ಲಂಡನ್ ರಿಟರ್ನ್ ಹರ್ಷಿಕಾ ಮತ್ತು ಕ್ವಾರಂಟೈನ್ ಶಾಕ್!
ಕ್ವಾರೆಂಟೈನ್ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ
Team Udayavani, Dec 23, 2020, 1:09 PM IST
ಯುಕೆಯನಲ್ಲಿ ಹೊಸ ಮಾದರಿಯ ಕೊವಿಡ್ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಲಂಡನ್ ಮತ್ತು ಯೂರೋಪ್ ರಾಷ್ಟ್ರಗಳಿಂದ ಭಾರತಕ್ಕೆ ಬರುವವರ ಮೇಲೆ ವಿಶೇಷ ನಿಗಾ ಇಡಲು ಸರ್ಕಾರ ನಿರ್ಧರಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಡಿ.31 ರ ವರೆಗೆ ಯುಕೆಯಿಂದ ಬರುವ ಎಲ್ಲಾ ವಿಮಾನಗಳನ್ನು ಪ್ರವೇಶವನ್ನು ಭಾರತದಾದ್ಯಂತ ಬಂದ್ ಮಾಡಲಾಗಿದೆ. ಇಷ್ಟೇ ಅಲ್ಲದೆ ಲಂಡನ್‌ನಿಂದ ವಾಪಸ್ ಬಂದವರನ್ನು ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಪಡಿಸುವಂತೆಕೇಂದ್ರ ಆದೇಶಿಸಿದೆ. ಇದೇ ವೇಳೆ ನಟಿ ಹರ್ಷಿಕಾ ಪೂಣಚ್ಚ ಲಂಡನ್‌ನಿಂದ ಇತ್ತೀಚೆಗಷ್ಟೇ ವಾಪಸ್ ಬಂದಿದ್ದು, ಆದರೆ ಸರ್ಕಾರ ನಿರ್ದೇಶನದ ಅನುಸಾರ ಕ್ವಾರಂಟೈನ್ ಆಗಿಲ್ಲ ಎನ್ನುವ ಸುದ್ದಿ ಜೋರಾಗಿ ಹರಿದಾಡುತ್ತಿದೆ.
ಇದೀಗ ಈ ಸುದ್ದಿಯ ಬಗ್ಗೆ ಸ್ವತಃ ನಟಿ ಹರ್ಷಿಕಾ ಪೂಣಚ್ಚ ವಿಡಿಯೋ ಮಾಡಿ ಸ್ಪಷ್ಟನೆ ನೀಡಿದ್ದಾರೆ. “ನಾನು ಲಂಡನ್‌ಗೆ ಹೋಗಿದ್ದು ನಿಜ. ಆದರೆ ಲಂಡನ್‌ನಿಂದ ವಾಪಸ್ ಬಂದು ಈಗಾಗಲೇ ಎರಡು ವಾರಕಳೆದಿದೆ. ಆದರೆ ನಾನು ಇನ್ನೂ ಲಂಡನ್‌ನಲ್ಲೇ ಇದ್ದೀನೆಂದು ಕೆಲವೆಡೆ,ಕೆಲವು ದಿನಗಳ ಹಿಂದಷ್ಟೆ ವಾಪಸ್ಸಾಗಿದ್ದೇನೆ ಎಂದು ಕೆಲವೆಡೆ ಹೇಳಲಾಗುತ್ತಿದೆ. ಆದರೆ ನಾನು ಲಂಡನ್‌ನಿಂದ ವಾಪಸ್ಸಾಗಿ ಎರಡು ವಾರದ ಮೇಲಾಯಿತು. ಸುಮಾರು ಎರಡು ವಾರದಿಂದ ಬೆಂಗಳೂರಿನಲ್ಲಿಯೇ ಇದ್ದೇನೆ. ಒಂದು ವಾರದ ಹಿಂದಷ್ಟೇ ಬೆಂಗಳೂರಿನಲ್ಲಿಯೇ ಒಂದು ಫೋಟೋ ಶೂಟ್ ಸಹ ಮಾಡಿಸಿದ್ದೇನೆ’ ಎಂದಿದ್ದಾರೆ ಹರ್ಷಿಕಾ ಪೂಣಚ್ಚ.
ಇದನ್ನೂ ಓದಿ : ಜಮ್ಮು-ಡಿಡಿಸಿ ಚುನಾವಣೆ: 11 ಮತಗಳ ಅಂತರದಿಂದ ಬಿಜೆಪಿ ಮಾಜಿ ಸಚಿವ ಚೌಧರಿಗೆ ಸೋಲು
ಅಲ್ಲದೆ “ನಾನು ಲಂಡನ್ನಲ್ಲಿದ್ದಾಗ ತೆಗೆಸಿಕೊಂಡಿದ್ದ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದೆ. ಇದರಿಂದಾಗಿ ಕೆಲವರು ಗೊಂದಲದಿಂದ, ನಾನಿನ್ನೂ ಲಂಡನ್‌ನಲ್ಲಿಯೇ ಇದ್ದೀನಿ ಎಂದು ಕೊಂಡಂತಿದ್ದಾರೆ. ಸದ್ಯಕ್ಕೆ ನಾನು ಬೆಂಗಳೂರಿನಲ್ಲಿಯೇ ಇದ್ದೀನಿ, ದಯವಿಟ್ಟು ಯಾರೂ ತಪ್ಪು ಮಾಹಿತಿ ವರದಿ ಮಾಡಬೇಡಿ’ ಎಂದು ಹರ್ಷಿಕಾ ಮನವಿ ಮಾಡಿಕೊಂಡಿದ್ದಾರೆ.
ಅಂದಹಾಗೆ, ಸದ್ಯ ಭೋಜಪುರಿ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಹರ್ಷಿಕಾ, ಆ ಸಿನಿಮಾದ ಶೂಟಿಂಗ್‌ಗಾಗಿ ಲಂಡನ್‌ಗೆ ತೆರಳಿದ್ದರು.ಕೆಲ ವಾರಗಳ ಕಾಲ ಲಂಡನ್‌ನಲ್ಲಿಯೇ ಶೂಟಿಂಗ್‌ನಲ್ಲಿ ಭಾಗವಹಿಸಿದ್ದ ಹರ್ಷಿಕಾ ಪೂಣಚ್ಚ, ಬಳಿಕ ಬೆಂಗಳೂರಿಗೆ ವಾಪಾಸ್ಸಾಗಿದ್ದರು. ಒಟ್ಟಾರೆ ಲಂಡನ್‌ಗೆ ಹೋಗಿ ಬಂದಖುಷಿಯಲ್ಲಿ ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದ ಹರ್ಷಿಕಾಗೆಕ್ವಾರೆಂಟೈನ್ ಆಗಿಲ್ಲ ಎನ್ನುವ ಸುದ್ದಿ ಶಾಕ್ ನೀಡಿರುವುದಂತೂ ಸುಳ್ಳಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.