ಹೃದಯ ಬಡಿತ
Team Udayavani, Aug 30, 2018, 11:20 AM IST
ಪ್ರಶಾಂತ್ ರಾಜ್ ಅಭಿನಯದ “ಒರಟ ಐ ಲವ್ ಯೂ’ ಚಿತ್ರ ನೆನಪಿರಬಹುದು. 11 ವರ್ಷಗಳ ಹಿಂದೆ ಈ ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರದ ಮೂಲಕ ಸೌಮ್ಯ ನಾಯಕಿಯಾಗಿದ್ದರು. ಆ ಚಿತ್ರ ಯಶಸ್ವಿಯಾದರೂ, ಸೌಮ್ಯ ಮಾತ್ರ ಇನ್ನೊಂದು ಚಿತ್ರದಲ್ಲಿ ನಟಿಸಿರಲಿಲ್ಲ. ಈಗ 11 ವರ್ಷಗಳ ನಂತರ ಸೌಮ್ಯ, ಹೃದಯ ಎಂಬ ಹೆಸರಿನಲ್ಲಿ ಎರಡನೆಯ ಇನ್ನಿಂಗ್ಸ್ ಪ್ರಾರಂಭಿಸುವುದಕ್ಕೆ ತಯಾರಾಗಿದ್ದಾರೆ.
ಈಗಾಗಲೇ ಅವರು ಶಿವಗಣೇಶ್ ನಿರ್ದೇಶನದ “ತ್ರಾಟಕ’ ಎಂಬ ಚಿತ್ರದಲ್ಲಿ ನಟಿಸಿದ್ದು, ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎಲ್ಲಾ ಸರಿ, ಸೌಮ್ಯ ಅಲಿಯಾಸ್ ಹೃದಯ ಇಷ್ಟು ವರ್ಷಗಳ ಯಾಕೆ ನಟಿಸಲಿಲ್ಲ ಎಂಬ ಪ್ರಶ್ನೆ ಬರಬಹುದು. ಈ ಪ್ರಶ್ನೆಗೆ, “ಆ ಸಂದರ್ಭದಲ್ಲಿ ನಾನು ಅಷ್ಟೊಂದು ಸೀರಿಯಸ್ ಆಗಿರಲಿಲ್ಲ’ ಎಂಬ ಉತ್ತರ ಅವರಿಂದ ಬರುತ್ತದೆ. “ನಾನು “ಒರಟ’ ಚಿತ್ರದಲ್ಲಿ ನಟಿಸುವಾಗ ಹತ್ತನೇ ಕ್ಲಾಸಿನಲ್ಲಿದ್ದೆ.
ಅದಾದ ನಂತರ ತೆಲುಗಿನಲ್ಲಿ “ದಮ್ಮುನೋಡು’ ಎಂಬ ಚಿತ್ರದಲ್ಲಿ ನಟಿಸಿದೆ. ಆಗ ನಟನೆಯ ಬಗ್ಗೆ ನನಗೆ ಅಷೊಂದು ಸೀರಿಯಸ್ ಇರಲಿಲ್ಲ. ಆ ನಂತರ ಅವಕಾಶಗಳು ಬಂದವು. ನಾನೇ ದೂರ ಉಳಿದೆ. ಒಂದು ಬ್ರೇಕ್ ತೆಗೆದುಕೊಂಡು ಓದು ಮುಂದುವರೆಸಿದೆ. ನಂತರ ಇಂಜಿನಿಯರಿಂಗ್ ಮುಗಿಸಿದೆ. ಓದು ಮುಗಿದ ಮೇಲೆ ಚಿತ್ರರಂಗದಲ್ಲಿ ಮುಂದುವರೆಯಬೇಕು ಎಂದನಿಸಿತು.
ಆದರೆ, ನನಗೆ ಸುಮ್ಮನೆ ಬರುವುದಕ್ಕೆ ಇಷ್ಟ ಇರಲಿಲ್ಲ. ಒಂದಿಷ್ಟು ತಯಾರಿ ಮಾಡಿಕೊಂಡೆ. ಜಿಮ್‌ಗೆ ಹೋದೆ. ಡ್ಯಾನ್ಸ್ ಕಲಿತೆ. ಓಕೆ ಅನಿಸಿದ ನಂತರ ಚಿತ್ರರಂಗಕ್ಕೆ ವಾಪಸ್ಸು ಬಂದೆ’ ಎನ್ನುತ್ತಾರೆ ಹೃದಯ. “ತ್ರಾಟಕ’ ಚಿತ್ರದಲ್ಲಿ ಸೈಕ್ಯಾಟ್ರಿಸ್ಟ್ ಪಾತ್ರ ನಿರ್ವಹಿಸಿರುವ ಹೃದಯಗೆ, ಒಂದು ಗಟ್ಟಿ ಪಾತ್ರ ಸಿಕ್ಕಿದೆಯಂತೆ. “ಇಲ್ಲಿ ನಾನು ಸೈಕ್ಯಾಟ್ರಿಸ್ಟ್ ಪಾತ್ರ ಮಾಡಿದ್ದೇನೆ.
ನಾಯಕ ಮಾನಸಿಕ ಒತ್ತಡದಿಂದ ಬಳಲುತ್ತಿರುತ್ತಾನೆ. ಅದರಿಂದ ಅವನನ್ನು ಹೇಗೆ ಆಚೆಗೆ ತರುತ್ತೀನಿ ಮತ್ತು ಆ ನಂತರ ನಾಯಕ ಹೇಗೆ ಒಂದು ಕ್ಲಿಷ್ಟವಾದ ಕೇಸ್ ಹೇಗೆ ಬಗೆಹರಿಸುತ್ತಾನೆ ಎನ್ನುವುದೇ ಚಿತ್ರದ ಕಥೆ’ ಎನ್ನುತ್ತಾರೆ ಹೃದಯ. ಈಗ ತಮಗೆ ಸೀರಿಯಸ್‌ನೆಸ್ ಬಂದಿದೆ ಎನ್ನುವ ಹೃದಯ, ಮುಂದಿನ ದಿನಗಳಲ್ಲಿ ಇನ್ನೊಂದಿಷ್ಟು ಚಿತ್ರಗಳಲ್ಲಿ, ಒಳ್ಳೆಯ ಪಾತ್ರಗಳನ್ನು ಮಾಡುವ ನಿರೀಕ್ಷೆಯಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.