ತಮಿಳು ಸಿನಿಮಾಕ್ಕಾಗಿ ಕನ್ನಡ ಚಿತ್ರದ ಶೂಟಿಂಗ್ ಗೆ ಕೈ ಕೊಟ್ಟ ಹೀರೋಯಿನ್
Team Udayavani, May 8, 2017, 3:38 PM IST
ಬೆಂಗಳೂರು: ಅಲೆಮಾರಿ ಸಂತು ನಿರ್ದೇಶನದ ಕಾಲೇಜ್ ಕುಮಾರ್ ಚಿತ್ರದ ಹೀರೋಯಿನ್ ಸಂಯುಕ್ತ ಹೆಗಡೆ ಕೊನೆಯ ಹಂತದ ಚಿತ್ರೀಕರಣಕ್ಕೆ ಕೈ ಕೊಟ್ಟಿರುವುದಾಗಿ ಚಿತ್ರತಂಡ ಆರೋಪಿಸಿ ನಿರ್ಮಾಪಕರ ಸಂಘದ ಮೆಟ್ಟಿಲೇರಿದೆ ಎಂದು ಟಿವಿ9 ವರದಿ ಮಾಡಿದೆ.
ಕೆಂಡಸಂಪಿಗೆ ವಿಕ್ಕಿ ನಟನೆಯ ಕಾಲೇಜ್ ಕುಮಾರ್ ಸಿನಿಮಾದಲ್ಲಿ ಸಂಯುಕ್ತ ಹೆಗಡೆ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ. ಈಗಾಗಲೇ ಶೇ.80ರಷ್ಟು ಚಿತ್ರೀಕರಣ ಮುಗಿದಿದೆ. ಏತನ್ಮಧ್ಯೆ ತಮಿಳು ಸಿನಿಮಾದಲ್ಲಿ ನಟಿಸುವ ನಿಟ್ಟಿನಲ್ಲಿ ಸಂಯುಕ್ತ ಹೆಗಡೆ ಕನ್ನಡದ ಕಾಲೇಜ್ ಕುಮಾರ್ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಳ್ಳದೆ ಕಿರಿಕ್ ಮಾಡುತ್ತಿರುವುದಾಗಿ ಚಿತ್ರ ತಂಡ ಆರೋಪಿಸಿದೆ.
ಸಂಯುಕ್ತ ಹೆಗಡೆ ಕನ್ನಡದ ಕಾಲೇಜ್ ಕುಮಾರ್ ಹಾಗೂ ವಾಸು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಆದರೆ ತಮಿಳು ಚಿತ್ರದಲ್ಲಿ ನಟಿಸಲೇಬೇಕೆಂದು ಪಟ್ಟು ಹಿಡಿದಿರುವ ಸಂಯುಕ್ತ ಕಾಲೇಜ್ ಕುಮಾರ್ ಚಿತ್ರದ ಚಿತ್ರೀಕರಣಕ್ಕೆ ಕೈ ಕೊಟ್ಟಿರುವುದಾಗಿ ದೂರಿದೆ.
ನಾಯಕಿ ಸಂಯುಕ್ತಾರನ್ನು ನಿರ್ಮಾಪಕರ ಸಂಘಕ್ಕೆ ಕರೆಯಿಸಲಾಗಿತ್ತು. ಆಗ ಕನ್ನಡ ಮತ್ತು ತಮಿಳು ಚಿತ್ರದ ಡೇಟ್ ಹೊಂದಾಣಿಕೆ ಆಗದ ಕಾರಣ ಕಾಲೇಜ್ ಕುಮಾರ್ ಚಿತ್ರದಲ್ಲಿ ನಟಿಸಲು ಕಷ್ಟ ಎಂದು ಸಂಯುಕ್ತ ಹೆಗಡೆ ಹೇಳಿರುವುದಾಗಿ ನಿರ್ಮಾಪಕರ ಸಂಘದ ಗೌರವ ಕಾರ್ಯದರ್ಶಿ ಸೂರಪ್ಪ ಬಾಬು ತಿಳಿಸಿದ್ದಾರೆ.ತಮಿಳು ಚಿತ್ರದ ನಿರ್ಮಾಪಕರ ಜೊತೆ ಮಾತನಾಡಿ ಡೇಟ್ ತಿಳಿಸುವುದಾಗಿ ಹೇಳಿದ್ದರು.
ಸಂಯುಕ್ತ ಹೆಗಡೆ ಹೇಳೋದೇನು:
ತಮಿಳು ಹಾಗೂ ಕನ್ನಡದ ಕಾಲೇಜ್ ಕುಮಾರ್ ಚಿತ್ರದ ಡೇಟ್ ಕ್ಲ್ಯಾಶ್ ಆಗುತ್ತಿದೆ. ಹಾಗಾಗಿ ಡೇಟ್ ಹೊಂದಾಣಿಕೆ ಮಾಡಿಕೊಡಿ ಎಂದು ನಿರ್ಮಾಪಕ ಪದ್ಮನಾಭರಿಗೆ ಮನವಿ ಮಾಡಿಕೊಂಡಿದ್ದೆ. ಡೇಟ್ ಹೊಂದಾಣಿಕೆ ಮಾಡಿಕೊಟ್ಟರೆ ಖಂಡಿತಾ ಕಾಲೇಜ್ ಕುಮಾರ್ ಚಿತ್ರದಲ್ಲಿ ನಟಿಸುವುದಾಗ ಸಂಯುಕ್ತ ಹೆಗಡೆ ಖಾಸಗಿ ಟಿವಿ ಚಾನೆಲ್ ವೊಂದಕ್ಕೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.