YouTube ನಲ್ಲಿ ಹೊಂದಿಸಿ ಬರೆಯಿರಿ; ಉಚಿತವಾಗಿ ನೋಡಿ, ಇಷ್ಟವಾದರೆ ಕಾಸು ಹಾಕಿ…
Team Udayavani, May 21, 2024, 3:25 PM IST
ರಾಮೇನಹಳ್ಳಿ ಜಗನ್ನಾಥ ನಿರ್ದೇಶನದ ಹಾಗೂ ಸಂಡೇ ಸಿನಿಮಾಸ್ ನಿರ್ಮಾಣ ಸಂಸ್ಥೆಯ ಚೊಚ್ಚಲ ಸಿನಿಮಾ ಹೊಂದಿಸಿ ಬರೆಯಿರಿ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.
ಅಮೆಜಾನ್ ಪ್ರೈಮ್ನಲ್ಲಿ ಸದ್ಯ ಪ್ರಸಾರ ಆಗುತ್ತಿದ್ದರೂ, ಇದು ಭಾರತ, ಯುಎಸ್ ಎ ಮತ್ತು ಯುಕೆ ಹೊರತಾಗಿ ಬೇರೆ ದೇಶಗಳಲ್ಲಿ ಸ್ಟ್ರೀಮ್ ಆಗುತ್ತಿಲ್ಲ. ಹಾಗಾಗಿ ಉಳಿದ ಎಲ್ಲ ದೇಶಗಳ ಕನ್ನಡಿಗರಿಗೆ ತಲುಪಬೇಕು.ಥಿಯೇಟರ್ನಲ್ಲಿ ಚಿತ್ರ ನೋಡಿರದ ಹಾಗೂ ಒಟಿಟಿ ಚಂದಾದಾರರ ಆಗದ ಎಲ್ಲರಿಗೂ ಚಿತ್ರ ತಲುಪಲಿ ಎನ್ನುವ ಉದ್ದೇಶ ಚಿತ್ರತಂಡ ಈ ನಿರ್ಧಾರ ಮಾಡಿದೆ.
ಹೊಂದಿಸಿ ಬರೆಯಿರಿ ಸಿನಿಮಾಗೆ ಹಾಕಿದ್ದ ಹಣ ವಾಪಸ್ ಆಗದಿದ್ದರೂ ಚಿತ್ರತಂಡ ಇಂತಹ ಗಟ್ಟಿ ನಿರ್ಧಾರಕ್ಕೆ ಬಂದಿದೆ. ಹಾಗಂತ ಯೂಟ್ಯೂಬ್ ನಲ್ಲಿ ರೆಂಟಲ್ ಮೊಡೆಲ್ ಆಯ್ಕೆ ಮಾಡಿ ಒಂದಿಷ್ಟು ಹಣ ನಿಗದಿ ಪಡಿಸಿ ನೋಡಿ ಎಂದು ಕೇಳುವುದಕ್ಕಿಂತ, ಉಚಿತವಾಗಿ ಯೂಟ್ಯೂಬ್ನಲ್ಲಿ ಎಲ್ಲರೂ ಸಿನಿಮಾ ನೋಡಲಿ, ಅವರಿಗೆ ಸಿನಿಮಾ ಇಷ್ಟವಾದರೆ ಮಾತ್ರ ತೋಚಿದಷ್ಟು ಹಣ ಕೊಡಲಿ ಎಂಬ ನಿರ್ಧಾರ ಮಾಡಿದೆ ಚಿತ್ರತಂಡ.
“ನಮ್ಮ ಹೊಂದಿಸಿ ಬರೆಯಿರಿ ಚಿತ್ರದ ಲಿಂಕ್ ಅನ್ನು ಎಲ್ಲರಿಗೂ ತಲುಪಿಸಿ. ನಮ್ಮ ಸಂಸ್ಥೆಯ ಮುಂದಿನ ಸಿನಿಮಾಗಳಿಗೆ ಪೋ›ತ್ಸಾಹಿಸಿ, ಈಗಾಗಲೇ ಪ್ರೀ ಪೊ›ಡಕ್ಷನ್ ಹಂತದಲ್ಲಿರುವ ನಮ್ಮ ಮುಂದಿನ ಚಿತ್ರದ ವಿವರಣೆಯನ್ನು ಆದಷ್ಟು ಬೇಗ ಹಂಚಿಕೊಳ್ಳುತ್ತೇವೆ’ಎಂದಿದ್ದಾರೆ ರಾಮೇನಹಳ್ಳಿ ಜಗನ್ನಾಥ್.
ರಾಮೇನಹಳ್ಳಿ ಜಗನ್ನಾಥ ನಿರ್ದೇಶನದ ಜೊತೆಗೆ ತಮ್ಮ ಸ್ನೇಹಿತರ ಜೊತೆಗೂಡಿ ಸಂಡೇ ಸಿನಿಮಸ್ ಬ್ಯಾನರ್ನಡಿ ನಿರ್ಮಾಣ ಮಾಡಿರುವ ಹೊಂದಿಸಿ ಬರೆಯಿರಿ ಸಿನಿಮಾದಲ್ಲಿ ಪ್ರವೀಣ್ ತೇಜ್, ನವೀನ್ ಶಂಕರ್, ಶ್ರೀ ಮಹದೇವ್, ಅನಿರುದ್ಧ್ ಆಚಾರ್ಯ, ಭಾವನಾ ರಾವ್, ಐಶಾನಿ ಶೆಟ್ಟಿ, ಸಂಯುಕ, ಅರ್ಚನಾ ಜೋಯಿಸ್ ಹಲವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Moksha Kushal: ಹಾಟ್ ಫೋಟೋಶೂಟ್ನಲ್ಲಿ ಮೋಕ್ಷಾ ಮಿಂಚು
Bhairadevi; ಈ ಚಿತ್ನ ನನಗೆ ಆಪ್ತಮಿತ್ರ ನೆನಪಿಸಿತು…: ರಮೇಶ್ ಅರವಿಂದ್
Sandalwood; ‘ಮುಂದಿನ ಭಾಗದಲ್ಲಿ ನಿರೀಕ್ಷಿಸಿ..’ ಸ್ಯಾಂಡಲ್ವುಡ್ನ ಪಾರ್ಟ್-2 ಕ್ರೇಜ್
Upendra Movie: ರೀ ರಿಲೀಸ್ ನಲ್ಲೂ ʼಉಪೇಂದ್ರʼನಿಗೆ ಜೈ ಎಂದ ಪ್ರೇಕ್ಷಕ
Nite Road; ಇಂದು ತೆರೆಗೆ ಬರುತ್ತಿದೆ ಕ್ರೈಂ ಕಹಾನಿ ʼನೈಟ್ ರೋಡ್ʼ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.