Hulinayaka First look: ಹುಲಿನಾಯಕ ಫಸ್ಟ್ ಲುಕ್
Team Udayavani, Sep 6, 2023, 4:38 PM IST
ಈಗಾಗಲೇ “ಅನ್‌ಲಾಕ್ ರಾಘವ’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ನಾಯಕ ನಟನಾಗಿ ಎಂಟ್ರಿಕೊಡಲು ಸಿದ್ಧತೆ ಮಾಡಿಕೊಂಡಿರುವ ನವ ನಟ ಮಿಲಿಂದ್ ಗೌತಮ್, ಮೊದಲ ಸಿನಿಮಾದ ಬಿಡುಗಡೆಗೂ ಮೊದಲೇ ತಮ್ಮ ಎರಡನೇ ಸಿನಿಮಾಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಹೌದು, ಮಿಲಿಂದ್ ಗೌತಮ್ ಸದ್ಯ “ಹುಲಿ ನಾಯಕ’ ಎಂಬ ಸಿನಿಮಾಕ್ಕೆ ನಾಯಕನಾಗಿ ಆಯ್ಕೆಯಾಗಿದ್ದು, ಇತ್ತೀಚೆಗೆ ಈ ಸಿನಿಮಾದ ಮೋಶನ್ ಪೋಸ್ಟರ್ ಬಿಡುಗಡೆಯಾಗಿದೆ. ನಟ ಸುದೀಪ್, ಧನಂಜಯ್, ವಸಿಷ್ಠ ಸಿಂಹ, ಪ್ರೇಮ್, ಖ್ಯಾತ ನಿರ್ದೇಶಕ ಚೇರನ್, ನಟಿಯರಾದ ಪೂಜಾ ಗಾಂಧಿ, ಅನಿತಾ ಭಟ್, ಸಂಜನಾ ಗಲ್ರಾನಿ ಸೇರಿದಂತೆ ಚಿತ್ರರಂಗದ ಅನೇಕ ಕಲಾವಿದರು, ತಂತ್ರಜ್ಞರು “ಹುಲಿ ನಾಯಕ’ ಸಿನಿಮಾದ ಮೋಶನ್ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದರು.
“ಮಯೂರ ಮೋಶನ್ ಪಿಕ್ಚರ್’ ಬ್ಯಾನರಿನಲ್ಲಿ ಮಂಜುನಾಥ್ ಡಿ. ನಿರ್ಮಾಣ ಮಾಡುತ್ತಿರುವ ಹುಲಿ ನಾಯಕ’ ಸಿನಿಮಾಕ್ಕೆ ಡಿ. ಜೆ. ಚಕ್ರವರ್ತಿ ನಿರ್ದೇಶನವಿದೆ.
“ಹುಲಿ ನಾಯಕ’ ಸಿನಿಮಾದ ಐದು ಹಾಡು ಗಳಿಗೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸುತ್ತಿದ್ದಾರೆ. ಯೋಗೇ ಶ್ವರನ್ ಛಾಯಾಗ್ರಹಣ, ಮಧು ತುಂಬನಕೆರೆ ಸಂಕಲನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
Sadalwood: ಶ್ರೀಮುರಳಿ ಬರ್ತ್‌ಡೇಗೆ ಎರಡು ಚಿತ್ರ ಘೋಷಣೆ
Actor Darshan: ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದರ್ಶನ್
BBK11: ಚೈತ್ರಾಳನ್ನು ದೂಡಿದ ರಜತ್.. ಮೈ ಮುಟ್ಟಿದ್ದಕ್ಕೆ ಫೈಯರ್ ಬ್ರ್ಯಾಂಡ್ ಗರಂ
Beguru Colony Movie: ಟೀಸರ್‌ನಲ್ಲಿ ಬೇಗೂರು ಕಾಲೋನಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.