ಭರದಿಂದ ಸಾಗಿದ ಹಫ್ತಾ ಡಬ್ಬಿಂಗ್ ಕಾರ್ಯ
Team Udayavani, Jan 5, 2019, 6:07 AM IST
ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ “ಹಫ್ತಾ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿಡುವಿಲ್ಲದೆ ಸಾಗುತ್ತಿದೆ. ಇತ್ತೀಚೆಗೆ ಚಿತ್ರದ ಡಬ್ಬಿಂಗ್ ಕಾರ್ಯ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಆರಂಭವಾಗಿದೆ. ಮೈತ್ರಿ ಪೊ›ಡಕ್ಷನ್ ಬ್ಯಾನರ್‌ನಲ್ಲಿ ಮೈತ್ರಿ ಮಂಜುನಾಥ್ ನಿರ್ಮಾಣದ “ಹಫ್ತಾ’ ಚಿತ್ರಕ್ಕೆ ಪ್ರಕಾಶ್ ಹೆಬ್ಬಳ್ ನಿರ್ದೇಶನವಿದೆ.
ಚಿತ್ರದ ದೃಶ್ಯಗಳನ್ನು ಸಿನಿಟೆಕ್ ಸೂರಿ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಚಿತ್ರಕ್ಕೆ ರಘುನಾಥ್ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಜಿ. ಯಾಡ್ಲಿನಾ ಸಂಗೀತ ನಿರ್ದೇಶನವಿದ್ದು, ಗೌತಮ್ ಶ್ರೀವತ್ಸ ಹಿನ್ನೆ ಸಂಗೀತ ನೀಡುತ್ತಿದ್ದಾರೆ. ಜೈ ನೃತ್ಯ ಸಂಯೋಜನೆ ಮತ್ತು ರಾಕಿ ರಮೇಶ್ ಸಾಹಸ ಸಂಯೋಜನೆಯಿದೆ.
ಭೂಗತ ಜಗತ್ತಿನ “ಹಫ್ತಾ’ ವಸೂಲಿ ಮತ್ತು ಸುಫಾರಿ ಕಿಲ್ಲರ್‌ಗಳ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ವರ್ಧನ್ ತೀರ್ಥಹಳ್ಳಿ, ಬಿಂಬ ಶ್ರೀನಿವಾಸ್, ರಾಘವ್ ನಾಗ್, ಸೌಮ್ಯ, ಬಲರಾಜ್ ವಾಡಿ, ದಶಾವರ ಚಂದ್ರು, ಉಗ್ರಂ ರವಿ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರತಂಡದ ಯೋಜನೆಯಂತೆ ಎಲ್ಲವೂ ನಡೆದರೆ, ಮುಂದಿನ ಫೆಬ್ರವರಿ ಅಂತ್ಯಕ್ಕೆ “ಹಫ್ತಾ’ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.