IST
“ನನ್ನ ಫಸ್ಟ್ ಕಿಸ್ ತುಂಬಾ ಕಂಫರ್ಟಬಲ್ ಇರಲಿಲ್ಲ…’ ನಟಿ ಹರಿಪ್ರಿಯಾ ಹೀಗೆ ಹೇಳಿರುವ ಕಟ್ ಮಾಡಲಾದ ಪ್ರೋಮೋ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಅಂದಹಾಗೆ, ಹರಿಪ್ರಿಯಾ ಇಂಥದ್ದೊಂದು ವಿಷಯದ ಬಗ್ಗೆ ಮಾತನಾಡುತ್ತಿರುವುದು ತಮ್ಮದೇ ಆದ ಯು-ಟ್ಯೂಬ್ ಚಾನೆಲ್‌ನಲ್ಲಿ. ಕೆಲ ದಿನಗಳ ಹಿಂದಷ್ಟೇ “ಹರಿಪ್ರಿಯಾ ಸಿಂಹ’ ಎಂಬ ಹೆಸರಿನಡಿಯಲ್ಲಿ ನಟಿ ಹರಿಪ್ರಿಯಾ ತಮ್ಮದೇ ಆದ ಹೊಸ ಯು-ಟ್ಯೂಬ್ ಚಾನೆಲ್ ಆರಂಭಿಸಿದ್ದರು. ಈ ಯು-ಟ್ಯೂಬ್ ಚಾನೆಲ್ ನಲ್ಲಿ ತಮ್ಮ ನಿಶ್ಚಿತಾರ್ಥದ ವಿಡಿಯೊಗಳನ್ನು ಹರಿಪ್ರಿಯಾ ಹಂಚಿಕೊಂಡಿದ್ದು, ಇದೀಗ ಮತ್ತೂಂದು ಹೊಸ ವಿಡಿಯೊವನ್ನು ಹಂಚಿಕೊಳ್ಳಲು ಮುಂದಾಗಿದ್ದಾರೆ.
ಇದನ್ನೂ ಓದಿ:Karnataka poll; ಪುತ್ತೂರು ಅಭ್ಯರ್ಥಿಯಾಗಿ ಕೋಡಿಂಬಾಡಿ ಅಶೋಕ್ ಕುಮಾರ್ : ಘೋಷಣೆಯೊಂದೇ ಬಾಕಿ
ಈ ಬಾರಿ ತನ್ನ ಬಗ್ಗೆ ಯಾರಿಗೂ ತಿಳಿಯದ ಹತ್ತು ವಿಷಯಗಳ ಬಗ್ಗೆ ಹರಿಪ್ರಿಯಾ ಮಾತನಾಡಿದ್ದು, ಈ ವಿಡಿಯೋ ಆದಷ್ಟು ಬೇಗ ತಮ್ಮ ಯು-ಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.
ನನ್ನ ಫಸ್ಟ್ ಕಿಸ್ ಬಗ್ಗೆ ಇಷ್ಟೊಂದು ಕುತೂಹಲನಾ? ನಾನು ತುಂಬಾ ಕಂಫರ್ಟಬಲ್ ಇರಲಿಲ್ಲ…’ ಎಂದು ಹೇಳಿರುವ ಕಟ್ ಮಾಡಲಾದ ಪ್ರೋಮೋವನ್ನು ಹಂಚಿಕೊಂಡಿರುವ ಹರಿಪ್ರಿಯಾ ಶೀಘ್ರ ಸಂಪೂರ್ಣ ವಿಡಿಯೋ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.