ಖಾಲಿ ಹೃದಯದೊಂದಿಗೆ ಬಂದವರು ….
Team Udayavani, Oct 4, 2018, 4:56 PM IST
ರಾತ್ರಿ ಕಳೆದು ಬೆಳಗಾಗುವಷ್ಟರಲ್ಲೇ ಜೋರು ಸುದ್ದಿಯಾಗಿದ್ದ ನಟಿ ಪ್ರಿಯಾ ವಾರಿಯರ್ ಅವರನ್ನು ಗಾಂಧಿನಗರಕ್ಕೆ ಕರೆತಂದು, ಚಿತ್ರ ಮಾಡುವುದಾಗಿ ಹೇಳಿಕೊಂಡಿದ್ದ ನಟ ಯೋಗಿ, ಆಮೇಲೆ ಎಲ್ಲೂ ಸುದ್ದಿಯಾಗಿರಲೇ ಇಲ್ಲ. ಈಗ ಅದೇ ಯೋಗಿ ಮತ್ತೆ ಸುದ್ದಿಯಾಗಿದ್ದಾರೆ. ಆದರೆ, ಪ್ರಿಯಾ ವಾರಿಯರ್ ಅವರನ್ನು ಕರೆತರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆಂಬುದು ಅಷ್ಟೇ ಸ್ಪಷ್ಟ. ಇಷ್ಟಕ್ಕೂ ಯೋಗಿ ಪುನಃ ಮಾಧ್ಯಮ ಮುಂದೆ ಬರಲು ಕಾರಣ, “ಹೃದಯ ಖಾಲಿ ಹಾಳೆ’ ಚಿತ್ರ. ಈ ಚಿತ್ರದ ಮೂಲಕ ಅವರು ನಾಯಕರಾಗುತ್ತಿದ್ದಾರೆ. ಇವರನ್ನು ಹೀರೋ ಮಾಡಲು ಹೊರಟಿರುವುದು ಲಕ್ಷ್ಮಣ್. ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯೂ ಲಕ್ಷ್ಮಣ್ ವಹಿಸಿಕೊಂಡಿದ್ದಾರೆ.
ಲಕ್ಷ್ಮಣ್ ಅವರಿಗೇಕೆ ಯೋಗಿ ಇಷ್ಟವಾದರು ಎಂಬ ಪ್ರಶ್ನೆಗೆ, ಯೋಗಿ ಇತ್ತೀಚೆಗೆ ತಮಿಳು ಚಿತ್ರವೊಂದು ಮಾಡಲು ಅಣಿಯಾಗಿದ್ದರು. ಅಲ್ಲಿ, ಕನ್ನಡದ ನೆಲ, ಜಲ ಕುರಿತು ಮಾತನಾಡಿದ್ದರು. ಆದರೆ, ತಮಿಳು ಸಿನಿಮಾದವರು ಯೋಗಿಗೆ ಅಲ್ಲಿಂದ ಗೇಟ್‌ಪಾಸ್ ಕೊಟ್ಟಿದ್ದರು. ಅದನ್ನು ಗಮನಿಸಿದ ನಿರ್ದೇಶಕ ಲಕ್ಷ್ಮಣ್, ಯೋಗಿ ಕರೆದು ಅವಕಾಶ ಕೊಟ್ಟಿದ್ದಾರೆ. ನಿರ್ದೇಶಕ ಲಕ್ಷ್ಮಣ್ ಅವರಿಗೆ, ಒಂದು ಸಿನಿಮಾ ಮಾಡಬೇಕು. ಅದರಲ್ಲೂ ಯೋಗಿಗೊಂದು ಅವಕಾಶ ಕೊಡಬೇಕು ಅಂತ ಅನಿಸಿದ್ದು, ಕನ್ನಡದ ನಟನಿಗೆ ತಮಿಳು ಚಿತ್ರೋದ್ಯಮದಲ್ಲಿ ಅನ್ಯಾಯವಾಗಿದ್ದು ಮತ್ತು ಆ ನಟ ಕನ್ನಡದ ನೆಲ, ಜಲ ಪರವಾಗಿ ಮಾತನಾಡಿದ್ದಕ್ಕೆ ತಮಿಳು ಚಿತ್ರದಿಂದ ಅವರನ್ನು ಕೈ ಬಿಟ್ಟಿದ್ದನ್ನು ನೋಡಿ ಬೇಸರವಾಗಿ ನಿರ್ದೇಶಕರು ಯೋಗಿಗೆ ಈ ಅವಕಾಶ ಕೊಟ್ಟಿದ್ದಾರೆ.
ಅಂದಹಾಗೆ, ಶೀರ್ಷಿಕೆ ಹೇಳುವಂತೆ ಇದೊಂದು ಲವ್‌ಸ್ಟೋರಿ. ಹಾಗಂತ ಬರೀ ಲವ್‌ಸ್ಟೋರಿ ಇಲ್ಲ. ಗೆಳೆತನಕ್ಕೂ ಹೆಚ್ಚು ಜಾಗವಿದೆ. ಗೆಳೆತನ ಮತ್ತು ಪ್ರೀತಿ ಎರಡೂ ಇಲ್ಲಿದೆ. ಈ ಎರಡನ್ನು ತಪ್ಪಾಗಿ ಅರ್ಥೈಸಿಕೊಂಡರೆ ಏನೆಲ್ಲಾ ಆಗಿ ಹೋಗುತ್ತೆ ಎಂಬುದು ಕಥೆಯಂತೆ. ಇನ್ನು, ಈ ಚಿತ್ರಕ್ಕೆ ಅಭಿಲಾಷ್ ಎಂಬ ಮತ್ತೂಬ್ಬ ನಾಯಕ ಕೂಡ ನಟಿಸುತ್ತಿದ್ದಾರೆ. ಇವರಿಗೆ ಆರ್ಯನ್ ನಾಯಕಿ. ಈ ಚಿತ್ರಕ್ಕೆ ಸತ್ಯನಾರಾಯಣ್, ಎನ್. ಮಂಜುನಾಥ್, ವಿ. ರಾಜು ಮತ್ತು ಸುಬ್ರಮಣ್ಯ ನಿರ್ಮಾಪಕರಿಗೆ ಸಾಥ್ ಕೊಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ
HMPV Virus: ಭಾರತದ ಮೊದಲ ಎಚ್‌ಎಂಪಿವಿ ಸೋಂಕು ಪ್ರಕರಣ ಬೆಂಗಳೂರಿನಲ್ಲಿ ಪತ್ತೆ
Toxic: ಯಶ್ ಬರ್ತ್ ಡೇಗೆ ʼಟಾಕ್ಸಿಕ್ʼನಿಂದ ಸಿಗಲಿದೆ ಬಿಗ್ ಅಪ್ಡೇಟ್; ಫ್ಯಾನ್ಸ್ ಥ್ರಿಲ್
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.