ಗಂಡಾಂತರದಿಂದ ಪಾರಾದ ಚಂಬಲ್!; ನಾಳೆ ನಿಗದಿತವಾಗಿಯೇ ಬಿಡುಗಡೆ
Team Udayavani, Feb 21, 2019, 2:49 PM IST
ಬೆಂಗಳೂರು: ದಿನೇಶ್ ಕುಮಾರ್ ಹಾಗೂ ಮ್ಯಾಥ್ಯೂ ವರ್ಗೀಸ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಚಂಬಲ್ ಚಿತ್ರ ಕಡೇ ಘಳಿಗೆಯಲ್ಲಿ ಗಂಡಾಂತರವೊಂದರಿಂದ ಪಾರಾಗಿದೆ. ಈ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಡಿ ಕೆ ರವಿ ಪೋಶಕರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಇಂದು ವಿಚಾರಣೆ ನಡೆಸಿರುವ ನ್ಯಾಯಾಧೀಶರು ಈ ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಚಂಬಲ್ ಚಿತ್ರದ ಬಗ್ಗೆ ವಿವಾದ ಹೊತ್ತಿಕೊಂಡಿದ್ದೇ ಅದರ ಟ್ರೈಲರ್ ಹೊರ ಬಂದ ಬಂದ ನಂತರದಲ್ಲಿ. ಇದು 2015ರಲ್ಲಿ ದುರಂತ ಸಾವಿಗೀಡಾಗಿದ್ದ ಐಎಎಸ್ ಅಧಿಕಾರಿ ಡಿಕೆ ರವಿ ಜೀವನ ಕಥೆ ಹೊಂದಿರೋ ಚಿತ್ರ ಎಂಬ ಬಗ್ಗೆಯೂ ಚರ್ಚೆಗಳಾಗಿದ್ದವು. ತದ ನಂತರದಲ್ಲಿ ಕೆಲ ಮಾಧ್ಯಮಗಳಲ್ಲಿಯೂ ಇದಕ್ಕೆ ಪೂರಕವಾದ ವರದಿಗೆಳೇ ಬಂದಿದ್ದವು. ಇದನ್ನು ಕಂಡ ರವಿ ಅವರ ಹೆತ್ತವರು ಫಿಲಂ ಚೇಂಬರ್‌ಗೂ ದೂರು ಸಲ್ಲಿಸಿದ್ದರು. ಟ್ರೆ„ಲರ್ ನೋಡಿದರೆ ಇದು ತಮ್ಮ ಮಗನ ಕಥೆ ಹೊಂದಿರೋ ಚಿತ್ರ ಎಂದು ಸ್ಪ$ಷ್ಟವಾಗುತ್ತದೆ. ರವಿ ಬಗ್ಗೆ ಅವಹೇಳನಕಾರಿ ಅಂಶಗಳಿರೋದೂ ಗೊತ್ತಾಗುತ್ತಿದೆ. ಒಂದು ವೇಳೆ ಚಿತ್ರದಲ್ಲಿ ಅಂಥಾದ್ದೇನಾದರೂ ಇದ್ದರೆ ರವಿ ಅವರ ಬಗ್ಗೆ ಸಾರ್ವಜನಿಕರಲ್ಲಿ ಕೆಟ್ಟ ಅಭಿಪ್ರಾಯ ಬರುತ್ತದೆ ಅಂತ ಆರೋಪಿಸಿ ರವಿ ಪೋಶಕರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಚಂಬಲ್ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿದ್ದರು.
ಬಗ್ಗೆ ಸಾಧ್ಯಂತವಾಗಿ ವಿಚಾರಣೆ ನಡೆಸಿರುವ ನ್ಯಾಯಾಧೀಶರು ಇಷ್ಟು ತಡವಾಗಿ ಚಿತ್ರ ಪ್ರದರ್ಶನಕ್ಕೆ ನಿಶೇಧಾಜ್ಞೆ ನೀಡಲು ಸಾಧ್ಯವಿಲ್ಲ. ಇದಕ್ಕೆ ಬೇಕಾದ ಪೂರಕ ಸಾಕ್ಷಿಗಳೂ ಇಲ್ಲದಿರೋದರಿಂದ ಪತ್ರಿಕೆಗಳ ವರದಿಯನ್ನು ಮಾತ್ರವೇ ಸಾಕ್ಷಿಯಾಗಿ ಪರಿಗಣಿಸಲು ಸಾಧ್ಯವಿಲ್ಲ ಅಂದಿದ್ದಾರೆ. ಈ ಕಾರಣದಿಂದಲೇ ಅರ್ಜಿಯನ್ನು ವಜಾಗೊಳಿಸಿದ್ದಾರೆ.
ನಾಳೆ ನಿಗದಿತವಾಗಿಯೇ ಚಂಬಲ್ ಚಿತ್ರ ಬಿಡುಗಡೆಗೊಳ್ಳಲಿದೆ. ಇಡೀ ಚಿತ್ರ ತಂಡ ಈ ತೀರ್ಪನಿಂದ ನಿರಾಳವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.