Hebbuli; ರೀ ರಿಲೀಸ್‌ನತ್ತ ಹೆಬ್ಬುಲಿ; ಮುಂದುವರೆದ ಸ್ಟಾರ್ ಸಿನಿಮಾಗಳ ಮರು ಬಿಡುಗಡೆ
Team Udayavani, Jul 29, 2024, 5:00 PM IST
ಸ್ಟಾರ್ ಸಿನಿಮಾಗಳ ರೀ ರಿಲೀಸ್ ಮೇಳ ಮುಂದುವರೆದಿದೆ. ಈಗಾಗಲೇ ಕನ್ನಡದ ಅನೇಕ ಸ್ಟಾರ್‌ಗಳ ಸಿನಿಮಾ ಗಳು ಮರುಬಿಡುಗಡೆ ಯಾಗಿವೆ. ಹಾಗಂತ ಯಾವ ಚಿತ್ರವೂ ದೊಡ್ಡ ಮಟ್ಟದ ಯಶಸ್ಸು ಕಂಡಿಲ್ಲ. ಆದರೆ, ಸದ್ಯ ಚಿತ್ರಮಂದಿರಗಳು ಸುಲಭವಾಗಿ ಸಿಗುತ್ತಿರುವ ಜೊತೆಗೆ ಸ್ಟಾರ್‌ಗಳ ಹೊಸ ಸಿನಿಮಾಗಳು ಇಲ್ಲದಿರುವುದರಿಂದ ಹಳೆಯ ಸಿನಿಮಾಗಳೇ ಮರುಬಿಡುಗಡೆ ಯಾಗುತ್ತಿವೆ. ಈ ಸಾಲಿಗೆ “ಹೆಬ್ಬುಲಿ’ ಚಿತ್ರ ಸೇರುತ್ತಿದೆ.
ಕಿಚ್ಚ ಸುದೀಪ್ ನಟನೆಯ “ಹೆಬ್ಬುಲಿ’ ಚಿತ್ರ ಆಗಸ್ಟ್ 2ರಂದು ಮರುಬಿಡು ಗಡೆ ಯಾಗುತ್ತಿದೆ. ಕೆ.ಜಿ.ರಸ್ತೆಯ ಪ್ರಮುಖ ಚಿತ್ರಮಂದಿರವಾದ ನರ್ತಕಿ ಚಿತ್ರ ಮಂದಿರದಲ್ಲಿ ರೀರಿಲೀಸ್ ಆಗುತ್ತಿದ್ದು, ಮತ್ತೂಮ್ಮೆ ಅಭಿಮಾನಿಗಳ ಜೈ ಕಾರ “ಹೆಬ್ಬುಲಿ’ಗೆ ಸಿಗಲಿದೆ.
ಈ ಚಿತ್ರವನ್ನು ಕೃಷ್ಣ ನಿರ್ದೇಶನ ಮಾಡಿದ್ದರು. 2017ರಲ್ಲಿ ತೆರೆಕಂಡಿದ್ದ ಈ ಸಿನಿಮಾಕ್ಕೆ ಪ್ರೇಕ್ಷಕರು ಜೈ ಎನ್ನುವ ಮೂಲಕ ಚಿತ್ರ ಹಿಟ್‌ಲಿಸ್ಟ್ ಸೇರಿತ್ತು. ಚಿತ್ರದಲ್ಲಿ ರವಿಚಂದ್ರನ್ ಕೂಡಾ ಪ್ರಮುಖ ಪಾತ್ರ ಮಾಡಿದ್ದರು. ಅಮಲಾ ಪೌಲ್ ನಾಯಕಿಯಾಗಿ ನಟಿಸಿದ್ದು, ಸುದೀಪ್ ಈ ಚಿತ್ರದಲ್ಲಿ ಪ್ಯಾರ ಕಮಾಂಡೋ ಪಾತ್ರದಲ್ಲಿ ನಟಿಸಿದ್ದರು.
ಅಂದಹಾಗೆ, ಸದ್ಯ ಸುದೀಪ್ ಅವರ “ಮ್ಯಾಕ್ಸ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಮಾಸ್ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ಕಿಚ್ಚ ಸುದೀಪ್ ಅವರನ್ನು ಕಂಡು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಟೀಸರ್‌ನಲ್ಲಿನ ಆ್ಯಕ್ಷನ್ ದೃಶ್ಯಗಳಿಗೆ ಫ್ಯಾನ್ಸ್ ಫಿದಾ ಆಗಿದ್ದು, ಸಿನಿಮಾಕ್ಕಾಗಿ ಎದುರು ನೋಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ
Kundapura: ರಾಷ್ಟ್ರೀಯ ಹೆದ್ದಾರಿ; ಮುಗಿಯದ ಕಿರಿಕಿರಿ
Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.