ಮುಂದೆ ಬಂದ್ರೆ ಹಾಯ್ ಬಹುದು
Team Udayavani, Jan 11, 2017, 11:02 AM IST
ಒಂದೆರಡು ವರ್ಷಗಳ ಹಿಂದೆ “ಹಾಯ್’ ಎಂಬ ಸಿನಿಮಾವೊಂದು ಸೆಟ್ಟೇರಿದ ಬಗ್ಗೆ ನಿಮಗೆ ನೆನಪಿರಬಹುದು. ಆ ಸಿನಿಮಾ ಏನಾಯಿತು ಎಂದು ನೀವು ಕೇಳುವ ಹೊತ್ತಿಗೆ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ಆಗಿದೆ. ಚಿತ್ರತಂಡ ಜೊತೆಯಾಗಿ ಆಡಿಯೋ ಬಿಡುಗಡೆ ಮಾಡಿ ಖುಷಿಪಟ್ಟಿದೆ. ರಾಘವೇಂದ್ರ ಕಠಾರೆ ಹಾಗೂ ಸಿ.ರಾಜೇಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಜಿ.ಎನ್. ರುದ್ರೇಶ್ ಈ ಸಿನಿಮಾದ ನಿರ್ದೇಶಕರು. ಯಶ್‌ರಾಜ್ ದೇವ್ ಹಾಗೂ ಸಾನ್ಯ ಈ ಚಿತ್ರದ ನಾಯಕ-ನಾಯಕಿ.
ನಿರ್ದೇಶಕ ರುದ್ರೇಶ್ ಹೇಳುವಂತೆ, “ಹಾಯ್’ ಒಂದು ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾವಾಗಿದ್ದು ಎಲ್ಲಾ ವರ್ಗದ ಪ್ರೇಕ್ಷಕರು ಇಷ್ಟಪಡುವ ವಿಶ್ವಾಸವಿದೆಯಂತೆ. ಚಿತ್ರದಲ್ಲಿ ಲವ್‌ಸ್ಟೋರಿ ಜೊತೆಗೆ ಕಾಮಿಡಿಯೂ ಇದ್ದು, ಇಂದಿನ ಟ್ರೆಂಡ್‌ಗೆ ತಕ್ಕಂತೆ ಮೂಡಿಬಂದ ವಿಶ್ವಾಸ ನಿರ್ದೇಶಕರದು. ನಿರ್ಮಾಪಕ ರಾಘವೇಂದ್ರ ಕಠಾರೆ ತಮಗೆ ಬೆಂಬಲವಾಗಿ ನಿಂತವರಿಗೆ ಥ್ಯಾಂಕ್ಸ್ ಹೇಳುವಷ್ಟಕ್ಕೆ ತಮ್ಮ ಮಾತು ಮುಗಿಸಿದರು. ನಾಯಕ ಯಶ್‌ರಾಜ್‌ಗೆ ಈ ಸಿನಿಮಾ ಮೂಲಕ ಗೆಲುವು ಸಿಗುವ ವಿಶ್ವಾಸವಿದೆಯಂತೆ.
ಅವರ ಗೆಳೆಯನ ಜೀವನದಲ್ಲಿ ನಡೆದ ಘಟನೆಯನ್ನಿಟ್ಟುಕೊಂಡು ಈ ಸಿನಿಮಾದ ಕಥೆ ಹೆಣೆಯಲಾಗಿದೆಯಂತೆ. ಎಲ್ಲರ ಪ್ರೋತ್ಸಾಹದಿಂದ ಚೆನ್ನಾಗಿ ನಟಿಸಿದ್ದೇನೆ ಎಂಬ ವಿಶ್ವಾಸ ಯಶ್‌ರಾಜ್ ಅವರಿಗಿದೆಯಂತೆ. ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದು, ಹಾಡುಗಳು ಸೊಗಸಾಗಿ ಮೂಡಿಬಂದಿವೆಯಂತೆ. ವಿ. ನಾಗೇಂದ್ರಪ್ರಸಾದ್ ಅವರ ಸಾಹಿತ್ಯ ಚಿತ್ರಕ್ಕಿದೆ. ಮುಂದಿನ ತಿಂಗಳು ಚಿತ್ರ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡಕ್ಕಿದೆ. ದಾವಣಗೆರೆ, ಮಂಗಳೂರು, ಚಿಕ್ಕಮಗಳೂರು ಹಾಗೂ ಬ್ಯಾಂಕಾಕ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ನಾಯಿ ಕಚ್ಚಿ 4 ವರ್ಷದ ಬಾಲಕನಿಗೆ ಗಾಯ: ಶ್ವಾನ ಮಾಲಿಕನ ವಿರುದ್ಧ ಪ್ರಕರಣ ದಾಖಲು
chikkamagaluru: ಹೆಬ್ಬಾಳ್ಕರ್ ನಿಂದನೆ ಪ್ರಕರಣ; ಸಿ.ಟಿ.ರವಿಗೆ ಬೆದರಿಕೆ ಪತ್ರ
Bengaluru: ಜಗಳ ಬಿಡಿಸಲು ಬಂದ ಮಾವನ ಕೊಂದ ಅಳಿಯ!
Bengaluru: ಬಿಯರ್ ಬಾಟಲಿ ಕಸಿದಿದ್ದಕ್ಕೆ ಸ್ನೇಹಿತನ ಹತ್ಯೆ; 7 ಜನ ಸೆರೆ
Bihar; ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂ ಪಡೆಯಿರಿ: ಹೀಗೊಂದು ಜಾಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.