ಹೆಸರಿಲ್ಲದ ಪಾತ್ರ ಮತ್ತು ಹೆಸರು ಮಾಡುವ ‘ಹೀರೋ’: ಲಾಕ್‌ಡೌನ್‌ನಲ್ಲಿ ತಯಾರಾದ ರಿಷಭ್‌ ಚಿತ್ರ

Team Udayavani, Jan 15, 2021, 1:14 PM IST

ಹೆಸರಿಲ್ಲದ ಪಾತ್ರ ಮತ್ತು ಹೆಸರು ಮಾಡುವ ‘ಹೀರೋ’: ಲಾಕ್‌ಡೌನ್‌ನಲ್ಲಿ ತಯಾರಾದ ರಿಷಭ್‌ ಚಿತ್ರ

ರಿಷಭ್‌ ಶೆಟ್ಟಿ ಹೊಸ ಜಾನರ್‌ ಪ್ರಯತ್ನಿಸಿದ್ದಾರೆ. ಅದು “ಹೀರೋ’ ಮೂಲಕ. ಈ ಚಿತ್ರದ ಟ್ರೇಲರ್‌ ಸಂಕ್ರಾಂತಿ ದಿನ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೊತೆಗೆ ಹೊಸ ಜಾನರ್‌ ಪ್ರಯತ್ನಿಸಿದ್ದು, ಕೂಡಾ ಟ್ರೇಲರ್‌ನಲ್ಲಿ ಎದ್ದು ಕಾಣುತ್ತಿದೆ. ಅಷ್ಟಕ್ಕೂ ರಿಷಭ್‌ ಪ್ರಯತ್ನಿಸಿದ ಜಾನರ್‌ ಯಾವುದು ಎಂದು ನೀವು ಕೇಳಬಹುದು. ಅದು ಆ್ಯಕ್ಷನ್‌ ಡ್ರಾಮಾ. ಟ್ರೇಲರ್‌ ನೋಡಿದವರಿಗೆ ರಕ್ತಸಿಕ್ತ ಹೆಜ್ಜೆ ಗುರುತುಗಳು ಎದ್ದು ಕಾಣುತ್ತವೆ. ಆದರೆ, ಇದು ಟ್ರೇಲರ್‌, ಸಿನಿಮಾ ಮುಂದೈತೆ!

ಅಂದಹಾಗೆ, ರಿಷಭ್‌ ತಮ್ಮ “ಹೀರೋ’ ಬಗ್ಗೆ ಮಾತನಾಡಲು ಮಾಧ್ಯಮದ ಮುಂದೆ ಬಂದಿದ್ದರು. ರಿಷಭ್‌ ಮುಖದಲ್ಲಿ ಖುಷಿ ಎದ್ದು ಕಾಣುತ್ತಿತ್ತು. ಅದಕ್ಕೆ ಕಾರಣ, ಯಾರೂ ಕೆಲಸ ಮಾಡದೇ, ಮನೆಯಲ್ಲಿದ್ದ ಸಮಯದಲ್ಲಿ ರಿಷಭ್‌ ಧೈರ್ಯ ಮಾಡಿ, ಮಾಡಿದ ಸಿನಿಮಾ “ಹೀರೋ’!

ಹೌದು, “ಹೀರೋ’ ಚಿತ್ರ ತಯಾರಾಗಿದ್ದು ಲಾಕ್‌ಡೌನ್‌ ಸಮಯದಲ್ಲಿ. ಈ ಬಗ್ಗೆ ಮಾತನಾಡುವ ರಿಷಭ್‌, “ಲಾಕ್‌ಡೌನ್‌ನಲ್ಲಿ ಎರಡು ತಿಂಗಳು ಊರಲ್ಲಿದ್ದೆ. ಸದಾ ಬಿಝಿಯಾಗಿದ್ದ ನನಗೆ ಕೆಲಸ ಮಾಡದೇ ಕುಳಿತು ಬೇಜಾರಾಗಿತ್ತು. ಎರಡು ತಿಂಗಳ ನಂತರ ಏನಾದರೊಂದು ಮಾಡಲೇಬೇಕೆಂದು ಬೆಂಗಳೂರಿಗೆ ಬಂದೆ. ನನ್ನ ತಂಡದ ಜೊತೆ ಚರ್ಚೆ ಮಾಡುವಾಗ ಈ ಕಥೆ ಹುಟ್ಟಿತು. ಆ ನಂತರ ಕಲಾವಿದರ ಆಯ್ಕೆ. ಎಲ್ಲರಿಗೂ ಕರೆ ಮಾಡಿ, ಫಿಕ್ಸ್‌ ಮಾಡಿದ್ದಾಯ್ತು, ಜೊತೆಗೆ ಶೂಟಿಂಗ್‌ ಮುಗಿಯೋವರೆಗೆ ಮನೆ ಕಡೆ  ಹೋಗುವಂತಿಲ್ಲ ಎಂದಿದ್ದೂ ಆಯ್ತು. ಕೊನೆಗೆ ಲೊಕೇಶನ್‌. ಇಡೀ ಸಿನಿಮಾ ಚಿಕ್ಕಮಗಳೂರಿನಲ್ಲಿ ನಡೆದಿದೆ. ನಗರ ಪ್ರದೇಶದಿಂದ ದೂರವಿರುವ 200 ಎಕರೆ ಎಸ್ಟೇಟ್‌ ಒಳಗಡೆ ಚಿತ್ರೀಕರಣ ಮಾಡಿದೆವು. ಕೇವಲ 24 ಮಂದಿಯ ತಂಡವಷ್ಟೇ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದು. 100 ಜನ ಮಾಡುವ ಕೆಲಸವನ್ನು 24 ಮಂದಿ ಮಾಡಿದ್ದೇವೆ. ಎಲ್ಲರೂ ತುಂಬಾ ಕಷ್ಟಪಟ್ಟಿದ್ದಾರೆ. ಚಿತ್ರೀಕರಣಕ್ಕೆ ಬೇಕಾದ ಪ್ರಾಪರ್ಟಿಯನ್ನು ಪ್ರಮೋದ್‌ ಶೆಟ್ಟಿ ಹಾಗೂ ಉಗ್ರಂ ಮಂಜು 24 ಗಂಟೆಯಲ್ಲಿ ಜೋಡಿಸಿದರು. ಒಬ್ಬನೇ ಒಬ್ಬ ಲೈಟ್‌ಬಾಯ್‌ ಇದ್ದ. ಬೆಂಗಳೂರಿನಿಂದ ಏನಾದರೂ ಬೇಕಾದರೆ ಶೈನ್‌ ಶೆಟ್ಟಿ ಕಳುಹಿಸುತ್ತಿದ್ದರು. ಇದೊಂದು ಅದ್ಭುತ ಅನುಭವ’ ಎಂದರು.

ಇದನ್ನೂ ಓದಿ:ನಿಖೀಲ್‌ ಬರ್ತ್‌ಡೇಗೆ ಬರಲಿದೆ ‘ರೈಡರ್‌’ ಟೀಸರ್

ಸಿನಿಮಾದ ಬಗ್ಗೆ ಮಾತನಾಡುವ ರಿಷಭ್‌, “ನನ್ನ ಜೊತೆ ಸಹಾಯಕ ನಿರ್ದೇಶಕರಾಗಿದ್ದ ಭರತ್‌ ರಾಜ್‌ ಈ ಚಿತ್ರದ ನಿರ್ದೇಶಕರು. ಇದೊಂದು ಆ್ಯಕ್ಷನ್‌ ಡ್ರಾಮಾ. ಟ್ರೇಲರ್‌ನಲ್ಲಿ ನಿಮಗೆ ರಕ್ತ ಕಾಣಬಹುದು. ಆದರೆ, ಇಡೀ ಸಿನಿಮಾ ತುಂಬಾ ಮಜಾವಾಗಿ ಸಾಗುತ್ತದೆ. ಇಲ್ಲಿನ ಯಾವುದೇ ಪಾತ್ರಗಳಿಗೂ ಹೆಸರಿಲ್ಲ’ ಎಂದರು.

ನಿರ್ದೇಶಕ ಭರತ್‌ ರಾಜ್‌ ಹೆಚ್ಚು ಮಾತನಾಡಲಿಲ್ಲ. ಚಿತ್ರದಲ್ಲಿ ಗಾನವಿ ಲಕ್ಷ್ಮಣ್‌ ನಾಯಕಿ. ಸಿನಿಮಾದ ಅನುಭವನ್ನು ಆದ್ಯಾತ್ಮದ ಜೊತೆ ತಳುಕು ಹಾಕಿ ತಮ್ಮದೇ ಶೈಲಿಯಲ್ಲಿ ಹಂಚಿಕೊಂಡರು. ಚಿತ್ರದಲ್ಲಿ ಉಗ್ರಂ ಮಂಜು, ಪ್ರಮೋದ್‌ ಶೆಟ್ಟಿ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತ, ಅರವಿಂದ್‌ ಛಾಯಾಗ್ರಹಣವಿದೆ. ಚಿತ್ರ ಫೆಬ್ರವರಿಯಲ್ಲಿ ತೆರೆ ಕಾಣಲಿದೆ.

ಟಾಪ್ ನ್ಯೂಸ್

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು

Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

12-

Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.