ಹೀಗೊಂದು ದಿನ ಸಿಂಧುಲೋಕನಾಥ್!ಹೊಸಬರ ಕೈಯಲ್ಲಿ ಅನ್ಕಟ್ ಚಿತ್ರ
Team Udayavani, Aug 17, 2017, 5:43 PM IST
ನಟಿ ಸಿಂಧು ಲೋಕನಾಥ್ “ಲವ್ ಇನ್ ಮಂಡ್ಯ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ಬೇರೆಲ್ಲೂ ಸುದ್ದಿಯಾಗಿರಲಿಲ್ಲ. ಬಹಳ ದಿನಗಳ ಬಳಿಕ ಸುದ್ದಿಯಾಗಿದ್ದು, “ಲೂಸ್ ಕನೆಕ್ಷನ್’ ಎಂಬ ವೆಬ್‌ಸೀರಿಸ್‌ನಲ್ಲಿ. ಅದು ಬಿಟ್ಟರೆ, ಈಗ ಮತ್ತೂಂದು ಹೊಸ ಸಿನಿಮಾ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ ಸಿಂಧುಲೋಕನಾಥ್. ಹೌದು, “ಹೀಗೊಂದು ದಿನ’ ಎಂಬ ಹೊಸಬರ ಚಿತ್ರದಲ್ಲಿ ನಟಿಸಿದ್ದಾರೆ ಸಿಂಧು. ಈ ಸಿನಿಮಾ ಮೂಲಕ ವಿಕ್ರಮ್ ಯೋಗಾನಂದ್ ನಿರ್ದೇಶಕರಾಗಿದ್ದಾರೆ. ವಿಕಾಸ್ ಕಥೆ ಬರೆದಿದ್ದಾರೆ. ಚಂದ್ರಶೇಖರ್ ಎಂಬುವವರು ನಿರ್ಮಾಪಕರು. ಸಿಂಧು ಲೋಕನಾಥ್ ಹೇಳುವಂತೆ, ಇದೊಂದು ಪ್ರಯೋಗಾತ್ಮಕ ಚಿತ್ರ. ಅದರಲ್ಲೂ ಅನ್‌ಕಟ್ ಫಿಲ್ಮ್ ಎಂಬುದು ಅವರ ಮಾತು.
ಚಿತ್ರದ ಕಥೆ ಎರಡು ಗಂಟೆಯಲ್ಲಿ ನಡೆಯುವಂಥದ್ದು. ಸಿನಿಮಾ ಕೂಡ ಎರಡು ಗಂಟೆ ಅವಧಿಯಲ್ಲೇ ಇರುವಂಥದ್ದು. ಒಬ್ಬ ಹುಡುಗಿ ಒಂದು ಗುರಿ ಇಟ್ಟುಕೊಂಡು ಮನೆಯಿಂದ ಹೊರಗೆ ಹೋಗುತ್ತಾಳೆ, ಆ ಮಧ್ಯೆ ಅವಳಿಗೆ ಏನೆಲ್ಲಾ ಎದುರಾಗುತ್ತೆ, ಅವಳ ಕೆಲಸ ಆಗುತ್ತೋ, ಇಲ್ಲವೋ, ಅಲ್ಲಿ ಆಕೆ ಏನೇನು ಕಲಿಯುತ್ತಾಳೆ ಅನ್ನೋದೇ ಕಥೆ’ ಎಂದು ವಿವರ ಕೊಡುತ್ತಾರೆ ಸಿಂಧುಲೋಕನಾಥ್.
ಇಲ್ಲಿ “ಅನ್‌ಕಟ್ ಮೂವಿ’ ಅಂದರೆ, ಒಂದು ಸೀನ್ ಅನ್ನು ಒಂದೇ ಶಾಟ್‌ನಲ್ಲಿ ತೆಗೆದಿರೋದು. ಹಾಗಂತ ಇಡೀ ಸಿನಿಮಾವನ್ನು ಒಂದೇ ಶಾಟ್‌ನಲ್ಲಿ ತೆಗೆಯಲಾಗಿದೆ ಅಂದುಕೊಳ್ಳುವಂತಿಲ್ಲ. ಆ ಸೀನ್‌ನಲ್ಲಿ ಬರುವ ಕಲಾವಿದರಾಗಲಿ, ಕ್ಯಾಮೆರಾ ಆಗಲಿ, ಎಲ್ಲೂ ಆ್ಯಂಗಲ್ ಚೇಂಜ್ ಆಗೊದಿಲ್ಲ. ಕ್ಯಾಮೆರಾ ಕಟ್ ಆಗಲ್ಲ, ಡೈಲಾಗ್ ಕಟ್ ಆಗಲ್ಲ. ಸಿನಿಮಾ ನೋಡಿದರೆ, ಇಡೀ ಸಿನಿಮಾನೇ ಒಂದೇ ಶಾಟ್‌ನಲ್ಲಿ ತೆಗೆದಂತೆ ಭಾಸವಾಗುತ್ತೆ. ಅನ್‌ಕಟ್ ಮೂವಿ ಅಂತ ಉದಾಹರಿಸುವುದಾದರೆ, ಮನೆಯಿಂದ ರೆಡಿಯಾಗಿ ಅಪ್ಪ,ಅಮ್ಮನ ಮಾತನಾಡಿಸಿ ಹೊರಗೆ ಬಂದು, ಅಲ್ಲೆಲ್ಲಾ ಸುತ್ತಾಡಿ, ಬಸ್ ಸ್ಟಾಪ್‌ಗೆ ಹೋಗಿ, ಬಸ್ ಹತ್ತೋದು, ಇಳಿಯೋದು, ಮಾತಾಡೋದು ಇವೆಲ್ಲವನ್ನೂ ಒಂದೇ ಶಾಟ್‌ನಲ್ಲಿ ತೆಗೆಯೋದು. ಇದಕ್ಕಾಗಿ ಸಾಕಷ್ಟು ರಿಹರ್ಸಲ್ ಮಾಡಲಾಗಿದೆ.
ಅಂದಹಾಗೆ, ಚಿತ್ರ ಕಥೆ ಬೆಳಗ್ಗೆ 6 ರಿಂದ 8 ಗಂಟೆಯವರೆಗೆ ನಡೆಯಲಿದೆ. ಹಾಗಾಗಿ ಬೆಳಗಿನ ಜಾವ 6 ಗಂಟೆಯಿಂದ 8 ಗಂಟೆಯವರೆಗೆ ಮಾತ್ರ ಶೂಟಿಂಗ್ ನಡೆಯುತ್ತಿತ್ತು. ಕಥೆ ಕೂಡ ಆ ವಾತಾವರಣ ಬಯಸುತ್ತಿತ್ತು. ಆ ಟ್ರಾಫಿಕ್, ಆ ಲೈಟ್ಸ್ ಎಲ್ಲವೂ ಪೂರಕವಾಗಿರುತ್ತಿತ್ತು. ಸುಮಾರು ಹದಿನೈದು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಗಿರಿಜಾ ಲೋಕೇಶ್, ಪದ್ಮಜಾ ರಾವ್, ಮಿತ್ರ, ಗುರುಪ್ರಸಾದ್ ಮತ್ತು “ಸಿಂಪಲ್ಲಾಗ್ ಇನ್ನೊಂದ್ ಲವ್‌ಸ್ಟೋರಿ’ ಪ್ರವೀಣ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ನಾಯಕ, ನಾಯಕಿ ಅಂತೇನಿಲ್ಲ. ಕಥೆಯೇ ಎಲ್ಲವೂ ಆಗಿದೆ ಎನ್ನುವ ಸಿಂಧುಲೋಕನಾಥ್, ಚಿತ್ರಕ್ಕೆ ಅಭಿಲಾಶ್ ಗುಪ್ತ ಸಂಗೀತ ನೀಡಿದ್ದಾರೆ. ಮೂರು ಮಾಂಟೇಜ್ ಸಾಂಗ್ಸ್ ಇದೆ. ನಿರ್ದೇಶಕರೇ ಇಲ್ಲಿ ಕ್ಯಾಮೆರಾ ಹಿಡಿದಿದ್ದಾರೆ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.